Sunny Leone: ಮಂಡ್ಯ ಫ್ಯಾನ್ಸ್ ಅಭಿಮಾನಕ್ಕೆ ಫಿದಾ ಆದ್ರು ಸನ್ನಿ ಲಿಯೋನ್‌: ಟ್ವೀಟ್‌ ಮಾಡಿದ್ದೇನು ಗೊತ್ತಾ!

ಈ ಸಂಭ್ರಮದ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಅನೇಕ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿದ್ದವು. ಈ ವಿಚಾರ ಸನ್ನಿ ಅವರ ಕಿವಿಗೆ ಬೀಳುತ್ತಿದ್ದಂತೆ ಟ್ವೀಟ್‌ ಮೂಲಕ ಧನ್ಯವಾದ ಹೇಳಿರುವ ಅವರು, "ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ಈ ಕೆಲಸಕ್ಕೆ ಗೌರವ ಸೂಚಿಸಲು ನಾನೂ ರಕ್ತದಾನ ಮಾಡುತ್ತೇನೆ. ಧನ್ಯವಾದಗಳು. ನಿಜವಾಗಿಯೂ ನೀವೆಲ್ಲರೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸಿದ್ದೀರಿ" ಎಂದು ಬರೆದುಕೊಂಡಿದ್ದಾರೆ. 

Written by - Bhavishya Shetty | Edited by - Bhavishya Shetty | Last Updated : May 17, 2022, 12:10 PM IST
  • ಮಂಡ್ಯ ಅಭಿಮಾನಿಗಳಿಂದ ಸನ್ನಿ ಹುಟ್ಟುಹಬ್ಬ ಆಚರಣೆ
  • ರಕ್ತದಾನ ಶಿಬಿರ ಹಾಗೂ ಬಾಡೂಟ ಹಾಕಿ ಸಂಭ್ರಮಾಚರಣೆ
  • ಟ್ವೀಟ್‌ ಮೂಲಕ ಧನ್ಯವಾದ ತಿಳಿಸಿದ ಬಾಲಿವುಡ್‌ ನಟಿ
Sunny Leone: ಮಂಡ್ಯ ಫ್ಯಾನ್ಸ್ ಅಭಿಮಾನಕ್ಕೆ ಫಿದಾ ಆದ್ರು ಸನ್ನಿ ಲಿಯೋನ್‌: ಟ್ವೀಟ್‌ ಮಾಡಿದ್ದೇನು ಗೊತ್ತಾ!  title=
Sunny Leone

ಮಂಡ್ಯ: ಮೇ 13ರಂದು ಬಾಲಿವುಡ್‌ ಸ್ಟಾರ್‌ ನಟಿ ಸನ್ನಿ ಲಿಯೋನ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ದೇಶದ ಹಲವಾರು ಭಾಗಗಳಲ್ಲಿ ಅವರ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟಿಯ ಬರ್ತ್‌ಡೇಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಅಂತೆಯೇ ಮಂಡ್ಯದ ಕೊಮ್ಮೇರಹಳ್ಳಿಯಲ್ಲಿಯೂ ಸನ್ನಿ ಅಭಿಮಾನಿಗಳು  ರಕ್ತದಾನ ಶಿಬಿರ ಹಾಗೂ ಬಾಡೂಟ ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ. 

ಇದನ್ನು ಓದಿ: ‘ವಿಕ್ರಾಂತ್ ರೋಣ’ಗೆ ಸಲ್ಮಾನ್ ಸಾಥ್ : ಬಾಲಿವುಡ್ ಅಂಗಳದಲ್ಲಿ ಕಿಚ್ಚನ ಹವಾ!

ಈ ಸಂಭ್ರಮದ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಅನೇಕ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿದ್ದವು. ಈ ವಿಚಾರ ಸನ್ನಿ ಲಿಯೋನ್‌ ಅವರ ಕಿವಿಗೆ ಬೀಳುತ್ತಿದ್ದಂತೆ ಟ್ವೀಟ್‌ ಮೂಲಕ ಧನ್ಯವಾದ ಹೇಳಿರುವ ಅವರು, "ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ಈ ಕೆಲಸಕ್ಕೆ ಗೌರವ ಸೂಚಿಸಲು ನಾನೂ ರಕ್ತದಾನ ಮಾಡುತ್ತೇನೆ. ಧನ್ಯವಾದಗಳು. ನಿಜವಾಗಿಯೂ ನೀವೆಲ್ಲರೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸಿದ್ದೀರಿ" ಎಂದು ಬರೆದುಕೊಂಡಿದ್ದಾರೆ. 

 

 

ಸ್ಟಾರ್‌ ಹೀರೋಗಳ ಸಿನಿಮಾದಲ್ಲಿ ನಟಿಸಿರುವ ಸನ್ನಿ ಸಾಮಾಜಿಕ  ಕಾರ್ಯ ಮಾಡುವ ಮೂಲಕ ಜನಮನ ಗೆದ್ದಿದ್ದಾರೆ.  ನೆರೆ ಸಂತ್ರಸ್ತರಿಂದ ಹಿಡಿದು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಜನರಿಗೆ ಸಹಾಯ ಮಾಡಲು ಮುಂದಾಗಿದ್ದರು. ಇಂತಹ ಕಾರ್ಯಕ್ರಮದ ಮೂಲಕವೇ ಸನ್ನಿ ಲಿಯೋನ್‌ ಪಡ್ಡೆ ಹುಡುಗರ ಮನೆ ಗೆದ್ದಿದ್ದರು. 

ಇದನ್ನು ಓದಿ: Kannada Actress Death: ಫ್ಯಾಟ್‌ ಸರ್ಜರಿ ವೇಳೆ ಕನ್ನಡದ ಖ್ಯಾತ ನಟಿ ನಿಧನ!

ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿಯ ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 40 ಮಂದಿ ಯುವಕರು ರಕ್ತದಾನ ಮಾಡುವ ಮೂಲಕ ನೆಚ್ಚಿನ ನಟಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮದಲ್ಲಿ ಸನ್ನಿ ಲಿಯೋನ್‌ ಅವರ ಬೃಹತ್‌ ಫ್ಲೆಕ್ಸ್‌ ಅಳವಡಿಕೆ ಮಾಡಿ ʼಅನಾಥ ಮಕ್ಕಳ ತಾಯಿ. ಅಭಿಮಾನಿಗಳ ದೇವತೆʼ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಕೇಕ್‌ ಕತ್ತರಿಸಿದ ಅಭಿಮಾನಿಗಳು ಸಾರ್ವಜನಿಕರಿಗೆ ಬಿರಿಯಾನಿ ಮತ್ತು ಸಿಹಿತಿಂಡಿಯನ್ನು ವಿತರಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News