'ಹನುಮಾನ್' ಚಿತ್ರತಂಡದಿಂದ ಭರ್ಜರಿ ಆಫರ್..! ಮಿಸ್‌ ಮಾಡ್ಬೇಡಿ.. 

Hanuman Movie : ಸಂಕ್ರಾಂತಿಯಂದು ಬಿಡುಗಡೆಯಾದ 'ಹನುಮಾನ್' ಇಂದಿಗೂ ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾದ ನಿರ್ಮಾಪಕರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರೇಕ್ಷಕರು ಇದರ ಸದುಪಯೋಗ ಪಡೆಯವಂತೆ ತಿಳಿಸಿದ್ದಾರೆ.. ಬನ್ನಿ ಆ ಆಫರ್‌ ಏನು ಅಂತ ನೋಡೋಣ..

Written by - Krishna N K | Last Updated : Feb 17, 2024, 07:07 PM IST
  • 'ಹನುಮಾನ್' ಇಂದಿಗೂ ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
  • ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
  • ಒಂದು ತಿಂಗಳಾದರೂ ಚಿತ್ರಮಂದಿರಗಳು ಉತ್ತಮ ಆಕ್ಯುಪೆನ್ಸಿಯೊಂದಿಗೆ ಓಡುತ್ತಿವೆ.
'ಹನುಮಾನ್' ಚಿತ್ರತಂಡದಿಂದ ಭರ್ಜರಿ ಆಫರ್..! ಮಿಸ್‌ ಮಾಡ್ಬೇಡಿ..  title=

Hanuman movie ticket offer : ತೆಲುಗು ಚಿತ್ರರಂಗದಲ್ಲಿ 'ಹನುಮಾನ್' ಚಿತ್ರ ಸಂಚಲನ ಮೂಡಿಸಿತ್ತು. ತೇಜ ಸಜ್ಜಾ ನಾಯಕನಾಗಿ ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರ ಹೊಸ ದಾಖಲೆಗಳನ್ನು ಮಾಡಿದೆ. ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸುತ್ತಿದೆ. 

ಸಣ್ಣ ನಿರೀಕ್ಷೆಯೊಂದಿಗೆ ತೆರೆ ಕಂಡ ಹನುಮಾನ್‌ ಚಿತ್ರ, ಟಾಲಿವುಡ್‌ನಲ್ಲಿ ದಾಖಲೆಗಳನ್ನು ಬರೆಯುವುದರ ಜೊತೆ ಸೌತ್‌ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾದರೂ ಚಿತ್ರಮಂದಿರಗಳು ಉತ್ತಮ ಆಕ್ಯುಪೆನ್ಸಿಯೊಂದಿಗೆ ಓಡುತ್ತಿವೆ.

ಇದನ್ನೂ ಓದಿ:ಕರಾವಳಿ ಬೆಡಗಿ ʼಕೃತಿ ಶೆಟ್ಟಿʼ ನಿಜವಾದ ಹೆಸರೇನು ಗೊತ್ತಾ?

ಈ ಹಿನ್ನಲೆಯಲ್ಲಿ 'ಹನುಮಾನ್' ಚಿತ್ರತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ಚಿತ್ರವನ್ನು ಎಲ್ಲಾ ಪ್ರೇಕ್ಷಕರಿಗೆ ತಲುಪಿಸುವ ದೃಷ್ಟಿಯಿಂದ ಟಿಕೆಟ್ ದರದಲ್ಲಿ ಬದಲಾವಣೆ ಮಾಡಿದೆ. ಸದ್ಯ ಈ ಸಿನಿಮಾದ ಸಿಂಗಲ್ ಸ್ಕ್ರೀನ್ ಟಿಕೆಟ್ ಬೆಲೆ ರೂ.175 ಇದೆ. ಇನ್ನು ಮುಂದೆ ಕೇವಲ 100 ರೂ.ನೀಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ರೂ.295ರ ಟಿಕೆಟ್ ದರವನ್ನು ರೂ.150ಕ್ಕೆ ನೀಡಲಾಗುವುದು ಎಂದು ತಿಳಿಸಿದೆ. ಆದರೆ, ಈ ಅವಕಾಶ ಫೆಬ್ರವರಿ 16 ರಿಂದ 23 ರವರೆಗೆ ಮಾತ್ರ ಲಭ್ಯವಿರುತ್ತದೆ. 

ಇತ್ತೀಚೆಗೆ ಬಿಡುಗಡೆಯಾದ ಚಲನಚಿತ್ರಗಳು ಮೂರ್ನಾಲ್ಕು ವಾರಗಳಲ್ಲಿ OTT ಗೆ ಬರುತ್ತಿವೆ. ಹನುಮಾನ್‌ ಸಿನಿಮಾದೊಂದಿಗೆ ತೆರೆ ಕಂಡ ಸ್ಟಾರ್ ಹೀರೋಗಳ ಚಿತ್ರಗಳೂ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿವೆ. ಆದರೆ, ‘ಹನುಮಾನ್‌’  ಇಂದಿಗೂ ಥಿಯೇಟರ್‌ಗಳಲ್ಲಿ ಓಡುತ್ತಿದೆ. ಈ ಸಿನಿಮಾ ಇನ್ನೂ 300ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಇಳಿಕೆಯಿಂದ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News