ನಾಳೆಯಿಂದ ವಿಶ್ವದಾದ್ಯಂತ ರಾಮ-ರಾವಣನ ಪರಾಕ್ರಮ!

 ರಾಮನೋ ರಾವಣನೋ ಎನ್ನುವ ಕುತೂಹಲದೊಂದಿಗೆ ನಾಳೆಯಿಂದ ದಿ ವಿಲನ್ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುವ ಮೂಲಕ ಈಗ ಇಡೀ ದಕ್ಷಿಣ ಭಾರತದಲ್ಲೇ ಭಾರಿ ಕುತೂಹಲ ಮೂಡಿಸಿದೆ. ಅಷ್ಟಕ್ಕೂ  ಈ ಸಿನಿಮಾದ ಆರ್ಭಟ ಹೇಗಿದೆ ಎಂದರೆ ಯಾವ ಚಿತ್ರವೂ ಸಹಿತ ಈ ವಾರ ದಿ ವಿಲನ್ ಎದುರು ಬಿಡುಗಡೆಯಾಗುತ್ತಿಲ್ಲ ಎನ್ನುವುದೆ ಇದಕ್ಕೆ ಸಾಕ್ಷಿ.

Last Updated : Oct 17, 2018, 08:15 PM IST
ನಾಳೆಯಿಂದ ವಿಶ್ವದಾದ್ಯಂತ ರಾಮ-ರಾವಣನ ಪರಾಕ್ರಮ! title=

ಬೆಂಗಳೂರು: ರಾಮನೋ ರಾವಣನೋ ಎನ್ನುವ ಕುತೂಹಲದೊಂದಿಗೆ ನಾಳೆಯಿಂದ ದಿ ವಿಲನ್ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುವ ಮೂಲಕ ಈಗ ಇಡೀ ದಕ್ಷಿಣ ಭಾರತದಲ್ಲೇ ಭಾರಿ ಕುತೂಹಲ ಮೂಡಿಸಿದೆ. ಅಷ್ಟಕ್ಕೂ  ಈ ಸಿನಿಮಾದ ಆರ್ಭಟ ಹೇಗಿದೆ ಎಂದರೆ ಯಾವ ಚಿತ್ರವೂ ಸಹಿತ ಈ ವಾರ ದಿ ವಿಲನ್ ಎದುರು ಬಿಡುಗಡೆಯಾಗುತ್ತಿಲ್ಲ ಎನ್ನುವುದೆ ಇದಕ್ಕೆ ಸಾಕ್ಷಿ.

ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ಸುದೀಪ್ ಮತ್ತು ಶಿವರಾಜ್ ಕುಮಾರ್ ಈಗಾಗಲೇ ಟ್ರೈಲರ್ ನಲ್ಲಿ ನೋಡಿರುವಂತೆ ನಾ ಮುಂದು ತಾ ಮುಂದು ಎನ್ನುವಂತೆ ತಮ್ಮ ನಟನೆಯನ್ನು ತೋರಿಸಿದ್ದಾರೆ.ಇಲ್ಲಿ ಯಾರು ನಾಯಕನೋ ಯಾರು ಖಳ ನಾಯಕನೋ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ. ಈ ಚಿತ್ರ ಈಗಾಗಲೇ ಆಡಿಯೋವಂತೂ ಚಿತ್ರ ಬಿಡುಗಡೆ ಮುನ್ನವೇ ಭರ್ಜರಿ ಹವಾ ಮಾಡಿದೆ. ಸ್ಯಾಂಡಲ್ ವುಡ್ ಚಿತ್ರ ಮಟ್ಟಿಗೆ ಬಹು ವೆಚ್ಚದ ಸಿನಿಮಾವಾಗಿರುವ ಈ ಚಿತ್ರ ಗ್ರಾಫಿಕ್ಸ್ ಲೋಕೇಶನ್ ಹಾಗೂ ನಟರಿಬ್ಬರ ಡ್ರೆಸ್ ಸ್ಟೈಲ್ ನಿಂದಾಗಿಯೇ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಈ ಚಿತ್ರ ಬಿಡುಗಡೆಯಾಗುವ ಒಂದು ವಾರದ ಮುಂಚೆಯೇ ಈ ಚಿತ್ರದ ಟಿಕೆಟ್ ಗಳು ಈಗ ಮಾರಾಟ ಆಗಿವೆ. ರಾಮ-ರಾವಣರ ಅಬ್ಬರಕ್ಕೆ ನಾಳೆ ಇಡೀ ದಕ್ಷಿಣ ಭಾರತದ ಚಿತ್ರರಂಗ ಕೂತೂಹಲದಿಂದ ಎದುರು ನೋಡುತ್ತಿದೆ ಎನ್ನುವದಂತು ಸತ್ಯ.
 

Trending News