Sreeleela: ಈ ಕಾರಣಕ್ಕೆ ಶ್ರೀಲೀಲಾ ಬೆಸ್ಟ್ ಹಿರೋಯಿನ್... ಸತತ ಸಿನಿಮಾ ಆಫರ್‌ಗಳ ಹಿಂದಿನ ರಹಸ್ಯ ಇದೇನಾ?‌

Actress Sreeleela: ಟಾಲಿವುಡ್ ಸೆನ್ಸೇಷನ್ ಹೀರೋಯಿನ್ ಶ್ರೀಲೀಲಾ ಶ್ರೀಲೀಲಾ ಸರಣಿ ಚಿತ್ರಗಳ ಮೂಲಕ ರಂಜಿಸುತ್ತಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದ ಈಕೆಯ ಕುರಿತು ಇದೀಗ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ.. 

Written by - Savita M B | Last Updated : Jan 22, 2024, 02:53 PM IST
  • ಸದ್ಯ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಫಾರ್ಮ್‌ನಲ್ಲಿದ್ದಾರೆ
  • ವಿವಿಧ ಚಿತ್ರಗಳಿಗೆ ಸಹಿ ಹಾಕಿರುವ ಈ ಸುಂದರಿ
  • ಪ್ರತಿ ಚಿತ್ರದ ಬಿಡುಗಡೆಯ ಪ್ರಮೋಷನ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ.
Sreeleela: ಈ ಕಾರಣಕ್ಕೆ ಶ್ರೀಲೀಲಾ ಬೆಸ್ಟ್ ಹಿರೋಯಿನ್... ಸತತ ಸಿನಿಮಾ ಆಫರ್‌ಗಳ ಹಿಂದಿನ ರಹಸ್ಯ ಇದೇನಾ?‌  title=

Sreeleela: ಸದ್ಯ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಮೋಸ್ಟ್ ವಾಂಟೆಡ್  ಅಂದರೇ ಫಾರ್ಮ್‌ನಲ್ಲಿರುವ ಹೀರೋಯಿನ್ ಆಗಿ ಸದ್ದು ಮಾಡುತ್ತಿದ್ದಾರೆ. ವಿವಿಧ ಚಿತ್ರಗಳಿಗೆ ಸಹಿ ಹಾಕಿರುವ ಈ ಸುಂದರಿ ಸದ್ಯ ಪ್ರತಿ ಚಿತ್ರದ ಬಿಡುಗಡೆಯ ಪ್ರಮೋಷನ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. 

ಶ್ರೀಲೀಲಾ ಇತ್ತೀಚೆಗೆ ಸೂಪರ್ ಸ್ಟಾರ್ ಮಹೇಶ್ ಬಾಬು ಮಹೇಶ್ ಬಾಬು ಜೊತೆಗಿನ 'ಗುಂಟೂರು ಕಾರಮ್' ಮೂಲಕ ಪ್ರೇಕ್ಷಕರಿಗೆ ಬಂದಿದ್ದು ಗೊತ್ತೇ ಇದೆ. ಚಿತ್ರದಲ್ಲಿ ಈಕೆ ನಟನೆ ಮತ್ತು ನೃತ್ಯದಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದಂತು ಸುಳ್ಳಲ್ಲ.. ಇನ್ನು ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆಯಾದರೂ... ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಪಡೆಯುತ್ತಿದೆ.

ಇದನ್ನೂ ಓದಿ-ʼಕಲ್ಕಿʼಯಲ್ಲಿ ಪ್ರಭಾಸ್‌ ಜೊತೆ ನಟಿಸೋದು ಈ ಸ್ಟಾರ್‌ ಹೀರೋಯಿನ್..! ಯಾರು ಗೊತ್ತಾ?

ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಭಾಗವಹಿಸಿದ ಶ್ರೀಲೀಲಾ ಅವರು ಸೆಟ್‌ನಲ್ಲಿ ಹೇಗಿರುತ್ತಾರೆ ಎಂಬುದರ ಮಾಹಿತಿಯೊಂದು ಹೊರಬಿದ್ದಿದೆ.."ಸೆಟ್‌ನಲ್ಲಿರುವಾಗ
ಹೈ ಅಲರ್ಟ್‌ ಆಗಿರುವುದಲ್ಲದೇ ಒಂದೇ ದಿನದಲ್ಲಿ ಮೂರು ಚಿತ್ರಗಳ ಚಿತ್ರೀಕರಣ ನಡೆಸುವ ಎನರ್ಜಿ ನನ್ನಲ್ಲಿದೆ.. ಯಾವುದೇ ಪಾತ್ರವಾದರೂ ಒತ್ತಡವಂತಲ್ಲ.. ಜವಾಬ್ದಾರಿ ನಿರ್ವಹಿಸುತ್ತೇನೆ.. ನಾನು ಸೆಟ್‌ನಲ್ಲಿ ಇತರ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ.. ಮತ್ತೆ ನನಗೆ ಎಲ್ಲಿ ಏನು ಮಾಡಬೇಕೆಂಬುದರ ಸ್ಪಷ್ಟವಾದ ಕಲ್ಪನೆ ಇದೆ" ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.. 

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಕನ್ನಡದಿಂದ ಟಾಲಿವುಡ್‌ಗೆ ಹಾರಿ ಭಾರೀ ಫಾರ್ಮ್‌ನಲ್ಲಿದ್ದಾರೆ.. ಇತ್ತೀಚೆಗಷ್ಟೇ ನಟಿ ತಮ್ಮ ಮುಂದಿನ MBBS ಪದವಿಗಾಗಿ ಸಿನಿಮಾಗಳಿಂದ ಕೊಂಚ ಬ್ರೇಕ್‌ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು..

ಇದನ್ನೂ ಓದಿ-ಅವರ ಜೊತೆ ಮಾತಾಡುವುದು ನನಗಿಷ್ಟ : ವರ್ತೂರು ಸಂತೋಷ್ ಬಗ್ಗೆ ಮನದ ಮಾತು ಹೇಳಿದ ತನಿಷಾ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News