ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ ಟ್ರೇಲರ್‌ ಔಟ್‌‌, ಇದು ಭಾರತೀಯ ಅವಿಭಕ್ತ ಕುಟುಂಬಗಳ ಆಚರಣೆ : ವಿಕ್ಕಿ ಕೌಶಲ್

The Great Indian Family : ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ನಟನೆಯ ಚಿತ್ರ ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼನ ಟ್ರೈಲರ್‌ ಇಂದು (ಸೆ.12) ರಂದು YRF ಯೂಟ್ಯೂಬ್ ಚಾನೆಲ್‌ ಮೂಲಕ ಬಿಡುಗಡೆಗೊಳಿಸಲಾಯಿತು.

Written by - Zee Kannada News Desk | Last Updated : Sep 12, 2023, 05:33 PM IST
  • ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ನಟನೆಯ ಚಿತ್ರ ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ.
  • ವಿಜಯ ಕೃಷ್ಣ ಆಚಾರ್ಯ ಅವರ ನಿರ್ದೇಶನದ ಚಿತ್ರದ ಟ್ರೇಲರ್‌ ಇಂದು ರಿಲೀಸ್‌ ಆಗಿದೆ.
  • ಭಾರತೀಯ ಅವಿಭಕ್ತ ಕುಟುಂಬಗಳ ಆಚರಣೆ ಈ ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ
ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ ಟ್ರೇಲರ್‌ ಔಟ್‌‌, ಇದು ಭಾರತೀಯ ಅವಿಭಕ್ತ ಕುಟುಂಬಗಳ ಆಚರಣೆ : ವಿಕ್ಕಿ ಕೌಶಲ್ title=

Trailer : ವಿಜಯ ಕೃಷ್ಣ ಆಚಾರ್ಯ ಅವರ ನಿರ್ದೇಶನದ ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ ಚಿತ್ರದ ಟ್ರೇಲರ್‌ ಇಂದು ರಿಲೀಸ್‌ ಆಗಿದೆ.  ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ ಕೌಟುಂಬಿಕ ಹಾಸ್ಯ ಚಿತ್ರವಾಗಿದ್ದು, ಯಶ್‌ ರಾಜ್‌ ಫಿಲ್ಮ್ಸ್‌ ಅಡಿಯಲ್ಲಿ ಆದಿತ್ಯಾ ಚೋಪ್ರಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಮತ್ತು ನಾಯಕಿಯಾಗಿ ಮಾನುಷಿ ಚಿಲ್ಲರ್‌ ಅಭಿನಯಿಸಿದ್ದಾರೆ.

ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ ಜೀವನದಲ್ಲಿ ಯಾವ ರೀತಿಯ ಸನ್ನಿವೇಶಗಳು ಬರುತ್ತವೆ ಮತ್ತು ಆ ಕುಟುಂಬ ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತವೆ. ಸಮಸ್ಯೆಗಳು ಬಂಧವನ್ನು ಹೇಗೆ ಪರೀಕ್ಷಿಸುತ್ತವೆ ಎನ್ನುವುದನ್ನು ತೋರಿಸಿಕೊಡುತ್ತದೆ.

ಇದನ್ನು ಓದಿ - ಚಂದಿರನಂತೆ ಹೊಳೆಯುತ್ತಿದೆ ಭರಾಟೆ ಬೆಡಗಿ ಶ್ರೀಲೀಲಾ ಚೆಲುವು...ಪೋಟೋಸ್‌ ನೋಡಿ

ಅಲ್ಲದೇ ಚಿತ್ರವು  ಒಂದು ಸರಳವಾದ, ಸಣ್ಣ ಪಟ್ಟಣದ ಕಥೆಯಾಗಿದ್ದು, ನಿಮ್ಮ ಹೃದಯವನ್ನು ಮುಟ್ಟುತ್ತದೆ. ಕುಟುಂಬದ ಸದಸ್ಯರು ಪರಸ್ಪರ ಪ್ರತಿಯೊಂದು ವಿಷಯದಲ್ಲಿ ಹಂಚಿಕೊಳ್ಳುವ ಭಾವನೆಯನ್ನು ಹೊಂದಿದ್ದು, ಅವಿನಾಭಾವ ಸಂಬಂಧವನ್ನು ಹೊಂದಿದ ಕಥೆಯಾಗಿದೆ. ಮತ್ತು ಭಾರತೀಯ ಕುಟುಂಬಗಳಲ್ಲಿ ಭಾವಾನಾತ್ಮಕ ಬಂಧ ಎಷ್ಟು ಪ್ರಬಲವಾಗಿರುತ್ತದೆ. ಭಾರತೀಯ ಅವಿಭಕ್ತ ಕುಟುಂಬಗಳ ಆಚರಣೆ ಈ ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ ಯಾಗಿದೆ. 

 
 
 
 

 
 
 
 
 
 
 
 
 
 
 

A post shared by Yash Raj Films (@yrf)

ಸಿನಿಮಾ ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ ಪ್ರತಿಯೊಬ್ಬರ  ಭಾವನೆಯನ್ನು ಸಂಪರ್ಕಿಸುತ್ತದೆ ಮತ್ತು ಬಹಳಷ್ಟು ಪ್ರೀತಿಯನ್ನು ನೀಡುತ್ತದೆ ಎಂದು ಭಾವಿಸುತ್ತೇನೆ." ಎಂದು ವಿಕ್ಕಿ ಕೌಶಲ್‌ ಮಾತನಾಡಿದ್ದಾರೆ. ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ ಸೆಪ್ಟೆಂಬರ್‌ 22ರಂದು ಸಿನಿಮಾ ರಿಲೀಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News