Video : ಜೈಲಿನಲ್ಲಿ ಹಾಟ್‌ ಬ್ಯೂಟಿ ಉರ್ಫಿ ಜಾವೇದ್‌ ಹೇಗಿದ್ದಾರೆ ನೋಡಿ..

Urfi Javed Video : ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟಿಯ ಹೊಸ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಅವರು ಜೈಲಿನೊಳಗೆ ನಿಂತಿರುವುದನ್ನು ಕಾಣಬಹುದು ಮತ್ತು "ಇಡೀ ಭಾರತವು ಇದೀಗ ನನ್ನನ್ನು ಹೀಗೆ ನೋಡಲು ಬಯಸುತ್ತದೆ" ಎಂದು ಹೇಳಿದ್ದಾರೆ.   

Written by - Chetana Devarmani | Last Updated : Dec 23, 2022, 01:26 PM IST
  • ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ
  • "ಇಡೀ ದೇಶ ನನ್ನನ್ನು ಹೀಗೆ ನೋಡಲು ಬಯಸುತ್ತೆ"
  • ಉರ್ಫಿ ಜಾವೇದ್ ಹೊಸ ವಿಡಿಯೋ ವೈರಲ್‌
Video : ಜೈಲಿನಲ್ಲಿ ಹಾಟ್‌ ಬ್ಯೂಟಿ ಉರ್ಫಿ ಜಾವೇದ್‌ ಹೇಗಿದ್ದಾರೆ ನೋಡಿ..  title=
ಉರ್ಫಿ ಜಾವೇದ್

Urfi Javed Video : ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟಿಯ ಹೊಸ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಅವರು ಜೈಲಿನೊಳಗೆ ನಿಂತಿರುವುದನ್ನು ಕಾಣಬಹುದು ಮತ್ತು "ಇಡೀ ಭಾರತವು ಇದೀಗ ನನ್ನನ್ನು ಹೀಗೆ ನೋಡಲು ಬಯಸುತ್ತದೆ" ಎಂದು ಹೇಳಿದ್ದಾರೆ. ವಿಡಿಯೋದಲ್ಲಿ, ಉರ್ಫಿ ವೀಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ಕೇವಲ ಲೇಸ್ ಬ್ರಾ ಧರಿಸಿರುವುದನ್ನು ಕಾಣಬಹುದು.

ಬೋಲ್ಡ್‌ ಡ್ರೆಸ್‌ ತೊಟ್ಟಿದ್ದಕ್ಕಾಗಿ ದುಬೈನಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂಬ ವದಂತಿಗಳಿಗೆ ಪ್ರತಿಕ್ರಿಯೆಯಾಗಿ ಉರ್ಫಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ, ಹಲವಾರು ಮಾಧ್ಯಮ ವರದಿಗಳು ಉರ್ಫಿಯನ್ನು ದುಬೈನಲ್ಲಿ ಬೋಲ್ಡ್‌ ಬಟ್ಟೆಗಳನ್ನು ಧರಿಸಿ ವಿಡಿಯೋವನ್ನು ಚಿತ್ರೀಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಲಾಗಿತ್ತು. ಇದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ರಿಸ್ಕ್ ಫ್ಯಾಶನ್ ಉಡುಪುಗಳಿಗಾಗಿ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಉರ್ಫಿಯನ್ನು ಈ ವಿಷಯದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯೊಂದು ಹೇಳಿತ್ತು. 

ಇದನ್ನೂ ಓದಿ : "ಬಾಲಿವುಡ್‌ ಅನ್ನು ಗೌರವಿಸಿ" ಎಂದ ರಾಕಿಂಗ್‌ ಸ್ಟಾರ್‌ ಯಶ್‌

ಅಲ್ಲದೇ ನಿನ್ನೆ, ಉರ್ಫಿಗೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಹಾಕಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಉರ್ಫಿ ಜಾವೇದ್ ತನ್ನ ವಿಲಕ್ಷಣ ಡ್ರೆಸ್ಸಿಂಗ್ ಸೆನ್ಸ್‌ಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿದ್ದಾರೆ. ಬ್ಯಾಂಡೇಜ್‌ಗಳನ್ನು ಬಟ್ಟೆಯಾಗಿ ಧರಿಸುವುದರಿಂದ ಹಿಡಿದು ಮೊಬೈಲ್ ಫೋನ್‌ಗಳಿಂದ ಉಡುಪನ್ನು ತಯಾರಿಸುವವರೆಗೆ, ಉರ್ಫಿ ಎಲ್ಲವನ್ನೂ ಮಾಡಿದ್ದಾರೆ. 25 ವರ್ಷ ವಯಸ್ಸಿನ ಉರ್ಫಿ ಜಾವೇದ್ ಅವರು ಮೊದಲು 2016 ರ ಟಿವಿ ಶೋ 'ಬಡೆ ಭಯ್ಯಾ ಕಿ ದುಲ್ಹನಿಯಾ'ದಲ್ಲಿ ಕಾಣಿಸಿಕೊಂಡರು, ನಂತರ 'ಮೇರಿ ದುರ್ಗಾ', 'ಬೆಪನಾ' ಮತ್ತು 'ಪಂಚ್ ಬೀಟ್ ಸೀಸನ್ 2' ನಲ್ಲಿ ಕಾಣಿಸಿಕೊಂಡರು. 

ಕಳೆದ ವರ್ಷ ಬಿಗ್ ಬಾಸ್ OTT ಸೀಸನ್ 1 ರಲ್ಲಿ ಕಾಣಿಸಿಕೊಂಡರು ಮತ್ತು ಸ್ಟಾರ್‌ಡಮ್ ಗಳಿಸಿದರು. 'ಬಿಗ್ ಬಾಸ್ ಒಟಿಟಿ' ಸ್ಪರ್ಧಿ ಉರ್ಫಿ ಜಾವೇದ್ ಪ್ರಸ್ತುತ ರಿಯಾಲಿಟಿ ಶೋ Splitsvilla X4 ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬೋಲ್ಡ್‌ ಲುಕ್‌ನಿಂದ ಆಗಾಗ ಉರ್ಫಿ ಟ್ರೀಲ್‌ ಆಗುತ್ತಿರುತ್ತಾರೆ. 

ಇದನ್ನೂ ಓದಿ : ಶಿವಣ್ಣನ ಖದರ್‌, ಹರ್ಷ ಮ್ಯಾಜಿಕ್‌.. ಥಿಯೆಟರ್‌ಗಳಲ್ಲಿ ಅಬ್ಬರಿಸಿ ಬೊಬ್ಬರಿದ ʼವೇದ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News