ಲಕ್ಷ್ಮಣ ಸವದಿ ಅವರಿಂದ ಬಿಡುಗಡೆಯಾಯಿತು "ದೇಸಾಯಿ" ಚಿತ್ರದ ಟೀಸರ್

Written by - YASHODHA POOJARI | Edited by - Manjunath N | Last Updated : Mar 20, 2024, 12:40 AM IST
  • ನನ್ನ ಹಿಂದಿನ "ಲವ್ 360" ಚಿತ್ರದ ಪಾತ್ರವೇ ಬೇರೆ. ಈ ಚಿತ್ರದ ಪಾತ್ರವೇ ಬೇರೆ
  • ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ
  • ನಾಯಕಿ ರಾಧ್ಯ, ನಟ ಚೆಲುವರಾಜು ಅವರು ಸಹ "ದೇಸಾಯಿ" ಚಿತ್ರದ ಕುರಿತು ಮಾತನಾಡಿದರು
ಲಕ್ಷ್ಮಣ ಸವದಿ ಅವರಿಂದ ಬಿಡುಗಡೆಯಾಯಿತು "ದೇಸಾಯಿ" ಚಿತ್ರದ ಟೀಸರ್  title=

ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿರುವ, ನಾಗಿರೆಡ್ಡಿ ಭಡ ನಿರ್ದೇಶನದ ಹಾಗೂ "ಲವ್ 360" ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸಿರುವ "ದೇಸಾಯಿ" ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು.ಮಾಜಿ ಉಪ ಮುಖ್ಯಮಂತ್ರಿಗಳಾದ ಹಾಗೂ ಶಾಸಕ ಶ್ರೀ ಲಕ್ಷ್ಮಣ್ ಸವದಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಲ್ಲಿಕಾರ್ಜುನ ಲೋನಿ, ವಿಜಯಕುಮಾರ್ ಪಿ.ಜಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದನ್ನು ಓದಿ : The Rulers : ಸಂವಿಧಾನದ ಮಹತ್ವ ಸಾರುತ್ತದೆ ಈ ಸಿನಿಮಾ , "ದಿ ರೂಲರ್ಸ್" ಚಿತ್ರದ ಟ್ರೈಲರ್ ಬಿಡುಗಡೆ

ಸಿನಿಮಾ ನಿರ್ಮಾಣ ನನ್ನ ಕನಸು. ಆ ಕನಸು ನನಸ್ಸಾಗಲು ಚಿತ್ರತಂಡದ ಸಹಕಾರವೇ ಕಾರಣ.ನನ್ನ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿ, ಇಂದು ಟೀಸರ್ ಬಿಡುಗಡೆ ಮಾಡಿಕೊಟ್ಟ ಲಕ್ಷ್ಮಣ್ ಸವದಿ ಅವರಿಗೆ ಧನ್ಯವಾದ. "ದೇಸಾಯಿ" ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ಹೆಚ್ಚಿನ ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿದೆ. ಅಲ್ಲಿನ ಜನರ ಸಹಕಾರವನ್ನು ಸ್ಮರಿಸಿಕೊಳ್ಳುತ್ತೇನೆ.ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಮಹಂತೇಶ ವಿ ಚೋಳಚಗುಡ್ಡ.ಅಂದುಕೊಂಡ ಹಾಗೆ ಚಿತ್ರ ಮೂಡಿಬಂದಿದೆ. ಅದಕ್ಕೆ ಬಹುಮುಖ್ಯ ಕಾರಣ ನಿರ್ಮಾಪಕರು ಹಾಗೂ ಚಿತ್ರತಂಡ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ನೋಡಿ. ಪ್ರೋತ್ಸಾಹಿಸಿ ಎಂದು ನಿರ್ದೇಶಕ ನಾಗಿರೆಡ್ಡಿ ಭಡ.

ಇದನ್ನು ಓದಿ : ‘ವೆಂಕ್ಯಾ’ನಿಗೆ ಸಿಕ್ತು ಸಿದ್ಧಾರೂಢರ ಆಶೀರ್ವಾದ.. ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

ನನ್ನ ಹಿಂದಿನ "ಲವ್ 360" ಚಿತ್ರದ ಪಾತ್ರವೇ ಬೇರೆ. ಈ ಚಿತ್ರದ ಪಾತ್ರವೇ ಬೇರೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ.ಚಿತ್ರದಲ್ಲಿ ಪ್ರವೀಣ್ ದೇಸಾಯಿ ನನ್ನ ಪಾತ್ರದ ಹೆಸರು ಎಂದರು ನಾಯಕ ಪ್ರವೀಣ್ ಕುಮಾರ್.ನಾಯಕಿ ರಾಧ್ಯ, ನಟ ಚೆಲುವರಾಜು ಅವರು ಸಹ "ದೇಸಾಯಿ" ಚಿತ್ರದ ಕುರಿತು ಮಾತನಾಡಿದರು. 

"ಲವ್ 360" ಖ್ಯಾತಿಯ ಪ್ರವೀಣ್ ಕುಮಾರ್ ,ರಾಧ್ಯ, "ಒರಟ" ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಸೀತಾ ಬೆನಕ, ಆರತಿ ಕುಲಕರ್ಣಿ, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News