Janhvi Kapoor : ಜಾನ್ವಿಗೆ ಬಾತ್ ರೂಂ ಲಾಕ್‌ ಮಾಡಲು ಬಿಡುತ್ತಿರಲಿಲ್ಲವಂತೆ ತಾಯಿ ಶ್ರೀದೇವಿ.!

Janhvi Kapoor : ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್ ಶ್ರೀದೇವಿಯನ್ನು ಜನರು ನಟನೆ ಮತ್ತು ಸೌಂದರ್ಯಕ್ಕಾಗಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದೀಗ ಅವರ ಮಗಳು ಜಾನ್ವಿ ಕಪೂರ್‌ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಜಾನ್ವಿ ಅವರ ತಾಯಿ ಮತ್ತು ದಿವಂಗತ ನಟಿ ಶ್ರೀದೇವಿ ಅವರು ಖರೀದಿಸಿದ ಮೊದಲ ಮನೆಯಿದು. 

Written by - Chetana Devarmani | Last Updated : Nov 17, 2022, 02:13 PM IST
  • ಬಾಲಿವುಡ್ ನಟಿ ಜಾನ್ವಿ ಕಪೂರ್
  • ಜಾನ್ವಿಗೆ ಬಾತ್ ರೂಂ ಲಾಕ್‌ ಮಾಡಲು ಬಿಡುತ್ತಿರಲಿಲ್ಲವಂತೆ ತಾಯಿ
  • ಖ್ಯಾತ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್‌
Janhvi Kapoor : ಜಾನ್ವಿಗೆ ಬಾತ್ ರೂಂ ಲಾಕ್‌ ಮಾಡಲು ಬಿಡುತ್ತಿರಲಿಲ್ಲವಂತೆ ತಾಯಿ ಶ್ರೀದೇವಿ.!  title=
ಜಾನ್ವಿ ಕಪೂರ್‌ 

Janhvi Kapoor : ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್ ಶ್ರೀದೇವಿಯನ್ನು ಜನರು ನಟನೆ ಮತ್ತು ಸೌಂದರ್ಯಕ್ಕಾಗಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದೀಗ ಅವರ ಮಗಳು ಜಾನ್ವಿ ಕಪೂರ್‌ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಜಾನ್ವಿಯನ್ನು ನೋಡಿದ ಅಭಿಮಾನಿಗಳು ಶ್ರೀದೇವಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಜಾನ್ವಿ ಕಪೂರ್ ಇತ್ತೀಚೆಗೆ ಅಭಿಮಾನಿಗಳಿಗೆ ತಾಯಿ ಶ್ರೀದೇವಿ ಅವರು ಖರೀದಿಸಿದ ಮೊದಲ ಮನೆಯನ್ನು ತೋರಿಸಿದರು. ತಾಯಿ ಖರೀದಿಸಿದಾಗ ಈ ಮನೆ ತುಂಬಾ ವಿಭಿನ್ನವಾಗಿತ್ತು ಎಂದು ಜಾನ್ವಿ ಹೇಳಿದ್ದಾರೆ. ಮದುವೆಯ ನಂತರ ತಾಯಿ ಶ್ರೀದೇವಿ ಈ ಮನೆಯನ್ನು ಅಲಂಕರಿಸಿದರು ಎಂದು ಜಾನ್ವಿ ಬಹಿರಂಗಪಡಿಸಿದ್ದಾರೆ. ಜಗತ್ತನ್ನು ಸುತ್ತಿ ಸಂಗ್ರಹಿಸಿದ ವಸ್ತುಗಳನ್ನು ಈ ಮನೆಯಲ್ಲಿ ಇಟ್ಟಿದ್ದಾರಂತೆ.

ಇದನ್ನೂ ಓದಿ : ಇಷ್ಟು ದೊಡ್ಡ ಹಾವನ್ನು ನೀವು ಜೀವನದಲ್ಲೇ ನೋಡಿರಲು ಸಾಧ್ಯವಿಲ್ಲ!

ಜಾನ್ವಿ ಕಪೂರ್ ಇಂದಿಗೂ ತನ್ನ ಮಲಗುವ ಕೋಣೆಯ ಬಾತ್‌ರೂಂಗೆ ಯಾವುದೇ ಲಾಕ್ ಇಲ್ಲ ಎಂದು ಹೇಳಿದ್ದಾರೆ. ಶ್ರೀದೇವಿಯ ಮೊದಲ ಮನೆಯ ಬಗ್ಗೆ, "ಈ ಮನೆಯಲ್ಲಿ ಹಲವು ನೆನಪುಗಳಿವೆ. ಇದರ ಹೊರತಾಗಿ ನನಗೆ ಇಷ್ಟವಾದ ಇನ್ನೊಂದು ವಿಷಯವೆಂದರೆ, ನನ್ನ ರೂಮಿನ ಬಾತ್ ರೂಮಿನ ಬಾಗಿಲಿಗೆ ಲಾಕ್‌ ಇಲ್ಲ. ಕಾರಣ ಅದಕ್ಕೆ ಬೀಗ ಹಾಕಲು ಅಮ್ಮ ನಿರಾಕರಿಸಿದ್ದು ನೆನಪಿದೆ. ನಾನು ಬಾತ್ ರೂಮಿಗೆ ಹೋಗಿ ಹುಡುಗರೊಂದಿಗೆ ಮಾತನಾಡುತ್ತೇನೆ ಎಂದು ಅಮ್ಮ ಹೆದರುತ್ತಿದೆ. ಅದಕ್ಕಾಗಿಯೇ ನನ್ನ ಸ್ನಾನಗೃಹಕ್ಕೆ ಬೀಗ ಹಾಕಲು ನನಗೆ ಅವಕಾಶ ನೀಡಲಿಲ್ಲ. ಇಂದಿಗೂ ಈ ಸ್ನಾನಗೃಹಕ್ಕೆ ಬೀಗ ಹಾಕಿಲ್ಲ" ಎಂದು ಹೇಳಿದ್ದಾರೆ.

ಜಾನ್ವಿ ಕಪೂರ್ ಅವರ ನಟನೆಯ 'ಮಿಲಿ' ನವೆಂಬರ್ 4 ರಂದು ಬಿಡುಗಡೆಯಾಯಿತು. ಇದರಲ್ಲಿ ಸನ್ನಿ ಕೌಶಲ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ನಟಿ ಜಾನ್ವಿ ಕಪೂರ್‌ ಮುಂವರುವ ಸಿನಿಮಾದಲ್ಲಿ ನಿತೇಶ್ ತಿವಾರಿ ಅವರ 'ಬಾವಲ್' ಚಿತ್ರದಲ್ಲಿ ವರುಣ್ ಧವನ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಮುಂದಿನ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ಜಾನ್ವಿ 'ಮಿಸ್ಟರ್ ಅಂಡ್ ಮಿಸೆಸ್ ಮಹಿ' ಚಿತ್ರದಲ್ಲಿಯೂ ಅಭಿನಯಿಸಲಿದ್ದಾರೆ. ಇದರಲ್ಲಿ ಅವರು ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

ಇದನ್ನೂ ಓದಿ : ಮಗನನ್ನ ಬಿಟ್ಟು ಮೇಘನಾ ಮೋಜು ಮಸ್ತಿ ಮಾಡ್ತೀದ್ದಾರೆ..! : ಸುಂದರ್‌ ರಾಜ್‌ ಬೇಸರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News