ಚಾಮರಾಜನಗರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ "ಯುವ" ಚಿತ್ರದ ಫಸ್ಟ್‌ ಸಾಂಗ್!‌

Yuva First Song: ಸಂತೋಷ್ ಆನಂದರಾಮ್ ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ "ಯುವ" ಚಿತ್ರದ ಮೊದಲ ಹಾಡು ಮಾರ್ಚ್ 2 ರಂದು ಬಿಡುಗಡೆಯಾಗಲಿದೆ.  

Written by - YASHODHA POOJARI | Last Updated : Mar 1, 2024, 11:27 AM IST
  • ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆ
  • ಸಂತೋಷ್ ಆನಂದರಾಮ್ ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ "ಯುವ" ಚಿತ್ರ
ಚಾಮರಾಜನಗರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ "ಯುವ" ಚಿತ್ರದ ಫಸ್ಟ್‌ ಸಾಂಗ್!‌  title=

Yuva: "ರಾಜಕುಮಾರ", "ಕೆ.ಜಿ.ಎಫ್", "ಕಾಂತಾರ" ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ಹಾಗೂ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಮೊದಲ ಚಿತ್ರ "ಯುವ". ವಿಜಯ್ ಕಿರಗಂದೂರ್ ಈ ಚಿತ್ರದ  ನಿರ್ಮಾಪಕರು.             

ಸಂತೋಷ್ ಆನಂದರಾಮ್ ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ "ಯುವ" ಚಿತ್ರದ ಮೊದಲ ಹಾಡು ಮಾರ್ಚ್ 2 ರಂದು ಬಿಡುಗಡೆಯಾಗಲಿದೆ.  

ಇದನ್ನೂ ಓದಿ-Kalaburagi News: ಬಿಜೆಪಿ ಸಂಸದ ಉಮೇಶ್ ಜಾಧವ್ ಆಪ್ತನ ಬರ್ಬರ ಹತ್ಯೆ

ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ದೂರಿ‌ ಸಮಾರಂಭದಲ್ಲಿ ಚಿತ್ರದ ಚೊಚ್ಚಲ ಗೀತೆ "ಒಬ್ಬನೇ ಶಿವ ಒಬ್ಬನೇ ಯುವ" ಹಾಡು ಅನಾವರಣವಾಗಲಿದೆ. 

ಇದನ್ನೂ ಓದಿ-Fruits For Healthy Skin: ದುಬಾರಿ ಕ್ರೀಂ ಅಲ್ಲ, ಮುಖದ ಕಾಂತಿ ಹೆಚ್ಚಿಸಲು ಸೇವಿಸಿ ಈ ಅಗ್ಗದ ಹಣ್ಣುಗಳನ್ನು 

ದೊಡ್ಮನೆ ಮೊಮ್ಮಗ ಯುವ ರಾಜಕುಮಾರ್ ಮೊದಲ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ಮಾರ್ಚ್ 29 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ.  

ಯುವ ರಾಜಕುಮಾರ್ ಹಾಗೂ ಸಪ್ತಮಿಗೌಡ ನಾಯಕ - ನಾಯಕಿಯಾಗಿ ನಟಿಸಿರುವ "ಯುವ" ಚಿತ್ರದ ತಾರಾಬಳಗಲ್ಲಿ  ಅಚ್ಯುತಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರಿದ್ದಾರೆ. .

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News