ಹೊಸ ವರ್ಷವನ್ನು ಅದ್ದೂರಿಯಾಗಿಸಲು  ಸಜ್ಜಾಗಿದೆ ಸುವರ್ಣ

ಸುವರ್ಣ ಯುಗಾದಿ: ಈ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸ್ಟಾರ್ ಸುವರ್ಣ ವಾಹಿನಿಯು "ಸುವರ್ಣ ಯುಗಾದಿ ಶುಭಾರಂಭ" ಎಂಬ ಕಾರ್ಯಕ್ರಮವನ್ನು ನಡೆಸಿದೆ.

Written by - Zee Kannada News Desk | Last Updated : Mar 15, 2023, 06:23 PM IST
  • ಕನ್ನಡ ಬೆಳ್ಳಿತೆರೆಯ ಕಲಾವಿದರ ಜೊತೆ ಸುವರ್ಣ ಯುಗಾದಿ ಸಂಭ್ರಮ
  • ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ಕಾರ್ಯಕ್ರಮದಲ್ಲಿ ಭಾಗಿ
  • ಡಾಲಿ ಧನಂಜಯ್ ಅವರ ರಗಡ್ ಡೈಲಾಗ್ ಗೆ ಕುಪ್ಪಳಿಸಿದ್ದಾರೆ ಸ್ಟಾರ್ಸ್
 ಹೊಸ ವರ್ಷವನ್ನು ಅದ್ದೂರಿಯಾಗಿಸಲು  ಸಜ್ಜಾಗಿದೆ  ಸುವರ್ಣ title=

Star Suvarna:  ಈ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸ್ಟಾರ್ ಸುವರ್ಣ ವಾಹಿನಿಯು "ಸುವರ್ಣ ಯುಗಾದಿ ಶುಭಾರಂಭ" ಎಂಬ ಕಾರ್ಯಕ್ರಮವನ್ನು ನಡೆಸಿದೆ.

ಯುಗಾದಿ ಹಬ್ಬವನ್ನು ಹೊಸತನದಿಂದ ಬರಮಾಡಿಕೊಳ್ಳಲು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಬೇವು ಬೆಲ್ಲದ ರುಚಿಯನ್ನು ಸವಿಯಲು ಕನ್ನಡ ಬೆಳ್ಳಿತೆರೆಯ ಕಲಾವಿದರ ಜೊತೆ ಸುವರ್ಣ ಪರಿವಾರದ ನಕ್ಷತ್ರಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: Deepika Padukone: ಹಾಲಿವುಡ್ ಮಾಧ್ಯಮದ ಮೇಲೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಗರಂ ಆಗಿದ್ದೇಕೆ ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. ನಟ ಡಾಲಿ ಧನಂಜಯ್ ಅವರ ರಗಡ್ ಡೈಲಾಗ್ ಗೆ ಕುಪ್ಪಳಿಸಿದ ಸುವರ್ಣ ಸ್ಟಾರ್ಸ್.

ಗೋಲ್ಡನ್ ಕ್ವೀನ್ ಅಮೂಲ್ಯ ದಂಪತಿಗಳು ಈ ಯುಗಾದಿಯನ್ನು ಸ್ಟಾರ್ ಸುವರ್ಣದ ಜೊತೆ ಸಂಭ್ರಮಿಸಿದ್ದು ಖುಷಿ ತಂದಿದೆ. ಜೊತೆಗೆ ಕಾಂತಾರದ ಸಪ್ತಮಿ ಗೌಡ, ಸಾನಿಯಾ ಅಯ್ಯರ್, ವಾಸುಕಿ ವೈಭವ್ ಸೇರಿದಂತೆ ಇನ್ನಷ್ಟು ಕಲಾವಿದರು ಮನರಂಜನೆಯ ಹೂರಣವನ್ನು ನೀಡಿದ್ದಾರೆ.

ಇದನ್ನೂ ಓದಿ: ಕಾಲೇಜ್ ಡೇಸ್‌ನಲ್ಲಿ ಜಾಸ್ತಿ ಹುಡುಗ್ರು ನನ್ನಿಂದೆ ಬಿಳ್ತಿದ್ರು..! ಆಗ ನಾನೇ ಹೀರೋಯಿನ್

'ಹೊಂಗನಸು' ಧಾರಾವಾಹಿ ಖ್ಯಾತಿಯ ಮುಕೇಶ್ ಗೌಡ ಆಗಮಿಸಿದ್ದು ಇದೇ ಮೊದಲ ಬಾರಿಗೆ ಡಬ್ಬಿಂಗ್ ಧಾರಾವಾಹಿಯ ಕಲಾವಿದರನ್ನು ಕಾರ್ಯಕ್ರಮದಲ್ಲಿ ಕಾಣಬಹುದು..ತಪ್ಪದೇ ವೀಕ್ಷಿಸಿ "ಸುವರ್ಣ ಯುಗಾದಿ ಶುಭಾರಂಭ" ಮಾರ್ಚ್ 19 ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News