ದರ್ಶನ್ ಗೆ ಕೈ ಕೊಟ್ಟು ಓಡಿ ಹೋಗಿದ್ದ ಮ್ಯಾನೇಜರ್..! ಏಳು ವರ್ಷಗಳಾದರೂ ಈತನ ಸುಳಿವೇ ಇಲ್ಲ

Darshan: ಕೊಲೆ ಕೇಸ್‌ನಲ್ಲಿ ಅಂದರ್‌ ಆಗಿರುವ ದರ್ಶನ್‌ಗೆ, ಮ್ಯಾನೇಜರ್‌ ಒಬ್ಬ ಮೋಸ ಮಾಡಿ ಓಡಿಹೋಗಿದ್ದ. ಅದ್ರೆ ಈತ ಎಲ್ಲಿ ಹೋದ? ಈಗ ಏನು ಮಾಡುತ್ತಿದ್ದಾನೆ? ಯಾರಿಗೂ ಗೊತ್ತಿಲ್ಲ. ಹಾಗಾದರೆ  ಆ ವ್ಯಕ್ತಿ ಯಾರು, ಈ ಸ್ಟೋರಿ ಓದಿ.  

Written by - Zee Kannada News Desk | Last Updated : Jun 13, 2024, 12:16 PM IST
  • ಡೆವಿಲ್‌ಗೇನೆ ಮ್ಯಾನೇಜರ್ ಒಬ್ಬ ಮೋಸ ಮಾಡಿ ಓಡಿ ಹೋಗಿದ್ದ.
  • ದರ್ಶನ್ ವ್ಯವಹಾರಗಳನ್ನ ನೋಡಿಕೊಂಡಿದ್ದ ಮಲ್ಲಿಕಾರ್ಜುನ್ .
  • ಏಳು ವರ್ಷಗಳಾದರೂ ಈತನ ಬಗ್ಗೆ ಸಿಗದ ಸುಳಿವು.
ದರ್ಶನ್ ಗೆ ಕೈ ಕೊಟ್ಟು ಓಡಿ ಹೋಗಿದ್ದ ಮ್ಯಾನೇಜರ್..! ಏಳು ವರ್ಷಗಳಾದರೂ ಈತನ ಸುಳಿವೇ ಇಲ್ಲ title=

Darshan Manager: ದರ್ಶನ್, ಸದ್ಯಕ್ಕೆ ಎಲ್ಲೆಡೆ ಕೇಳ್ತಾ ಇರೋದು ಇದೊಂದೇ ಹೆಸರು. ತಮ್ಮ ಸಿನಿಮಾಗಳ ಮೂಲಕ ಸದ್ದು ಮಾಡೋದಕ್ಕಿಂತ , ವೈಯಕ್ತಿಕ ಜೀವನದಲ್ಲಿ ಡಿ ಬಾಸ್ ಸದ್ದು ಮಾಡಿದ್ದಾರೆ. 

ಇದೀಗ ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ದರ್ಶನ್ ಫ್ಯಾಮಿಲೀ ಇಂದಾ ಹಿಡಿದು ಸಹ ನಟರ ತನಕ ಕಿರೀಕ್ ಮಾಡಿಕೊಂಡ ಅದೆಷ್ಟೋ ಉದಹರಣೆಗಳು ಇವೆ. ಇಂತಹ ಡೆವಿಲ್‌ಗೇನೆ ಮ್ಯಾನೇಜರ್ ಒಬ್ಬ ಮೋಸ ಮಾಡಿ ಓಡಿ ಹೋಗಿದ್ದ.

ಹೌದು, ದರ್ಶನ್‌ರ ಸಿನಿಮಾ ಡೇಟ್ಸ್ ಹಾಗೂ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ್, ದಿಢೀರನೆ ನಾಪತ್ತೆಯಾಗಿದ್ದ ಆತ ಎಲ್ಲಿ ಹೋದ? ಈಗ ಏನು ಮಾಡ್ತಿದ್ದಾನೆ ?ಯಾರಿಗೂ ಗೊತ್ತಿಲ್ಲ.

ಇದನ್ನೂ ಓದಿ: ದರ್ಶನ್‌ ಗೆಳತಿ ಪವಿತ್ರಾ ಗೌಡ ಮೊದಲ ಪತಿಯಿಂದ ದೂರವಾಗಿದ್ದೇಕೆ?

ದರ್ಶನ್ ವ್ಯವಹಾರಗಳನ್ನ ನೋಡಿಕೊಂಡು ಇದ್ದಿದ್ದರೆ ಸರಿ ಹೋಗ್ತಾ ಇತ್ತು. ಆದ್ರೆ ಈತ ಸಿನಿಮಾ ನಿರ್ಮಾಣ ಮಾಡೋ ಕೆಲಸಕ್ಕೆ ಕೈ ಹಾಕಿದ್ದ. ಸಿನಿಮಾ ಹಿಟ್ ಕಾಣದೆ ಲಾಸ್ ಆಗಿತ್ತು. ಜೊತೆಗೆ ಫಿಲಂ ಡಿಸ್ಟ್ರಿಬ್ಯೂಷನ್‌ ಕೆಲಸ ಕೂಡ ಮಾಡುತ್ತಿದ್ದ  ಈತ ಹತ್ತು ಕೋಟಿ ಸಾಲ ಮಾಡಿಕೊಂಡಿದ್ದ.

ಡಿ ಬಾಸ್ ಜೊತೆ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ್ ಬಿ ಸಂಕೇಗೌಡರ್‌ ಸಡನ್ ಆಗಿ ಜುಲೈ, 2018 ರಂದು ನಾಪತ್ತೆಯಾಗಿಬಿಟ್ಟಿದ್ದ. ಆಗಿನ ಸಂದರ್ಭದಲ್ಲಿ ಈತ ಕಾಣೆಯಾದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು.

ಸಿನಿಮಾ ಡಿಸ್ಟ್ರಿಬ್ಯೂಷನ್‌ ಅಂತ ಅದೆಷ್ಟೋ ನಿರ್ಮಾಪಕರ ಬಳಿ ಹಣ ಪಡೆದು ಮಲ್ಲಿಕಾರ್ಜುನ್‌ ಎಲ್ಲರಿಗೂ ಪಂಗನಾಮ ಹಾಕಿದ್ದ. ಸಾಲದ ಸುಳಿಯಲ್ಲಿ ಸಿಲುಕಿದ ನಂತರ ಏನು ಮಾಡೋದು ಅಂತ ತಿಳಿಯದೆ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: ಕೊಲೆ ಕೇಸಲ್ಲಿ ಪವಿತ್ರಾ ಗೌಡ ಎ1, ದರ್ಶನ್‌ ಎ2: ರೇಣುಕಾಸ್ವಾಮಿ ಕೊಂದವರು 13 ಜನರಲ್ಲ 17 ಜನ

ಇಷ್ಟೆಲ್ಲಾ ಆದಮೇಲೂ ಅರ್ಜುನ್ ಸರ್ಜಾ ನಿರ್ದೇಶಿದ್ದ ಪ್ರೇಮ ಬರಹ ಡಿಸ್ಟ್ರಿಬ್ಯೂಷನ್ ಕೆಲಸಕ್ಕೆ  ಕೈ ಹಾಕಿದ್ದ ಮಲ್ಲಿಕಾರ್ಜುನ್ ಮತ್ತೆ ಲಾಸ್ ಅನುಭವಿಸಿ ಕಣ್ಮರೆಯಾಗಿದ್ದ. ನಿರ್ಮಪಕರ ಬಳಿ ಅಷ್ಟೇ ಅಲ್ಲದೆ ಸ್ವತಃ ದರ್ಶನ್ ಬಳಿಯೂ ಈತ ಸಾಲ ಮಾಡಿಕೊಂಡಿದ್ದ. ಆ ದಿನ ನಾಪತ್ತೆ ಆದ ಈತ ಎಲ್ಲಿಗೆ ಹೋದ? ಈಗ ಏನು ಮಾಡ್ತಿದ್ದಾನೆ? ಅನ್ನುವ ಮಾಹಿತಿ ಯಾರಿಗೂ ಸಿಕ್ಕಿಲ್ಲ. ಉಂಡ ಮನೆಗೆ ದ್ರೋಹ ಬಗೆದಂತೆ ದರ್ಶನ್ ಕೊಟ್ಟಿದ್ದ ಸಾಲ ಕೂಡ ತೀರಿಸದೆ ಕಾಣ್ಮರೆಯದ ಮಲ್ಲಿಕಾರ್ಜುನ್‌ ವಾಪಸ್ ಬರಲೇ ಇಲ್ಲ.

ಕಾಮೆಂಟ್ ಮಾಡಿದವನನ್ನೇ ಬಿಡಲಿಲ್ಲ ದರ್ಶನ್, ಮೋಸ ಮಾಡಿದವನನ್ನ ಹುಡುಕದೆ ಬಿಟ್ರಾ ಅನ್ನೋದು ಸದ್ಯಕ್ಕೆ  ಎಲ್ಲರನ್ನೂ ಕಾಡುತ್ತಿರೊ ಪ್ರಶ್ನೆ.

Trending News