Bigg Boss : ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ.!

Bigg Boss Contestant: ಬಿಗ್ ಬಾಸ್ ತನ್ನ ಹೊಸ ಸೀಸನ್‌ ಶುರುವಾಗಲಿದ್ದು, ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತ್ತೀಚಿನ ಅಪ್‌ಡೇಟ್‌ಗಳು ಪ್ರತಿದಿನ ಹೊರಬರುತ್ತಿವೆ. ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

Written by - Chetana Devarmani | Last Updated : Sep 19, 2022, 03:37 PM IST
  • ಬಿಗ್ ಬಾಸ್ ಹಿಂದಿಯ ಹೊಸ ಸೀಸನ್‌ ಶುರುವಾಗಲಿದೆ
  • ದೊಡ್ಡ ಮನೆಗೆ ಎಂಟ್ರಿ ಕೊಡಲಿದ್ದಾರೆ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ
  • ಪ್ರಕೃತಿ ಮಿಶ್ರಾ ಒರಿಯಾ ನಟಿ
Bigg Boss : ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ.!  title=
ಬಿಗ್ ಬಾಸ್

Bigg Boss Contestant: ಬಿಗ್ ಬಾಸ್ ಹಿಂದಿ ಜನಪ್ರಿಯ ಕಾರ್ಯಕ್ರಮವಾಗಿದ್ದು, ಸೆಲೆಬ್ರಿಟಿಗಳು ಭಾಗವಹಿಸಲು ಉತ್ಸುಕರಾಗಿದ್ದಾರೆ. ಬಿಗ್ ಬಾಸ್ ಹಿಂದಿ ಸೀಸನ್‌ 16 ಅಕ್ಟೋಬರ್ ನಿಂದ ಪ್ರಾರಂಭವಾಗಲಿದ್ದು, ಸ್ಪರ್ಧಿಗಳ ಹೆಸರಿನ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಈ ಬಾರಿ ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳು ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ ಮತ್ತು ಈ ಹೆಸರುಗಳಲ್ಲಿ ಜನಪ್ರಿಯ ನಟಿ ಪ್ರಕೃತಿ ಮಿಶ್ರಾ ಸಹ ಒಬ್ಬರು ಎನ್ನಲಾಗುತ್ತಿದೆ. 

ಇದನ್ನೂ ಓದಿ : Actress Suicide: ಡೆತ್‌ನೋಟ್‌ ಬರೆದಿಟ್ಟು ಯುವನಟಿ ಆತ್ಮಹತ್ಯೆ..!

ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿರುವ ಈ ನಟಿ ಇದೀಗ ಬಿಗ್‌ ಬಾಸ್‌ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಅವರಿಗೆ ಬಿಗ್ ಬಾಸ್ ಆಫರ್ ಬಂದಿದ್ದು, ಅದಕ್ಕೆ ಅವರೂ ಹೌದು ಎಂದಿದ್ದಾರೆ. ಪ್ರಕೃತಿ ಮಿಶ್ರಾ ಒರಿಯಾ ನಟಿ ಆದರೆ ಅವರು ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು, ನಂತರ ಅವರು ಅನೇಕ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಭಾಗವಾಗಿದ್ದಾರೆ. ಹಲವಾರು ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. 

ನಾವು ಅವರ ಇತ್ತೀಚಿನ ವಿವಾದದ ಬಗ್ಗೆ ಮಾತನಾಡಿದರೆ, ಜುಲೈ 2022 ರಲ್ಲಿ, ಅವರ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ನಟಿ ಪ್ರಕೃತಿಯನ್ನು ಭುವನೇಶ್ವರದಲ್ಲಿ ರಸ್ತೆಯಲ್ಲಿ ಥಳಿಸುವ ದೃಶ್ಯವಿದೆ ಎಂದು ಹೇಳಲಾಗಿದೆ. ಇದೀಗ ಹಿಂದಿಯ ಬಿಗ್ ಬಾಸ್ ಕನ್ನಡ 16 ರಲ್ಲಿ ಸ್ಪರ್ಧಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಸದ್ಯದಲ್ಲೇ ಈ ಶೋ ಆರಂಭವಾಗಲಿದೆ.

ಇದನ್ನೂ ಓದಿ : 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮತ್ತೆ ಸಂಕಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News