Thalapathy Vijay : ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವಾದ ಸ್ಟಾರ್‌ ನಟ

Thalapathy Vijay Education Foundation : ತಮಿಳಿನ ಖ್ಯಾತ ನಟ ನಟ ದಳಪತಿ ವಿಜಯ್‌ ಈ ವರ್ಷ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ತಮಿಳುನಾಡಿನ 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದಾರೆ.

Written by - Savita M B | Last Updated : Jun 18, 2023, 10:37 AM IST
  • ನಟ ವಿಜಯ್‌ ಉತ್ತೀರ್ಣರಾದ ಮಕ್ಕಳಿಗೆ ಸನ್ಮಾನ ಮಾಡಿದ್ದಾರೆ
  • ಇದೇ ವೇಳೆ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಸಹ ಹೇಳಿದ್ದಾರೆ
  • ವಿದ್ಯೆ ಕಸಿದುಕೊಳ್ಳಲು ಸಾದ್ಯವಿಲ್ಲ ಎಂದ ನಟ
Thalapathy Vijay : ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವಾದ ಸ್ಟಾರ್‌ ನಟ title=

Thalapathy Vijay : ನಟ ವಿಜಯ್‌ ಉತ್ತೀರ್ಣರಾದ ಮಕ್ಕಳಿಗೆ ಸನ್ಮಾನ ಮಾಡಿದ್ದು, ಇದೇ ವೇಳೆ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಸಹ ಹೇಳಿದ್ದಾರೆ. ಡಾ. ಬಿ. ಆರ್.‌ ಅಂಬೇಡ್ಕರ್‌, ಕಾಮರಾಜ್‌ ಮತ್ತು ಪೆರಿಯಾರ್ ಅವರಂತಹ ಅದ್ಭುತ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಿ ಎಂದು ಹೇಳಿದ್ದಾರೆ. 

ದಳಪತಿ ವಿಜಯ್‌ ಎಜುಕೇಶನ್‌ ಫೌಂಡೇಶನ್‌ 2022-23ನೇ ಸಾಲಿನ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳಲ್ಲಿ ದಾಖಲೆಯ ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಲು ನಟ ಶನಿವಾರ ಚೆನ್ನೈನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 

ಇದನ್ನೂ ಓದಿ-Adipusush ಚಿತ್ರ ನಿರ್ಮಾಪಕರಿಗೆ ಬಿಗ್ ಶಾಕ್, ಎಲ್ಲಾ ಪ್ರಯತ್ನಗಳ ಹೊರತಾಗಿ ಚಿತ್ರ ಆನ್ಲೈನ್ ನಲ್ಲಿ ಸೋರಿಕೆ

ಈ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ದಳಪತಿ ವಿಜಯ್‌ ಅವರು ಆಗಮಿಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವ ಧನವನ್ನು ನೀಡಿ ಉನ್ನತ ವ್ಯಾಸಂಗಕ್ಕೆ ನೆರವಾಗಿದ್ದಾರೆ. 

ಸನ್ಮಾನದ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು "ಡಾ. ಬಿ. ಆರ್.‌ ಅಂಬೇಡ್ಕರ್‌, ಕಾಮರಾಜ್‌ ಮತ್ತು ಪೆರಿಯಾರ್‌ ಅವರಂತಹ ಮಹಾನ್‌ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಿ. ನೀವು ಭವಿಷ್ಯದ ಪ್ರಜೆಗಳು ಹೀಗಾಗಿ ಮತ ಪಡೆಯುವಾಗ ಹಣ ತೆಗೆದುಕೊಳ್ಳುವುದು ತಪ್ಪು ಎಂಬುದನ್ನು ನಿಮ್ಮ ಪೋಷಕರಿಗೆ ತಿಳಿಸಿ ಈ ಬದಲಾವಣೆ ನಿಮ್ಮಿಂದ ಮಾತ್ರ ಸಾದ್ಯ" ಎಂದಿದ್ದಾರೆ. 

ಇದನ್ನೂ ಓದಿ-ʼಭರ್ಜರಿ ಬ್ಯಾಚುಲರ್‌ʼಗಳ ಕಾಲೆಳೆಯೋರು ಇವರೇ..ಜೀ ಕನ್ನಡಕ್ಕೆ ಮರಳಿದ ಅಕುಲ್‌ ಬಾಲಾಜಿ..!

ಪರೀಕ್ಷೆಯಲ್ಲಿ ಅತಿಹೆಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವ ಹಿಂದಿನ ಉದ್ದೇಶವನ್ನು ಸಹ ತುಂಬಿದ ಕಾರ್ಯಕ್ರಮದಲ್ಲಿ ದಳಪತಿ ವಿಜಯ್‌ "ನಾನು ಸಾಧಾರಣ ವಿದ್ಯಾರ್ಥಿಯಾಗಿದ್ದವನು, ನಮ್ಮ ಬಳಿ ಆಸ್ತಿ ಇದ್ದರೆ ಅದನ್ನು ಯಾರಾದರೂ ಕಸಿದುಕೊಳ್ಳಬಹುದು. ಹಣ ಇದ್ದರೆ ಅದನ್ನೂ ಕೂಡ ಕಡಿಯಬಹುದು ಆದರೆ ನಮ್ಮಲ್ಲಿರುವ ವಿದ್ಯೆ ಜ್ಞಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಮಾತಿನಿಂದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮವನ್ನು ರೂಪಿಸಿದೆ" ಎಂದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News