24 ಗಂಟೆಗಳಲ್ಲಿ 10ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾದ ಈ HAPPY NEW YEAR ಸಾಂಗ್

ಭೋಜಪುರಿ ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತ ಪವನ್ ಸಿಂಗ್ ಅವರ ಹಲವು ಹಾಡುಗಳು ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಹವಾ ಸೃಷ್ಟಿಸುತ್ತಲೇ ಇರುತ್ತವೆ.

Written by - Nitin Tabib | Last Updated : Dec 30, 2019, 05:57 PM IST
24 ಗಂಟೆಗಳಲ್ಲಿ 10ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾದ ಈ HAPPY NEW YEAR ಸಾಂಗ್ title=

ನವದೆಹಲಿ:ಭೋಜಪುರಿಯ ಯುವ ವೀಕ್ಷಕರ ಮಧ್ಯೆ ಭೋಜಪುರಿ ಚಿತ್ರರಂಗದಲ್ಲಿ 'ಪವರ್ ಸ್ಟಾರ್' ಎಂದೇ ಖ್ಯಾತ ನಟ ಮತ್ತು ಗಾಯಕ ಪವನ್ ಸಿಂಗ್ ಅವರು ತನ್ನದೇ ಸ್ಥಾನ ಹೊಂದಿದ್ದಾರೆ. ಅದೇ ಕಾರಣಕ್ಕೆ ಇಂಟರ್ ನೆಟ್ ಮೇಲೆ ಪವನ್ ಸಿಂಗ್ ಅವರ ವಿಡಿಯೋಗಳು ಭಾರಿ ಹವಾ ಸೃಷ್ಟಿಸುತ್ತಲೇ ಇರುತ್ತವೆ. ಇತ್ತೀಚಿಗೆ ಅವರ ಹಾಡಿನ ವಿಡಿಯೋಗಳೂ ಕೂಡ ವೈರಲ್ ಆಗುತ್ತಲೇ ಇವೆ. ಸದ್ಯ ಪವನ್ ಸಿಂಗ್ ಹಾಡಿರುವ 'ಹ್ಯಾಪಿ ನ್ಯೂ ಇಯರ್' ಹಾಡು ಬಿಡುಗಡೆಯಾಗಿದೆ. ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಸ್ವತಃ ಪವನ್ ಸಿಂಗ್ ಅವರೇ ಈ ಹಾಡಿನ ವಿಡಿಯೋ ಬಿಡುಗಡೆಗೊಳಿಸಿದ್ದಾರೆ. ಡಿಸೆಂಬರ್ 29ರಂದು ಅವರು ಬಿಡುಗಡೆಗೊಳಿಸಿದ ಈ ಹಾಡು ಕೇವಲ 24ಗಂಟೆಯೊಳಗೆ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ.

ಬಾಕ್ಸ್ ಆಫಿಸ್ ನಲ್ಲಿ ಧೂಳೆಬ್ಬಿಸಿದ 'ಶೇರ್ ಸಿಂಗ್'
ಅತ್ತ ಇನ್ನೊಂದೆಡೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪವನ್ ಸಿಂಗ್ ಅವರ ಸಿನಿಮಾ 'ಶೇರ್ ಸಿಂಗ್' ಬಾಕ್ಸ್ ಆಫೀಸ್ ನಲ್ಲಿ ಬಿಸಿ ಏರಿಸತೊಡಗಿದೆ. ಈ ಚಿತ್ರವನ್ನು ವಿಕ್ಷೀಸಲು ಅಭಿಮಾನಿಗಳು ಚಿತ್ರ ಮಂದಿರಗಳಲ್ಲಿ ಮುಗಿಬೀಳುತ್ತಿದ್ದಾರೆ. ಈ ಚಿತ್ರದಲ್ಲಿ ಖತರ್ನಾಕ್ ಸಾಹಸ ನಡೆಸುತ್ತಿರುವ ಪವನ್ ಸಿಂಗ್, ಇನ್ನೊಂದೆಡೆ ಸಿಂಹದ ಜೊತೆ ಕಾಳಗ ಕೂಡ ನಡೆಸುತ್ತಿದ್ದಾರೆ. ಅವರು ತಮ್ಮದೇ ಆದ ಶೈಲಿಯಲ್ಲಿ ಹೇಳುತ್ತಿರುವ ಡೈಲಾಗ್ ಗಳಿಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರನ್ನು ತುಂಬಾ ಇಷ್ಟಪಡುವ ಅವರ ಅಭಿಮಾನಿಗಳ ಪಾಲಿಗೆ ಈ ಚಿತ್ರ ರೋಮಾಂಚಕ ಅನುಭವ ನೀಡುತ್ತಿದೆ.

ಈ ಚಿತ್ರದ ವಿಶೇಷತೆ ಎಂದರೆ, ಈ ಚಿತ್ರದಲ್ಲಿ ಇದೆ ಮೊದಲ ಬಾರಿಗೆ ಪವನ್ ಸಿಂಗ್ ಜೊತೆ ಕಾಣಿಸಿಕೊಂಡಿರುವ ನಾಯಕ ನಟಿ, ಯುಟ್ಯೂಬ್ ಕ್ವೀನ್ ಆಮ್ರಪಾಲಿ ದೂಬೆ. ಇಡೀ ಚಿತ್ರದಲ್ಲಿನ ಅಮ್ರಪಾಲಿ ಅವರ ರೊಮ್ಯಾಂಟಿಕ್ ನಟನೆಗೆ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ನಟಿ ಸಂಭಾವನಾ ಸಿಂಗ್ ಕೂಡ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಸಿಂಘಂ ಖ್ಯಾತಿಯ ಅಶೋಕ್ ಸಮರ್ಥ ಹಾಗೂ ಪವನ್ ಸಿಂಗ್ ಅವರ ನಡುವಿನ ಖತರ್ನಾಕ್ ಫೈಟ್ ಗೆ ಪ್ರೇಕ್ಷಕರು ಸಿಳ್ಳೆ ಹೊಡೆಯುತ್ತಿದ್ದಾರೆ.

Trending News