ಕರಣ್ ಜೋಹರ್ ಮುಂದಿನ ಸಿನಿಮಾದಲ್ಲಿ ಸಲ್ಲು ಜತೆ ರೊಮ್ಯಾನ್ಸ್ ಮಾಡೋ ಆ ಸೌತ್‌ ನಟಿ ಯಾರು?

Salman Khan Next Movie: ಜವಾನ್‌ನಲ್ಲಿ ಶಾರುಖ್‌ ಖಾನ್‌ ಮತ್ತು ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಎಲ್ಲರೂ ಸಖತ್‌ ಇಷ್ಟಪಡುತ್ತಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಾಲಿವುಡ್‌ ಸೂಪರ್‌ಸ್ಟಾರ್ ಶೀಘ್ರದಲ್ಲೇ ಸೌತ್‌ ನಟಿಯ ಜೊತೆ ಜೋಡಿಯಾಗಲು ಸಿದ್ಧರಾಗಿದ್ದಾರೆ.

Written by - Savita M B | Last Updated : Sep 16, 2023, 11:54 AM IST
  • ಜವಾನ್‌ ಸಿನಿಮಾ ಮೂಲಕ ಸೌತ್‌ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟರು.
  • ಇದೀಗ ಸಲ್ಮಾನ್ ಖಾನ್ ಅವರು ಫೇಮಸ್‌ ಸೌತ್‌ ನಟಿಯ ಜೊತೆಯಲ್ಲಿ ರೋಮ್ಯಾನ್ಸ್‌ ಮಾಡಲಿದ್ದಾರೆ
  • ಹಾಗಾದರೆ ಯಾರು ಆ ನಟಿ ಅಂತೀರಾ ಈ ಸ್ಟೋರಿ ಓದಿ..
ಕರಣ್ ಜೋಹರ್ ಮುಂದಿನ ಸಿನಿಮಾದಲ್ಲಿ ಸಲ್ಲು ಜತೆ ರೊಮ್ಯಾನ್ಸ್ ಮಾಡೋ ಆ ಸೌತ್‌ ನಟಿ ಯಾರು? title=

Bollywood News: ಜವಾನ್‌ ಸಿನಿಮಾ ಮೂಲಕ ಸೌತ್‌ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟರು. ಸದ್ಯ ಆ ಚಿತ್ರ ಭಾಕ್ಸಾಫಿಸ್‌ನಲ್ಲಿ ಕಮಾಲ್‌ ಮಾಡುತ್ತಿದೆ. ಇದೀಗ ಸಲ್ಮಾನ್ ಖಾನ್ ಅವರು ಫೇಮಸ್‌ ಸೌತ್‌ ನಟಿಯ ಜೊತೆಯಲ್ಲಿ ರೋಮ್ಯಾನ್ಸ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಯಾರು ಆ ನಟಿ ಅಂತೀರಾ ಈ ಸ್ಟೋರಿ ಓದಿ..

ಕೆಲವು ವರದಿಗಳ ಪ್ರಕಾರ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಲಿರುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ವಿಷ್ಣುವರ್ಧನ್ ಅವರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಸಮಂತಾ ಜೊತೆಗೆ ತ್ರಿಶಾ ಮತ್ತು ಅನುಷ್ಕಾ ಶೆಟ್ಟಿ  ಸಹ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. 

ಇದನ್ನೂ ಓದಿ-ನಿಖಿಲ್ ಕುಮಾರ್ ಹೊಸ ಸಿನಿಮಾ ಸೆಟ್ ನಲ್ಲಿ ಕಾಣಿಸಿಕೊಂಡ ಶಿವರಾಜ್ ಕುಮಾರ್!!

ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಇಬ್ಬರೂ 1998 ರ ಚಲನಚಿತ್ರ ಕುಚ್ ಕುಚ್ ಹೋತಾ ಹೈ ಬಳಿಕ 25 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ಇನ್ನು ಇವರಿಬ್ಬರ ಕಾಂಬಿನೇಷನ್‌ನ ಮುಂದಿನ ಸಿನಿಮಾ ನವೆಂಬರ್ ತಿಂಗಳಲ್ಲಿ ಸೆಟ್ಟೇರಬಹುದು ಎಂದು ವರದಿಮಾಡಲಾಗಿದೆ. 

ಸಲ್ಮಾನ್ ಮತ್ತು ಸಮಂತಾ ಅವರ ಮುಂಬರುವ ಸಿನಿಮಾಗಳು 
ಸದ್ಯ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಟೈಗರ್ 3 ಬಿಡುಗಡೆಗೆ ಸಜ್ಜಾಗುತ್ತಿದೆ. ಇದು ಈ ವರ್ಷ ದೀಪಾವಳಿಯಂದು ಥಿಯೇಟರ್‌ಗಳಲ್ಲಿ ಬರಲಿದೆ. ಮತ್ತೊಂದೆಡೆ, ಸಮಂತಾ ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರದಲ್ಲಿ ಕಾಣಿಸಿಕೊಂಡರು. ಅಲ್ಲದೇ ಸ್ಯಾಮ್ ಶೀಘ್ರದಲ್ಲೇ ಸಿಟಾಡೆಲ್‌ನ ಮುಂದಿನ ಸಿಕ್ವೇಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ-ಕಪ್ಪು ಬಣ್ಣದಲ್ಲಿ ಕಂಗೊಳಿಸಿದ ʼವಜ್ರಕಾಯʼ ಸುಂದರಿ ನಭಾ ನಟೇಶ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News