ಗೋಲ್ಡನ್ ಗ್ಲೋಬ್ ಅವಾರ್ಡ್ ನಲ್ಲಿ ಈ ಚಂದುಳ್ಳಿ ಸೀರೆಗೆ ಮಾರುಹೋದ ಹಾಲಿವುಡ್ !

76 ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2019ರ ಕಾರ್ಯಕ್ರಮ ಮೋಜು ರಂಜನೆ, ಹಾಸ್ಯ ಮತ್ತು ಗಂಭೀರವಾದ ಭಾಷಣಗಳಲ್ಲಿ ಮುಳುಗಿತ್ತು. ಈ ಬಾರಿಯ ಗೋಲ್ಡನ್ ಗ್ಲೋಬ್ಸ್ ನ ಮೋಶನ್ ಪಿಕ್ಚರ್ಸ್ ಡ್ರಾಮಾ ವಿಭಾಗದಲ್ಲಿ ರಾಮಿ ಮಲೆಕ್ ಉತ್ತಮ ನಟ ಪ್ರಶಸ್ತಿ ಪಡೆದರೆ, ಬೋಹೀಮಿಯನ್ ರಾಪ್ಸೋಡಿ ಚಿತ್ರ ಅತ್ಯುತ್ತಮ ಮೋಷನ್ ಪಿಕ್ಚರ್ ಪ್ರಶಸ್ತಿಯನ್ನು ಪಡೆಯಿತು. 

Last Updated : Jan 7, 2019, 05:02 PM IST
ಗೋಲ್ಡನ್ ಗ್ಲೋಬ್ ಅವಾರ್ಡ್ ನಲ್ಲಿ ಈ ಚಂದುಳ್ಳಿ ಸೀರೆಗೆ ಮಾರುಹೋದ ಹಾಲಿವುಡ್ ! title=
Photo courtesy: Instagram

ನವದೆಹಲಿ: 76 ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2019ರ ಕಾರ್ಯಕ್ರಮ ಮೋಜು ರಂಜನೆ, ಹಾಸ್ಯ ಮತ್ತು ಗಂಭೀರವಾದ ಭಾಷಣಗಳಲ್ಲಿ ಮುಳುಗಿತ್ತು. ಈ ಬಾರಿಯ ಗೋಲ್ಡನ್ ಗ್ಲೋಬ್ಸ್ ನ ಮೋಶನ್ ಪಿಕ್ಚರ್ಸ್ ಡ್ರಾಮಾ ವಿಭಾಗದಲ್ಲಿ ರಾಮಿ ಮಲೆಕ್ ಉತ್ತಮ ನಟ ಪ್ರಶಸ್ತಿ ಪಡೆದರೆ, ಬೋಹೀಮಿಯನ್ ರಾಪ್ಸೋಡಿ ಚಿತ್ರ ಅತ್ಯುತ್ತಮ ಮೋಷನ್ ಪಿಕ್ಚರ್ ಪ್ರಶಸ್ತಿಯನ್ನು ಪಡೆಯಿತು. 

ಇದೇ ಸಂದರ್ಭದಲ್ಲಿ ಪ್ರಶಸ್ತಿ ಸಮಾರಂಭದಲ್ಲಿ ವಿಶೇಷವಾಗಿ ಭಾರತೀಯ ನಟಿಯೊಬ್ಬರು ತಿಳಿ ಗುಲಾಬಿ ಸೀರೆ ಮೂಲಕ ರೆಡ್ ಕಾರ್ಪೆಟ್ ಮೇಲೆ ಮಿಂಚಿದರು. ಇದೆ ಮೊದಲ ಬಾರಿಗೆ ಸೀರೆ ಮೂಲಕ  ಕೆಂಪು ಹಾಸಿನ ಮೇಲೆ ನಟಿಯೊಬ್ಬರು ಮಿಂಚಿದರು,ಪ್ರಿಯಾಂಕಾ ಚೋಪ್ರಾ ಈ ಬಾರಿ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.ಈ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಮಿಸ್ ಇಂಡಿಯಾ ಮನಸ್ವಿ ಮಮಗೈ ಅವರು ಅಲ್ಲಿರುವ ಛಾಯಾಗ್ರಾಹಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಹಾಲಿವುಡ್ ನಲ್ಲಿ  ಭಾಗವಹಿಸುತ್ತಿರುವ ಮೊದಲ ಪ್ರಶಸ್ತಿ ಸಮಾರಂಭ ಮತ್ತು ಇದು ನನ್ನ ಮೊದಲ ಅಂತರಾಷ್ಟ್ರೀಯ ರೆಡ್ ಕಾರ್ಪೆಟ್ ಮತ್ತು ಪ್ರಶಸ್ತಿ ಸಮಾರಂಭವಾಗಿದೆ, ಹಾಗಾಗಿ ನಾನು ಏನನ್ನಾದರೂ ಮಾಡಬೇಕೆಂದು ಬಯಸಿದ್ದೇ ಅದಕ್ಕೆ ನಾನು ಸೀರೆಯನ್ನು ಧರಿಸಿದೆ.  ಗೋಲ್ಡನ್ ಗ್ಲೋಬ್ಸ್ ನಲ್ಲಿ ಒಮ್ಮೆಯೂ ಸೀರೆ ಧರಿಸಿದ್ದನ್ನು ನೋಡಿರದ ಬಹುತೇಕ ಹಾಲಿವುಡ್ ನಟರುಬಂದು ನಾನು ಯಾರು ಮತ್ತು ನಾನು ಧರಿಸಿದ್ದ ಸೀರೆಯ ಬಗ್ಗೆ ಕೇಳಿದರು. 

ನಟಿ ಮನಸ್ವಿ ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ ಮತ್ತು ಯಮಿ ಗೌತಮ್ ಎದುರು ಆಕ್ಷನ್ ಜಾಕ್ಸನ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

Trending News