Actress Suicide: ಡೆತ್‌ನೋಟ್‌ ಬರೆದಿಟ್ಟು ಯುವನಟಿ ಆತ್ಮಹತ್ಯೆ..!

ದೀಪಾ ಕಳೆದು ಕೆಲವು ದಿನಗಳಿಂದ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದರಂತೆ. ಅವರ ಆತ್ಮಹತ್ಯೆಗೆ ಪ್ರೇಮವೈಫಲ್ಯವೇ ಕಾರಣವೇಂದು ಹೇಳಲಾಗುತ್ತಿದೆ.

Written by - Puttaraj K Alur | Last Updated : Sep 19, 2022, 03:11 PM IST
  • ತಮಿಳು ಚಿತ್ರರಂಗದ ಪ್ರತಿಭಾನ್ವಿತ ಯುವನಟಿ ದೀಪಾ ಆತ್ಮಹತ್ಯೆ
  • ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾದ 29 ವರ್ಷದ ನಟಿ
  • ಆತ್ಮಹತ್ಯೆಗೆ ಪ್ರೇಮವೈಫಲ್ಯವೇ ಕಾರಣವೆಂದು ಹೇಳಲಾಗುತ್ತಿದೆ
Actress Suicide: ಡೆತ್‌ನೋಟ್‌ ಬರೆದಿಟ್ಟು ಯುವನಟಿ ಆತ್ಮಹತ್ಯೆ..! title=
ಪ್ರತಿಭಾನ್ವಿತ ಯುವನಟಿ ಆತ್ಮಹತ್ಯೆ

ನವದೆಹಲಿ: ತಮಿಳು ಚಿತ್ರರಂಗದ ಪ್ರತಿಭಾನ್ವಿತ ಯುವನಟಿ ದೀಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ದೀಪಾಗೆ ಪಾಲಿನ್ ಜೆಸ್ಸಿಕಾ ಎಂಬ ಮತ್ತೊಂದು ಹೆಸರು ಸಹ ಇತ್ತು. 29 ವರ್ಷದ ನಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆಂಧ್ರ ಮೂಲದ ತಮಿಳು ನಟಿ ದೀಪಾ 'ತುಪ್ಪರಿವಾಲನ್' ಮತ್ತು 'ವೈತಾ' ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಭಾನುವಾರ (ಸೆ.18) ಬೆಳಗ್ಗೆ ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೂ ಮುನ್ನ ತಮ್ಮ ಡೈರಿಯಲ್ಲಿ ನಟಿ ಡೆತ್‌ನೋಟ್‌ ಬರೆದಿದ್ದಾರೆ.   

ಇದನ್ನೂ ಓದಿ: Bigg Boss Kannada 9 ಗಾಗಿ ಹೊಸ ನಿಯಮ ಘೋಷಿಸಿದ ಕಿಚ್ಚ ಸುದೀಪ್.!?

ವರದಿಗಳ ಪ್ರಕಾರ ದೀಪಾ ಕಳೆದ ಕೆಲವು ದಿನಗಳಿಂದ ಸರಿಯಾಗಿ ಕರೆ ಸ್ವೀಕರಿಸುತ್ತಿರಲಿಲ್ಲ. ಅವರ ಸ್ನೇಹಿತ ಪ್ರಭಾಕರನ್ ಸ್ಥಳಕ್ಕೆ ಧಾವಿಸಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಆಕೆಯ ಸಹೋದರ ಮತ್ತು ಕೋಯಂಬೇಡು ಪೊಲೀಸರಿಗೆ ಪ್ರಭಾಕರನ್ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ದೀಪಾ ಕಳೆದು ಕೆಲವು ದಿನಗಳಿಂದ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದರಂತೆ. ಅವರ ಆತ್ಮಹತ್ಯೆಗೆ ಪ್ರೇಮವೈಫಲ್ಯವೇ ಕಾರಣವೆಂದು ಹೇಳಲಾಗುತ್ತಿದೆ. ತನ್ನ ಡೆತ್‌ ನೋಟ್‍ನಲ್ಲಿ ತಾನು ಪ್ರೀತಿಸುತ್ತಿದ್ದ ಯುವಕನ ಹೆಸರು ಉಲ್ಲೇಖಿಸದ ನಟಿ ದೀಪಾ, ‘ಕೊನೆವರೆಗೂ ನಾನು ಅವನನ್ನೇ ಪ್ರೀತಿಸುತ್ತೇನೆ’ ಅಂತಾ ಹೇಳಿದ್ದಾರೆ. ನಟಿ ದೀಪಾ ಆತ್ಮಹತ್ಯೆ ಮಾಡಿಕೊಂಡಿರುವುದು ತಮಿಳು ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಇಷ್ಟು ಸಣ್ಣ ವಯಸ್ಸಿಗೆ ಪ್ರತಿಭಾನ್ವಿತ ನಟಿ ಆತ್ಮಹತ್ಯೆಯ ದುಡುಕು ನಿರ್ಧಾರ ತೆಗೆದುಕೊಂಡಿದ್ದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮತ್ತೆ ಸಂಕಷ್ಟ

ದೀಪಾ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಆಕೆಯ ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ನಟಿಯ ಫೋಟೋವನ್ನು ಹಂಚಿಕೊಂಡು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News