ಬೇಸಿಗೆಯಲ್ಲೇ ಸಿಗುವ ಈ ಹಣ್ಣು ಮಧುಮೇಹಕ್ಕೆ ವರದಾನ: ಬ್ಲಡ್ ಶುಗರ್ ಕಂಟ್ರೋಲ್ ತಪ್ಪದಂತೆ ನೋಡಿಕೊಳ್ಳುತ್ತೆ!

Fruits for Diabetes in Summer Season: ಮಧುಮೇಹ ಎಂಬುದು ಗಂಭೀರ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ತರುವ ಮೂಲಕ ನಿಯಂತ್ರಿಸಬಹುದು.

Written by - Bhavishya Shetty | Last Updated : Apr 11, 2024, 02:40 PM IST
    • ಕೆಲ ಹಣ್ಣುಗಳು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ
    • ಮಧುಮೇಹ ರೋಗಿಗಳು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗಬಹುದು.
    • ಮಧುಮೇಹ ರೋಗಿಗಳು ಆರಾಮವಾಗಿ ತಿನ್ನಬಹುದಾದ ಕೆಲವು ಹಣ್ಣುಗಳ ಬಗ್ಗೆ ಮಾಹಿತಿ
ಬೇಸಿಗೆಯಲ್ಲೇ ಸಿಗುವ ಈ ಹಣ್ಣು ಮಧುಮೇಹಕ್ಕೆ ವರದಾನ: ಬ್ಲಡ್ ಶುಗರ್ ಕಂಟ್ರೋಲ್ ತಪ್ಪದಂತೆ ನೋಡಿಕೊಳ್ಳುತ್ತೆ! title=
Fruits for diabetes

Fruits for Diabetes in Summer Season: ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ, ತಪ್ಪು ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಕೆಲಸದ ಒತ್ತಡವು ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಅದರಲ್ಲೂ ಅನೇಕ ಜನರು ಎದುರಿಸುತ್ತಿರುವ ಕಠಿಣ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು.

ಮಧುಮೇಹ ಎಂಬುದು ಗಂಭೀರ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ತರುವ ಮೂಲಕ ನಿಯಂತ್ರಿಸಬಹುದು.

ಇದನ್ನೂ ಓದಿ: Ramachari Kannada Serial: ನಿಜ ಜೀವನದಲ್ಲಿ ʼರಾಮಾಚಾರಿʼ ತಂದೆ ಕೂಡ ದೊಡ್ಡ ಸೆಲೆಬ್ರಿಟಿ.. ಅಪ್ಪ ಮಗ ಇಬ್ಬರೂ ಮಹಾನ್‌ ಕಲಾವಿದರು!!  

ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಅದರಲ್ಲೂ ಮಧುಮೇಹದ ಇದ್ದವರು ಇವುಗಳನ್ನು ನಿಯಮಿತ ಪ್ರಮಾಣದಲ್ಲಷ್ಟೇ ತಿನ್ನಬಹುದು. ಆದರೆ ಕೆಲ ಹಣ್ಣುಗಳು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ. ಹೀಗಾಗಿ ಮಧುಮೇಹ ರೋಗಿಗಳು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗಬಹುದು.

ಆದರೆ ಇವೆಲ್ಲದರ ಭಯ ಮತ್ತು ಹಿಂಜರಿಕೆಯಿಲ್ಲದೆ ನೀವು ಆರಾಮವಾಗಿ ತಿನ್ನಬಹುದಾದ ಕೆಲವು ಹಣ್ಣುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

ಪೀಚ್: ಮಧುಮೇಹ ರೋಗಿಗಳಾಗಿದ್ದರೆ, ಯಾವುದೇ ಭಯವಿಲ್ಲದೆ ಪೀಚ್ ಹಣ್ಣನ್ನು ಸೇವಿಸಬಹುದು. ಇದರಲ್ಲಿ ಹೇರಳವಾಗಿರುವ ಫೈಬರ್ ಅಂಶವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ನೇರಳೆ ಹಣ್ಣು: ಮಧುಮೇಹ ರೋಗಿಗಳು ಯಾವುದೇ ಚಿಂತೆಯಿಲ್ಲದೆ ನೇರಳೆ ಹಣ್ಣುಗಳನ್ನು ಸೇವಿಸಬಹುದು. ಶೇ.82ರಷ್ಟು ನೀರಿನ ಅಂಶ ಇದರಲ್ಲಿ ಕಂಡುಬರುತ್ತದೆ.

ಪೇರಳೆ ಹಣ್ಣು: ಮಧುಮೇಹ ರೋಗಿಗಳು ವಿಟಮಿನ್ ಸಿ, ಇ ಮತ್ತು ಕೆ ಹೊಂದಿರುವ ಪೇರಳೆಯನ್ನೂ ತಿನ್ನಬಹುದು. ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಬೀಟಾ ಕ್ಯಾರೋಟಿನ್ ಜೊತೆಗೆ, ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದು.

ಆಪಲ್: ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸೇಬು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ಇದನ್ನು ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸೇಬನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು.

ಕಿವಿ ಹಣ್ಣು: ಅಧಿಕ ನಾರಿನಂಶವಿರುವ ಕಿವಿ, ಮಧುಮೇಹಕ್ಕೆ ಪ್ರಯೋಜನಕಾರಿ. ಇದು 49ರ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ ಮಧುಮೇಹಕ್ಕೆ ಒಳ್ಳೆಯದು. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ: Ramachari Kannada Serial: ನಿಜ ಜೀವನದಲ್ಲಿ ʼರಾಮಾಚಾರಿʼ ತಂದೆ ಕೂಡ ದೊಡ್ಡ ಸೆಲೆಬ್ರಿಟಿ.. ಅಪ್ಪ ಮಗ ಇಬ್ಬರೂ ಮಹಾನ್‌ ಕಲಾವಿದರು!!  

ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News