ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸುತ್ತಿದೆ 'ದಿ ವಿಲನ್' ಟೀಸರ್

ಬಿಡುಗಡೆಯಾದ ಕೆಲ ಹೊತ್ತಿನಲ್ಲೇ ಲಕ್ಷ ಮಂದಿಯಿಂದ ವೀಕ್ಷಣೆಯಾದ ಟೀಸರ್

Last Updated : Jun 29, 2018, 08:26 AM IST
ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸುತ್ತಿದೆ 'ದಿ ವಿಲನ್' ಟೀಸರ್  title=

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ಬಹುನೀರಿಕ್ಷಿತ 'ದಿ ವಿಲನ್' ಚಿತ್ರದ ಟೀಸರ್ ಗುರುವಾರ ಬಿಡುಗಡೆಯಾಗಿದೆ. 

ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚಿತ್ರದ ಎರಡು ಟೀಸರ್ ಗಳನ್ನು ಬಿಡುಗಡೆ ಮಾಡಿದರು. ಶಿವಣ್ಣ ಅಭಿನಯದ ಒಂದು ಟೀಸರ್ , ಕಿಚ್ಚ ಸುದೀಪ್ ಪಾತ್ರವನ್ನೊಳಗೊಂಡ ಇನ್ನೊಂದು ಟೀಸರ್ ಬಿಡುಗಡೆಯಾಗಿದೆ.

ನಿನ್ನೆ ಬಿಡುಗಡೆಯಾದ ಈ ಎರಡೂ ಟೀಸರ್ ಗೆ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದುವರೆಗೂ ಒಂದು ಟೀಸರ್ ಅನ್ನು 8 ಲಕ್ಷಕ್ಕೂ ಹೆಚ್ಚು ಮಂದಿ ಹಾಗೂ ಇನ್ನೊಂದು ಟೀಸರ್ ಅನ್ನು ಐದೂವರೆ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇಬ್ಬರೂ ನಟರೂ ತಮ್ಮದೇ ಆದ ಸ್ಟೈಲ್ ನಲ್ಲಿ ಹೊಡೆದಿರುವ ಡೈಲಾಗ್ ಗಳೇ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಿಸಿದೆ.

ಜಿಟಿ ಮಾಲ್ ನಲ್ಲಿ ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಚಿತ್ರದ ನಿರ್ದೇಶಕ ಪ್ರೇಮ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಇನ್ನು ಚಿತ್ರೀಕರಣ ನಿಮಿತ್ತ ಸರ್ಬಿಯ ದೇಶದಲ್ಲಿರುವ ಸುದೀಪ್ ತಾವು ಟ್ವಿಟ್ಟರ್ ಲೈವ್ ಸಂದೇಶದ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ.

ತನ್ವಿ-ಶಾನ್ವಿ ಫಿಲಂಸ್ ಬ್ಯಾನರ್ ನಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಶೀಘ್ರದಲ್ಲೇ ಆಡಿಯೋ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಇನ್ನು ಟೀಸರ್ ವೀಕ್ಷಿಸಿದ ಕಿಚ್ಚ ಹಾಗೂ ಶಿವಣ್ಣನ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ.

Trending News