ರಜನಿಕಾಂತ್ ‘ತಲೈವರ್ 170’ ಶೂಟಿಂಗ್ ವೇಳೆ ಅವಘಡ; ನಟಿಗೆ ಗಂಭೀರ ಗಾಯ!

Thalaivar 170: ವೈದ್ಯರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಲು ಶೂಟಿಂಗ್‌ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನಾನು ಬೇಗ ಚೇತರಿಸಿಕೊಂಡು ಶೂಟಿಂಗ್ ಸೆಟ್‌ಗೆ ಹೋಗುತ್ತೇನೆ ಎಂದು ನಟಿ ರಿತಿಕಾ ಸಿಂಗ್ ಹೇಳಿದ್ದಾರೆ.

Written by - Puttaraj K Alur | Last Updated : Dec 4, 2023, 11:03 PM IST
  • ರಜಿನಿಕಾಂತ್ 'ತಲೈವರ್ 170' ಚಿತ್ರದ ಶೂಟಿಂಗ್ ವೇಳೆ ಅವಘಡ
  • ಸಿನಿಮಾ ಶೂಟಿಂಗ್ ವೇಳೆ ಗಾಯಗೊಂಡ ನಟಿ ರಿತಿಕಾ ಸಿಂಗ್
  • ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಹಂಚಿಕೊಂಡ ನಟಿ
ರಜನಿಕಾಂತ್ ‘ತಲೈವರ್ 170’ ಶೂಟಿಂಗ್ ವೇಳೆ ಅವಘಡ; ನಟಿಗೆ ಗಂಭೀರ ಗಾಯ! title=
‘ತಲೈವರ್ 170’ ಶೂಟಿಂಗ್ ವೇಳೆ ಅವಘಡ!

ನವದೆಹಲಿ: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ತಲೈವರ್ 170' ಚಿತ್ರದ ಶೂಟಿಂಗ್ ವೇಳೆ ನಟಿ ರಿತಿಕಾ ಸಿಂಗ್ ಗಾಯ ಮಾಡಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ನಟಿ, ಗಾಯವಾಗಿರುವ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

'ತಲೈವರ್ 170' ಚಿತ್ರದ ಮೂವರು ನಟಿಯರ ಪೈಕಿ ರಿತಿಕಾ ಸಿಂಗ್‌ ಸಹ ಒಬ್ಬರು. ಅವರು ಯಾವ ಸೆಟ್‌ನಲ್ಲಿ ಗಾಯಗೊಂಡಿದ್ದು ಎಂಬುದನ್ನು ಉಲ್ಲೇಖಿಸಿಲ್ಲ. ಆದರೆ ಇದು ಅವರ ಮುಂಬರುವ ಚಿತ್ರ 'ತಲೈವರ್ 170' ಶೂಟಿಂಗ್ ವೇಳೆ ನಡೆದಿರುವ ಘಟನೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Samantha : ಶೀಘ್ರದಲ್ಲೇ ತಾಯಿಯಾಗಲಿರುವ ಸಮಂತಾ ರುತ್‌ ಪ್ರಭು.!?

‘ಇರುಧಿ ಸುತ್ತು’, ‘ಆಂಡವನ್ ಕಟ್ಟಲೈ’ ಮತ್ತು ‘ಕೊಲೈ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ರಿತಿಕಾ ಸಿಂಗ್, ಈ ಅವಘಡಕ್ಕೆ ತಮ್ಮನ್ನು ತಾವು ದೂಷಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಮೊದಲು ತಮ್ಮ ಗಾಯಗಳ ಚಿತ್ರ ಹಂಚಿಕೊಂಡಿದ್ದು, ಘಟನೆಯ ಬಗ್ಗೆ ಬರೆದುಕೊಂಡಿದ್ದಾರೆ.

‘ನಾನು ತೋಳದೊಂದಿಗೆ ಜಗಳ ಮಾಡಿಕೊಂಡಂತೆ ತೋರುತ್ತಿದೆ! ನಾನು ಸಾಕಷ್ಟು ಅಸಮಾಧಾನಗೊಂಡಿದ್ದೇನೆ. ಅಲ್ಲಿ ಗಾಜು ಇದೆ ಹುಷಾರಾಗಿರು ಅಂತಾ ಹೇಳುತ್ತಲೇ ಇದ್ದರು. ನನಗೆ ಎಷ್ಟೇ ಹೇಳಿದರೂ ನಾನು ಎಚ್ಚರಿಕೆ ವಹಿಸಲಿಲ್ಲ. ನೀವು ಕೆಲವೊಮ್ಮೆ ಆವೇಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಅಲ್ಲವೇ? ನಾನು ನಿಯಂತ್ರಣ ಕಳೆದುಕೊಂಡೆ. ಈ ಅಪಘಾತ ಸಂಭವಿಸಿತು. ಹೀಗಾಗಿರುವುದಕ್ಕೆ ನಾನು ಸಾಕಷ್ಟು ಬೇಸರ ಮಾಡಿಕೊಂಡಿದ್ದೇನೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ರೀಲ್ಸ್ ಮಾಡುತ್ತಾ ಲಿಪ್ ಲಾಕ್ ಮಾಡಿದ ನಿವೇದಿತಾ-ಚಂದನ್ ಶೆಟ್ಟಿ: ಇನ್ನೂ ಏನೇನ್ ನೋಡ್ಬೇಕೋ ಅಂದ ನೆಟ್ಟಿಗರು

‘ವೈದ್ಯರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಲು ಶೂಟಿಂಗ್‌ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನಾನು ಬೇಗ ಚೇತರಿಸಿಕೊಂಡು ಶೂಟಿಂಗ್ ಸೆಟ್‌ಗೆ ಹೋಗುತ್ತೇನೆ. ನನಗೆ ಈಗ ಯಾವುದೇ ನೋವು ಕಾಣಿಸಿತ್ತಿಲ್ಲ. ಆಮೇಲೆ ಈ ಗಾಯಗಳು ನನಗೆ ನೋವು ನೀಡುತ್ತವೆ. ನಾನು ಸಿನಿಮಾ ಶೂಟಿಂಗ್ ಸೆಟ್‌ನಿಂದ ನೇರವಾಗಿ ಆಸ್ಪತ್ರೆಗೆ ಹೋಗುತ್ತಿದ್ದೇನೆ. ಈ ಗಾಯಗಳು ಬೇಗ ಗುಣವಾದ್ರೆ ನಾನು ಮತ್ತೆ ಶೂಟಿಂಗ್‌ಗೆ ವಾಪಸ್ ಹೋಗುತ್ತೇನೆ’ ಅಂತಾ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News