Bollywood: ಬಾಲ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಕ್ರಿಕೆಟ್ ಆಡಿದ್ದ ಈತ ಇಂದು ಖ್ಯಾತ ನಟ!

Bollywood Star Actor Saqib Saleem: ಬಾಲಿವುಡ್‌ಗೂ ಮತ್ತು ಕ್ರಿಕೆಟ್‌ ಪ್ರಪಂಚಕ್ಕೂ ಆಳವಾದ ಸಂಬಂಧವಿದೆ.. ಒಂದಲ್ಲಾ ಒಂದು ಕಡೆಯಿಂದ ಕ್ರಿಕೆಟಿಗರು ಹಿಂದಿ ಚಿತ್ರರಂಗಕ್ಕೆ ಹತ್ತಿರವಾಗಿರುತ್ತಾರೆ.. ಇದೀಗ ಬಾಲ್ಯದಲ್ಲಿ ವಿರಾಟ್‌ ಕೊಹ್ಲಿ ಜೊತೆ ಆಟವಾಡಿದ್ದ ನಟನ ಬಗ್ಗೆ ನಾವು ಹೇಳಲಿದ್ದೇವೆ.. 

Written by - Savita M B | Last Updated : Apr 7, 2024, 08:18 PM IST
  • ಈ ನಟ ಕೂಡ ಕ್ರೀಡಾಂಗಣದಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದಾರೆ
  • ಅಷ್ಟೇ ಅಲ್ಲ, ಜಾನ್ ಅಬ್ರಹಾಂ ಮತ್ತು ವರುಣ್ ಧವನ್ ಅಭಿನಯದ ‘ಡಿಶೂಮ್’ ಸಿನಿಮಾದಲ್ಲಿ ಕ್ರಿಕೆಟಿಗನ ಪಾತ್ರವನ್ನೂ ಮಾಡಿದ್ದಾರೆ.
Bollywood: ಬಾಲ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಕ್ರಿಕೆಟ್ ಆಡಿದ್ದ ಈತ ಇಂದು ಖ್ಯಾತ ನಟ!  title=

Virat Kohli Chilldhood Friend: ಬಾಲ್ಯದಲ್ಲಿ ಕ್ರಿಕೆಟ್ ಲೋಕದ ರಾಜ ಎಂದೇ ಕರೆಸಿಕೊಂಡಿದ್ದ ವಿರಾಟ್ ಜೊತೆ ಈ ನಟ ಕೂಡ ಕ್ರೀಡಾಂಗಣದಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದಾರೆ. ಅಷ್ಟೇ ಅಲ್ಲ, ಜಾನ್ ಅಬ್ರಹಾಂ ಮತ್ತು ವರುಣ್ ಧವನ್ ಅಭಿನಯದ ‘ಡಿಶೂಮ್’ ಸಿನಿಮಾದಲ್ಲಿ ಕ್ರಿಕೆಟಿಗನ ಪಾತ್ರವನ್ನೂ ಮಾಡಿದ್ದಾರೆ.  

ಅವರು ಬೇರೆ ಯಾರೂ ಅಲ್ಲ.. ಸಿನಿಮಾಳಿಂದ ಒಟಿಟಿಯಲ್ಲಿ ತನ್ನ ಛಾಪು ಮೂಡಿಸಿರುವ ನಟ ಸಾಕಿಬ್ ಸಲೀಂ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಖ್ಯಾತ ನಟಿ ಹುಮಾ ಖುರೇಷಿ ಅವರ ಸಹೋದರ ಸಾಕಿಬ್ ಸಲೀಂ ಕೂಡ ನಟನಾ ಜಗತ್ತಿನಲ್ಲಿ ಯಶಸ್ವಿ ಛಾಪು ಮೂಡಿಸಿದ್ದಾರೆ. ಆದರೆ ಸಾಕಿಬ್ ಗ್ಲಾಮರ್ ಜಗತ್ತಿಗೆ ಪ್ರವೇಶಿಸುವ ಮೊದಲು ಕ್ರಿಕೆಟ್ ಆಡುತ್ತಿದ್ದರು ಎಂಬುದು ಕೆಲವೇ ಜನರಿಗೆ ತಿಳಿದಿದೆ.. 

ಇದನ್ನೂ ಓದಿ-Vettaiyan : ಬಾಕ್ಸಾಫೀಸ್ ಬೇಟೆಗೆ ತಲೈವಾ ರೆಡಿ...! ಅಕ್ಟೋಬರ್‌ನಲ್ಲಿ ರಜನಿಯ 'ವೆಟ್ಟೈಯಾನ್' ರಿಲೀಸ್‌

ಜಮ್ಮು ಮತ್ತು ಕಾಶ್ಮೀರ ಪರ ಕ್ರಿಕೆಟ್ ಆಡಿದ್ದೇನೆ ಎಂದು ಸ್ವತಃ ಸಾಕಿಬ್ ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲ, ಬಾಲ್ಯದಲ್ಲಿ ಕಿಂಗ್ ಕೊಹ್ಲಿ ಅಂದರೆ ವಿರಾಟ್ ಕೊಹ್ಲಿ ಜೊತೆಗೆ ಕ್ರಿಕೆಟ್ ಆಡಿದ್ದೆ ಎಂದು ಹೇಳಿದ್ದರು.. 

ಇದನ್ನೂ ಓದಿ-ಹೆಣ್ಣುಕುಲಕ್ಕೆ ನೋವು ಕೊಟ್ಟವ ಉದ್ಧಾರವಾದ ಇತಿಹಾಸವಿಲ್ಲ: ನಟ ಜಗ್ಗೇಶ್ ಆಕ್ರೋಶ

ಇನ್ನು ಸಾಕಿಬ್ ಸಲೀಂ 'ಮುಜ್ಸೆ ಫ್ರೆಂಡ್‌ಶಿಪ್ ಕರೋಗೆ' ಚಿತ್ರದ ಮೂಲಕ ನಟನೆಗೆ ಕಾಲಿಟ್ಟರು. ಅವರ ಮೊದಲ ಚಿತ್ರ ಯಶಸ್ವಿಯಾಗಿ ಸ್ಟಾರ್ ಆದರು. ಇದರ ನಂತರ, 'ಮೇರೆ ಡ್ಯಾಡ್ ಕಿ ಮಾರುತಿ', 'ಬಾಂಬೆ ಟಾಕೀಸ್' ಮತ್ತು 'ಡಿಶೂಮ್' ಹೊರತುಪಡಿಸಿ, ಸಾಕಿಬ್ '83', ಸಲ್ಮಾನ್ ಖಾನ್ ಅವರ 'ರೇಸ್ 3' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಚಲನಚಿತ್ರಗಳ ಹೊರತಾಗಿ, 'ರಂಗಬಾಜ್' ಮತ್ತು 'ಕ್ರ್ಯಾಕ್‌ಡೌನ್' ನಂತಹ ಅನೇಕ ಅತ್ಯುತ್ತಮ ವೆಬ್‌ ಸಿರೀಸ್‌ನಲ್ಲಿಯೂ ಸಾಕಿಬ್ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ನಟನೆಯ ಹೊರತಾಗಿ, ಸಾಕಿಬ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ... ಅಲ್ಲಿ ಪ್ರತಿದಿನ ಅವರು ತಮ್ಮ ಇತ್ತೀಚಿನ ಪೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News