Janhvi Kapoor: ಜಾನ್ವಿ ಕಪೂರ್ ದಕ್ಷಿಣ ಭಾರತದ ಜನಪ್ರಿಯ ನಟಿ ಶ್ರೀದೇವಿಯವರ ಹಿರಿಯ ಮಗಳು. ಅವರು 2018 ರಲ್ಲಿ ಬಾಲಿವುಡ್ ಚಲನಚಿತ್ರ ನಿರ್ದೇಶಕ ಕರಣ್ ಜೋಹರ್ ಅವರ ಧಡಕ್ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಇದರ ನಂತರ, 2020 ರಲ್ಲಿ ಬಿಡುಗಡೆಯಾದ ಚಿತ್ರ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಅನೇಕ ಪ್ರಶಂಸೆಯನ್ನು ಗಳಿಸಿತು ಮತ್ತು ಜಾನ್ವಿ ಕಪೂರ್ ಕೆಲವು ಪ್ರಶಸ್ತಿಗಳನ್ನು ಗೆದ್ದರು.
ಇದರ ಬೆನ್ನಲ್ಲೇ ರೂಹಿ, ಗುಡ್ ಲಕ್ ಜೆರ್ರಿಯಂತಹ ಚಿತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆದರು. ಇವರು ನಾಯಕರ ಎದುರು ನಟಿಸುವ ಚಿತ್ರಗಳಿಗಿಂತ ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಆಯ್ಕೆ ಮಾಡಿಕೊಂಡರು. ಅವರ ಪ್ರತಿಯೊಂದು ಚಿತ್ರದಲ್ಲೂ... ಶ್ರೀದೇವಿಯನ್ನು ಮೀರಿಸುವ ಮಟ್ಟದಲ್ಲಿ ಅಭಿನಯ ನೀಡುತ್ತಾ ಬಂದಿರುವುದು ಗಮನಾರ್ಹ.
ಇದನ್ನೂ ಓದಿ-ಕರುನಾಡ ಚಕ್ರವತಿ ಮನೆಗೆ ಆಗಮಿಸಿದ ಟಾಲಿವುಡ್ ಸ್ಟಾರ್: ನಾನಿಯ ʻಹಾಯ್ ನಾನಾʼ ಚಿತ್ರಕ್ಕೆ ಶಿವಣ್ಣನ ವಿಶಸ್!
ಜಾಹ್ನವಿ ಕಪೂರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 5 ವರ್ಷಗಳಾಗಿದ್ದು, ಬಹುಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಶ್ರೀದೇವಿಯವರನ್ನು ಕಳೆದುಕೊಂಡು ದೊಡ್ಡ ಆಘಾತವಾಗಿದ್ದರೂ ಅದನ್ನು ಮೆಟ್ಟಿನಿಂತು ಈಗ ಬಾಲಿವುಡ್ ಇಂಡಸ್ಟ್ರಿಯಲ್ಲಿ ಮುಂಚೂಣಿಯ ತಾರೆಯಾಗಿ ಮೆರೆಯುತ್ತಿರುವ ನಟಿಯರಲ್ಲಿ ಒಬ್ಬರಾಗಿದ್ದು ನಟಿ ಜಾನ್ವಿ
ತಂದೆ-ತಾಯಿಯ ಆದಾಯವಿಲ್ಲದೆ... ತನ್ನ ಅಗತ್ಯಗಳನ್ನು ತಾವೇ ಪೂರೈಸಿಕೊಂಡು ಬೆಳೆದಿದ್ದಾರೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, 2022 ರಲ್ಲಿ ಜಾನ್ವಿ ಕಪೂರ್ ಅವರ ನಿವ್ವಳ ಮೌಲ್ಯವು ಸುಮಾರು ರೂ. 58 ರಿಂದ 65 ಕೋಟಿ ಎಂದು ಅಂದಾಜಿಸಲಾಗಿದೆ.
ಜಾನ್ವಿ ಪ್ರತಿ ಚಿತ್ರಕ್ಕೆ ಸುಮಾರು 5 ರಿಂದ 8 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ.. ನಟನೆ, ಮಾಡೆಲಿಂಗ್ ಮತ್ತು ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವುದರ ಹೊರತಾಗಿ, ಅವರು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು Instagram ನಲ್ಲಿ 22.8 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ..
ಇದನ್ನೂ ಓದಿ-ಮತ್ತೆ ತೆರೆ ಹಂಚಿಕೊಳ್ಳಲಿದ್ದಾರಾ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ?
ಅವರು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡಲು 70-80 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ.. ಹಾಗಾಗಿ ಪ್ರತಿ ವರ್ಷ, ಜಾನ್ವಿ ಕಪೂರ್ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಸುಮಾರು 2.5 ರಿಂದ 3 ಕೋಟಿ ಗಳಿಸುತ್ತಾರೆ. ಅವರು Nykaa, Mint ChocOn ಮತ್ತು Reliance Trends ಸೇರಿದಂತೆ ಹಲವು ಜನಪ್ರಿಯ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡಿದ್ದಾರೆ.
ಇದಲ್ಲದೇ ಜಾನ್ವಿ 67.15 ಲಕ್ಷ ಮೌಲ್ಯದ ಮರ್ಸಿಡಿಸ್ ಜಿಎಲ್ ಇ 250ಡಿ ಕಾರು, ರೂ. 82.9 ಲಕ್ಷ BMW X5, ರೂ. 88.28 ಲಕ್ಷ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್,1.98 ಕೋಟಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ S560 ಅನ್ನು ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.