ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಸ್ಟಾರ್‌ ನಟಿಯ ಮೇಲೆ ಕೈ ಹಾಕಿದ ಯುವಕ..! ವಿಡಿಯೋ ವೈರಲ್‌

ತಮಿಳು ನಟ ಸೂರ್ಯ ನಟನೆಯ ʼಸೂರರೈ ಪೋಟ್ರುʼದಲ್ಲಿ ನಟಿಸಿದ್ದ ʼರಾಷ್ಟ್ರ  ಪ್ರಶಸ್ತಿ ಪುರಸ್ಕೃತʼ ನಟಿ ಅಪರ್ಣಾ ಬಾಲಮುರಳಿ ಅವರ ಜೊತೆ ಫೋಟೋ ತೆಗಿಸಿಕೊಳ್ಳುವ ನೆಪದಲ್ಲಿ ಯುವಕನೊಬ್ಬ ಅನುಚಿತವಾಗಿ ವರ್ತನೆ ಮಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ಅವರ ಅಭಿಮಾನಿಗಳು ಮತ್ತು ನಟ, ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Written by - Krishna N K | Last Updated : Jan 19, 2023, 08:56 PM IST
  • ʼರಾಷ್ಟ್ರ ಪ್ರಶಸ್ತಿ ಪುರಸ್ಕೃತʼ ನಟಿ ಅಪರ್ಣಾ ಬಾಲಮುರಳಿ ಅವರ ಜೊತೆ ಯುವಕನ ಅನುಚಿತ ವರ್ತನೆ.
  • ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
  • ವಿಡಿಯೋ ನೋಡಿದ ಅವರ ಅಭಿಮಾನಿಗಳು ಮತ್ತು ನಟ, ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಸ್ಟಾರ್‌ ನಟಿಯ ಮೇಲೆ ಕೈ ಹಾಕಿದ ಯುವಕ..! ವಿಡಿಯೋ ವೈರಲ್‌ title=

Aparna Balamurali viral video : ತಮಿಳು ನಟ ಸೂರ್ಯ ನಟನೆಯ ʼಸೂರರೈ ಪೋಟ್ರುʼದಲ್ಲಿ ನಟಿಸಿದ್ದ ʼರಾಷ್ಟ್ರ  ಪ್ರಶಸ್ತಿ ಪುರಸ್ಕೃತʼ ನಟಿ ಅಪರ್ಣಾ ಬಾಲಮುರಳಿ ಅವರ ಜೊತೆ ಫೋಟೋ ತೆಗಿಸಿಕೊಳ್ಳುವ ನೆಪದಲ್ಲಿ ಯುವಕನೊಬ್ಬ ಅನುಚಿತವಾಗಿ ವರ್ತನೆ ಮಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ಅವರ ಅಭಿಮಾನಿಗಳು ಮತ್ತು ನಟ, ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಅಪರ್ಣಾ ಬಾಲಮುರಳಿ ಅವರಿಗೆ ಭಾರಿ ಬೇಡಿಕೆ ಇದೆ. ಕನ್ನಡದ ಪವನ್‌ ಕುಮಾರ್‌ ನಿರ್ದೇಶನದ ʼಧೂಮಂʼ ಸಿನಿಮಾದಲ್ಲಿ ಅಪರ್ಣಾ ಅವರು ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡುತ್ತಿದೆ. ಅಲ್ಲದೆ, ಸೂರರೈ ಪೋಟ್ರು ಸಿನಿಮಾದಲ್ಲಿನ ನಟನೆಗಾಗಿ ಅಪರ್ಣಾ ಅವರಿಗೆ ‘ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ’ ಸಿಕ್ಕಿತು. 

ಇದನ್ನೂ ಓದಿ: ಮನೆ ಮನದಂಗಳಕ್ಕೆ ಬರ್ತಿದೆ ಕರುನಾಡಿನ ಶಕ್ತಿ ದೇವತೆ "ರೇಣುಕಾ-ಯಲ್ಲಮ್ಮನ" ಮಹಾಚರಿತೆ...!

ಇದೀಗ ಅವರು ತಮ್ಮ ಮುಂಬರುವ ಸಿನಿಮಾ ʼಥಂಕಂʼ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋಷನ್‌ಗಾಗಿ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರ ಒಂದು ಭಾಗವಾಗಿ ಇಂದು ಅವರು ಕಾಲೇಜು ಒಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ವೇದಿಕೆ ಮೇಲೆ ಬಂದ ವಿದ್ಯಾರ್ಥಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಈ ಘಟನೆಯ ದೃಶ್ಯಗಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.​

ವೈರಲ್‌ ವಿಡಿಯೋದಲ್ಲಿ, ವೇದಿಕೆಯ ಮೇಲೆ ಬರುವ ವಿದ್ಯಾರ್ಥಿ ಫೋಟೋಗೆ ಪೋಸ್‌ ನೀಡುವಾಗ ಅಪರ್ಣಾ ಅವರ ಮೇಲೆ ಆತ ಕೈ ಹಾಕಲು ಮುಂದಾಗುತ್ತಾನೆ. ಇದರಿಂದ ನಟಿಗೆ ತೀವ್ರ ಇರಿಸುಮುರಿಸು ಉಂಟಾಗಿ ಕೂಡಲೇ ಪಕ್ಕಕ್ಕೆ ಸರಿದುಕೊಂಡಿದ್ದಾರೆ. ಈ ಘಟನೆಯಿಂದಾಗಿ ಅಪರ್ಣಾ ಬಾಲಮುರಳಿ ಅವರ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಸಿನಿಮಾ ನಟಿಯರು ಸಹ ಈ ಘಟನೆಯನ್ನು ಖಂಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News