27ನೇ ಮದುವೆ ವಾರ್ಷಿಕೋತ್ಸವಕ್ಕೆ ಭಾವನಾತ್ಮಕ ಪತ್ರ ಬರೆದ ಸುಮಲತಾ..

ಇತ್ತೀಚೆಗಷ್ಟೇ ನಿಧನರಾದ ಕನ್ನಡ ಹಿರಿಯ ನಟ ಅಂಬರೀಶ್ ಇಂದು ಸುಮಲತಾರವರನ್ನು ಮದುವೆಯಾಗಿ 27 ವರ್ಷಗಳಾಗುತ್ತಾ ಬಂತು. ಈಗ ಅಂಬಿ ಇಲ್ಲದ ಮದುವೆ ವಾರ್ಷಿಕೋತ್ಸವವನ್ನು ನೆನಪಿಸಿಕೊಳ್ಳುತ್ತಾ ಭಾವನಾತ್ಮಕ ಪತ್ರವೊಂದನ್ನು ಬರೆದುಕೊಂಡಿದ್ದಾರೆ.ಅದರ ಯಥಾವತ್ತಾದ ರೂಪ ಇಲ್ಲಿದೆ.

Last Updated : Dec 8, 2018, 06:16 PM IST
27ನೇ ಮದುವೆ ವಾರ್ಷಿಕೋತ್ಸವಕ್ಕೆ ಭಾವನಾತ್ಮಕ ಪತ್ರ ಬರೆದ ಸುಮಲತಾ.. title=
Photo courtesy: Facebook

ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಕನ್ನಡ ಹಿರಿಯ ನಟ ಅಂಬರೀಶ್ ಇಂದು ಸುಮಲತಾರವರನ್ನು ಮದುವೆಯಾಗಿ 27 ವರ್ಷಗಳಾಗುತ್ತಾ ಬಂತು. ಈಗ ಅಂಬಿ ಇಲ್ಲದ ಮದುವೆ ವಾರ್ಷಿಕೋತ್ಸವವನ್ನು ನೆನಪಿಸಿಕೊಳ್ಳುತ್ತಾ ಭಾವನಾತ್ಮಕ ಪತ್ರವೊಂದನ್ನು ಬರೆದುಕೊಂಡಿದ್ದಾರೆ.ಅದರ ಯಥಾವತ್ತಾದ ರೂಪ ಇಲ್ಲಿದೆ.

"ನನ್ನ  ಪ್ರೀತಿಯ ಎ ..ಡಿಸೆಂಬರ್ 8 ... 27 ವರ್ಷಗಳಲ್ಲಿ ಮೊದಲ ಬಾರಿಗೆ ನೀವು ಈ ದಿನದಂದು ನನ್ನ ಪಕ್ಕದಲ್ಲಿಲ್ಲ .. ನಿಮ್ಮ ದಿನ ..ನೀವು ನನ್ನ ವಿಶ್ವದ ಕೇಂದ್ರವಾಗಿರಲಿಲ್ಲ .. ನೀವು ನನ್ನ ವಿಶ್ವವಾಗಿದ್ದಿರಿ, ನನ್ನ ಕೈ ಹಿಡಿದು ಮತ್ತು ನನ್ನನ್ನು ಸಮತೋಲನವಾಗಿಟ್ಟಿತ್ತು, ಲಕ್ಷಾಂತರ ಜನರನ್ನು ಪ್ರೀತಿಯ ಮೂಲಕ ತಲುಪಿದ ಹೃದಯ ಕೊನೆಗೆ ನನ್ನಲ್ಲಿ ನೆಲೆಗೊಂಡಿತ್ತು . .. ಇದಕ್ಕೆ 27 ವರ್ಷಗಳು .. ನೀವು ನನ್ನನ್ನು ಪ್ರೀತಿಸಿದಾಗ ಜೀವನ ಪ್ರಾರಂಭವಾಯಿತು, ಮತ್ತು ನೀವು ಮುಗುಳ ನಕ್ಕಾಗ ಹೊಳೆಯುತ್ತಿತ್ತು. ನೀವು ನನ್ನ ಮೇಲೆ ಹೊಂದಿರುವ ಪ್ರೀತಿಯನ್ನು ಮರೆಮಾಡಲು ಸಾಧ್ಯವಿಲ್ಲ,ಚಳಿಗಾಲದಲ್ಲಿ ಬೆಚ್ಚನೆಯ ಕಂಬಳಿಯ ಹಾಗೆ ಬೇಸಿಗೆ ಮತ್ತು ಮಳೆಯ ವೇಳೆ ಕೊಡೆಯ ಹಾಗೆ ನನ್ನನ್ನು ರಕ್ಷಿಸಿ ಇಟ್ಟಿದ್ದಿರಿ. 

ಈಗ ನೀವು ಎಲ್ಲಿದ್ದರೂ ಕೂಡ .. ನೀವು ಇನ್ನೂ ನನ್ನನ್ನು ನೋಡುತ್ತಿರುತ್ತಿರಿ, ನೀವು ಇನ್ನೂ ನಮ್ಮ ಮಗನ ಬಗ್ಗೆ ಚಿಂತೆ ಮಾಡುತ್ತೀರಿ, ನೀವು ಇನ್ನೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತೀರಿ. ನಿಮ್ಮ ಪ್ರೀತಿಯು ನನ್ನ ಸುತ್ತಲೂ ಅನೇಕ ದೃಷ್ಟಿಯಲ್ಲಿ ಪ್ರತಿಬಿಂಬಿಸುತ್ತದೆ, ಅದೇ ನನಗೆ ಮತ್ತು ಅಬಿಗೆ ಆಶೀರ್ವಾದ . ಈಗ ಈ ಚೂರಾದ ಹೃದಯವನ್ನು ಶಮನಗೊಳಿಸಲು ಮತ್ತು ಸರಿಪಡಿಸಲು ನಿಮ್ಮ ಶಕ್ತಿಯನ್ನು ನಾನು ಬಯಸುತ್ತೇನೆ, ನಿಮ್ಮ ಅನುಗ್ರಹದಿಂದ ನಾವು ನಿಮ್ಮನ್ನು ಅಥವಾ ನಿಮ್ಮ ಆದರ್ಶಗಳನ್ನು ನಿರಾಸೆ ಮಾಡಬಾರದು ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಪ್ರೀತಿ ಬೇಕು .. ನಿಮ್ಮ ಸ್ಪೂರ್ತಿಯು ಹೆಮ್ಮೆಯೊಂದಿಗೆ ನಾವು ಈ ಜೀವನ ಕಳೆಯುತ್ತೇವೆ.  ಈ ಅದ್ಬುತ ವ್ಯಕ್ತಿತ್ವದ ಜೊತೆ 27 ವರ್ಷಗಳ  ಜೀವನ ಹಂಚಿಕೊಳ್ಳುವ ಸೌಭಾಗ್ಯವನ್ನು ನಾನು ಹೊಂದಿದ್ದೇನೆ..ಯಾವಾಗಲು ನಮ್ಮ ಜೊತೆ ಇರಿ, ನಮ್ಮ ಮೇಲೆ ಯಾವಾಗಲು ಹೊಳೆಯುತ್ತಲೇ ಇರಿ..  

ವಾರ್ಷಿಕೋತ್ಸವದ ಶುಭಾಷಯಗಳು
-ಸುಮಲತಾ ಅಂಬರೀಶ್ 

Trending News