Spandana Vijay Funeral: ಹರಿಶ್ಚಂದ್ರ ಘಾಟ್​​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ

Spandana Vijay Funeral: ಸ್ಪಂದನಾರ ಅಂತಿಮಯಾತ್ರೆ ವೇಳೆ ರಸ್ತೆಯುದ್ದಕ್ಕೂ ನೂರಾರು ಜನರು ಜಮಾಯಿಸಿದ್ದು, ಅಂತಿಮದರ್ಶನ ಪಡೆಯುತ್ತಿದ್ದಾರೆ. ಸ್ಯಾಂಡಲ್‍ವುಡ್ ನಟ-ನಟಿಯರು ಮತ್ತು ಚಿತ್ರರಂಗ, ರಾಜಕೀಯ ಗಣ್ಯರು ಸ್ಪಂದನಾರಿಗೆ ಅಂತಿಮ ವಿದಾಯ ಹೇಳಿದ್ದಾರೆ.

Written by - Puttaraj K Alur | Last Updated : Aug 9, 2023, 03:55 PM IST
  • ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತಿಮ ಯಾತ್ರೆ ಆರಂಭವಾಗಿದೆ
  • ಇನ್ನು ಕೆಲವೇ ಹೊತ್ತಿನಲ್ಲಿ ಹರಿಶ್ಚಂದ್ರ ಘಾಟ್‍ನಲ್ಲಿ ಸ್ಪಂದನಾರ ಅಂತ್ಯಕ್ರಿಯೆ ನೆರವೇರಲಿದೆ
  • ರಸ್ತೆಯುದ್ದಕ್ಕೂ ನೂರಾರು ಜನರು ಸ್ಪಂದನಾರ ಅಂತಿಮ ದರ್ಶನ ಪಡೆಯುತ್ತಿದ್ದಾರೆ
Spandana Vijay Funeral: ಹರಿಶ್ಚಂದ್ರ ಘಾಟ್​​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ title=
ಹರಿಶ್ಚಂದ್ರ ಘಾಟ್ನಲ್ಲಿ ಸ್ಪಂದನಾ ಅಂತ್ಯಕ್ರಿಯೆ

ಬೆಂಗಳೂರು: ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತಿಮ ಯಾತ್ರೆ ಆರಂಭವಾಗಿದೆ. ಕನ್ನಡ ಚಿತ್ರರಂಗದ ನಟ-ನಟಿಯರು ಮತ್ತು ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದುಕೊಂಡಿದ್ದು, ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನ ಶ್ರೀರಾಂಪುರದ ಕಡೆ ಸ್ಪಂದನಾರ ಪಾರ್ಥಿವ ಶರೀರ ಮೆರವಣಿಗೆ ನಡೆಯುತ್ತಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಹರಿಶ್ಚಂದ್ರ ಘಾಟ್‍ನಲ್ಲಿ ಸ್ಪಂದನಾರ ಅಂತ್ಯಕ್ರಿಯೆ ನೆರವೇರಲಿದೆ. 

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಂದೆ ಬಿ.ಕೆ.ಶಿವರಾಂ ನಿವಾಸದಿಂದ ಮೃತದೇಹವನ್ನು ಸ್ಥಳಾಂತರ ಮಾಡಲಾಗಿದೆ. ಶ್ರೀರಾಂಪುರದ ಹರಿಶ್ಚಂದ್ರಘಾಟ್​ವರೆಗೆ ಮೆರವಣಿಗೆ ನಡೆಯಲಿದೆ. ಅಲ್ಲಿ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Neha Shetty : ಮುಂಗಾರು ಮಳೆ ಚೆಲುವೆಯ ಹಾಟ್‌ ಲುಕ್‌..ಪೋಟೋಸ್‌ ನೋಡಿ

ಸ್ಪಂದನಾರ ಅಂತಿಮಯಾತ್ರೆ ವೇಳೆ ರಸ್ತೆಯುದ್ದಕ್ಕೂ ನೂರಾರು ಜನರು ಜಮಾಯಿಸಿದ್ದು, ಅಂತಿಮದರ್ಶನ ಪಡೆಯುತ್ತಿದ್ದಾರೆ. ಸ್ಯಾಂಡಲ್‍ವುಡ್ ನಟ-ನಟಿಯರು ಮತ್ತು ಚಿತ್ರರಂಗ, ರಾಜಕೀಯ ಗಣ್ಯರು ಸ್ಪಂದನಾರಿಗೆ ಅಂತಿಮ ವಿದಾಯ ಹೇಳಿದ್ದಾರೆ. ನಟ ವಿಜಯರಾಘವೇಂದ್ರ ಮತ್ತು ಬಿ.ಕೆ.ಶಿವರಾಂ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಸ್ಪಂದನಾರ ಕುಟುಂಬಸ್ಥರು ಕಣ್ಣಿರಿಟ್ಟಿದ್ದಾರೆ. ಮದುವೆ ಸೀರೆಯಲ್ಲಿಯೇ ಸ್ಪಂದಾನ ಅವರು ಮರಳಿ ಮಣ್ಣಿಗೆ ತೆರಳಲಿದ್ದಾರೆ. ಸ್ಪಂದನಾರಿಗೆ ಸ್ಯಾಂಡಲ್‍ವುಡ್ ತಾರೆಯರು ಕಣ್ಣೀರ ವಿದಾಯ ಹೇಳಿದ್ದಾರೆ. ಸ್ಪಂದನಾರ ಅಂತಿಯಾತ್ರೆಯ ವೇಳೆ ರಸ್ತೆಯುದ್ದಕ್ಕೂ ಜನಸಾಗರವೇ ನೆರೆದಿದೆ. ನಟ ವಿಜಯರಾಘವೇಂದ್ರ ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸ್ಪಂದನಾ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ: Mouna Guddemani : ಹಾಟ್‌ ಪೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ರಾಮಾಚಾರಿ ಚಾರು..ಪೋಟೋಸ್‌ ನೋಡಿ  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News