ಸೌತ್ ಸಿನಿಮಾಗಳಲ್ಲಿ ಬೋಲ್ಡ್ ಸೀನ್ ಇರುವುದಿಲ್ಲ.. ಅದಕ್ಕೆ ಬಾಲಿವುಡ್‌..! ನಟಿ ಲಕ್ಷ್ಮಿ ಹೇಳಿಕೆ ವೈರಲ್‌

Raai Laxmi : ನಟಿ ರಾಯ್‌ ಲಕ್ಷ್ಮಿ ಬೋಲ್ಡ್‌ ಸೀನ್‌ಗಳ ಬಗ್ಗೆ ಓಪನ್‌ ಆಗಿ ಮಾತನಾಡಿದ್ದು, ಸೌತ್‌ ಸಿನಿಮಾಗಳ ಕುರಿತು ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾಳೆ.. ಈ ಸುಂದರಿಯ ಹೇಳಿಕೆಗಳು ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ... ಅಷ್ಟಕ್ಕೂ ನಟಿ ಹೇಳಿದ್ದೇನು..? ಬನ್ನಿ ನೋಡೋಣ..

Written by - Krishna N K | Last Updated : Jul 28, 2024, 05:23 PM IST
    • ಸೌತ್‌ ಸಿನಿಮಾಗಳ ಕುರಿತು ಶಾಕಿಂಗ್‌ ವಿಚಾರ ಬಿಚ್ಚಿಟ್ಟಿ ರಾಯ್‌ ಲಕ್ಷ್ಮಿ
    • ಸುಂದರಿಯ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌
    • ಬೋಲ್ಡ್‌ ಸೀನ್‌ಗಳ ಬಗ್ಗೆ ನಟಿ ರಾಯ್‌ ಲಕ್ಷ್ಮಿ ಓಪನ್‌ ಹೇಳಿಕೆ
ಸೌತ್ ಸಿನಿಮಾಗಳಲ್ಲಿ ಬೋಲ್ಡ್ ಸೀನ್ ಇರುವುದಿಲ್ಲ.. ಅದಕ್ಕೆ ಬಾಲಿವುಡ್‌..! ನಟಿ ಲಕ್ಷ್ಮಿ ಹೇಳಿಕೆ ವೈರಲ್‌ title=
Raai Lakshmi

Rai Lakshmi : ಲಕ್ಷ್ಮಿ ರಾಯ್.. ನೆನಪಿದೆಯಾ..? ಸಧ್ಯ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.. ಆದರೆ ಒಂದು ಸಮಯದಲ್ಲಿ ಈ ಸುಂದರಿ ತನ್ನ ಸೌಂದರ್ಯದಿಂದ ಸಿನಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಳು. ನಟ ಡಾ. ಶಿವರಾಜಕುಮಾರ್‌ ನಟನೆಯ ವಾಲ್ಮೀಕಿ ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಲಕ್ಷ್ಮಿ ಕಾಲಿಟ್ಟರು..

ಅಲ್ಲದೆ, ಸ್ನೇಹಾನಾ ಪ್ರೀತಿನಾ..? ಎಂಬ ಸಿನಿಮಾದ ಮೂಲಕ ದರ್ಶನ್‌, ಆದಿತ್ಯಗೆ ಜೊತೆಯಾಗಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದರು.. ಅದರ ಜೊತೆ ಕೆಲವುಎ ವಿಶೇಷ ಹಾಡುಗಳಲ್ಲಿಯೂ ಚೆಲುವೆ ಕಾಣಿಸಿಕೊಂಡಿದ್ದಾಳೆ.. 

ಇದನ್ನೂ ಓದಿ:‘ಅಣ್ಣಾವ್ರ ಜತೆ ಆ ಸಿನಿಮಾ ಮಾಡಿದ್ರೆ ನಿನ್ನ ತಲೆ ಕಡಿತೀನಿ ಅಂದಿದ್ರು ಪಾರ್ವತಮ್ಮ!’- ರೋಷಾವೇಶದಲ್ಲಿ ಹೀಗಂದಿದ್ದು ಯಾರಿಗೆ?

ಮಿಂಚಿನ ಓಟ, ಅಟ್ಟಹಾಸ, ಜಾನ್ಸಿ ಎಐಪಿಎಸ್‌, ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ರಾಯ್‌ ನಟಿಸಿದ್ದಾರೆ.. ತೆಲುಗಿನ ಖೈದಿ ನಂ 150 ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ವಿಶೇಷ ಹಾಡಿನಲ್ಲಿ ನಟಿಸಿ ಸೌತ್‌ನಲ್ಲಿ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡರು.. ಹಲವಾರು ತಮಿಳು ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ..

ಪ್ರಸ್ತುತ, ಲಕ್ಷ್ಮಿಗೆ ಹೆಚ್ಚಿನ ಸಿನಿಮಾಗಳ ಆಫರ್‌ಗಳಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚೆಲುವೆ ಸಖತ್‌ ಬ್ಯುಸಿ.. ಸತತವಾಗಿ ತನ್ನ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಯುವ ಪಡೆಗೆ ಹತ್ತಿರವಾಗುತ್ತಿದ್ದಾಳೆ.. ಇತ್ತೀಚೆಗಷ್ಟೇ ಲಕ್ಷ್ಮಿ ರಾಯ್ ಅವರ ಕಾಮೆಂಟ್‌ಗಳು ವೈರಲ್ ಆಗಿವೆ. 

ಇದನ್ನೂ ಓದಿ:ತಿಂಗಳಿಗೆ 1200 ರೂಪಾಯಿ ಸಂಬಳಕ್ಕೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಸ್ಟಾರ್‌ ಹೀರೋ..ಯಾರು ಗೊತ್ತಾ..?

ಸಂದರ್ಶನವೊಂದರಲ್ಲಿ, ಲಿಪ್ ಲಾಕ್ ದೃಶ್ಯದ ಪ್ರಶ್ನೆಗೆ ಮಾತನಾಡಿದ್ದ ನಟಿ, ಸೌತ್ ಸಿನಿಮಾಗಳಲ್ಲಿ ಬೋಲ್ಡ್ ಲಿಪ್ ಲಾಕ್ ಸೀನ್ ಗಳನ್ನು ಮಾಡುವುದಿಲ್ಲ, ಬಾಲಿವುಡ್ ನಲ್ಲಿ ಅಂತಹ ಬೋಲ್ಡ್ ಸೀನ್ ಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.. ಈ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News