ನವದೆಹಲಿ/ಮುಂಬೈ:ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ 'ಛಪಾಕ್' ಚಿತ್ರ ಇಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೂ ಮುನ್ನ JNUಗೆ ಭೇಟಿ ನೀಡಿದ್ದ ದೀಪಿಕಾ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದರು. ದೀಪಿಕಾ ಅವರ JNU ಭೇಟಿಯ ವೇಳೆ ಅವರ ಮುಂದೆಯೇ ದೇಶ ಇಬ್ಭಾಗಿರುವ ಘೋಷಣೆಗಳನ್ನು ಕೂಗಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ದೀಪಿಕಾ ಅಲ್ಲಿಂದ ಹೊರಟುಹೋಗಿದ್ದಾರೆ. ದೀಪಿಕಾ ಅವರ ಈ ಭೇಟಿಯನ್ನು ಸ್ಮೃತಿ ಇರಾನಿ ಇದೀಗ ಗುರಿಯಾಗಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸ್ಮೃತಿ, ದೀಪಿಕಾ ಯಾವ ಉದ್ದೇಶದಿಂದ ಅಲ್ಲಿಗೆ ಹೋಗಿದ್ದರು ಎಂಬುದು ಸುದ್ದಿ ಓದಿದ ಎಲ್ಲರಿಗೂ ಗೊತ್ತು . ಭಾರತವನ್ನು ಇಬ್ಭಾಗಿರುವ ಘೋಷಣೆಗಳನ್ನು ಮೊಳಗಿರುತ್ತಿರುವವರ ಮಧ್ಯೆ ನಿಂತು ಅವರಿಗೆ ಬೆಂಬಲ ನೀಡಿದ್ದು ದುರದೃಷ್ಟದ ಸಂಗತಿ ಎಂದು ಹೇಳಿದ್ದಾರೆ. ಓರ್ವ ಮಹಿಳೆಯ ವಿಚಾರಧಾರೆಗೆ ವಿರೋಧಿಸುವವರ ಖಾಸಗಿ ಅಂಗಕ್ಕೆ ಒದೆ ನೀಡಿರುವ ಜನರಿಗೆ ಅವರು ಬೆಂಬಲಕ್ಕೆ ದೀಪಿಕಾ ನಿಂತಿದ್ದಾರೆ. ಒಂದು ವೇಳೆ ದೀಪಿಕಾ ದೇಶವನ್ನು ಇಬ್ಭಾಗಿಸುವ ಜನರಿಗೆ ತಮ್ಮ ಸಾಥ್ ನೀಡಲು ಬಯಸಿದ್ದಾರೆ ಇದು ಅವರ ಆಯ್ಕೆ ಎಂದಿದ್ದಾರೆ. 2011ರಲ್ಲಿಯೇ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿರುವ ದೀಪಿಕಾ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ಪ್ರಧಾನಿಯಾಗುವುದಕ್ಕೆ ಬೆಂಬಲ ನೀಡಿದ್ದರು ಎಂದು ಸ್ಮ್ರಿತಿ ಹೇಳಿದ್ದಾರೆ.
. @smritiirani takes down Deepika Padukone for supporting Bharat Tere Tukde Gang pic.twitter.com/XzqTmSjeaN
— Tajinder Pal Singh Bagga (@TajinderBagga) January 10, 2020
ಮಂಗಳವಾರ JNU ಆವರಣಕ್ಕೆ ಭೇಟಿ ನೀಡಿದ್ದ ದೀಪಿಕಾ ಕನ್ಹಯ್ಯ ಕುಮಾರ್ ಹಾಗೂ ಇತರೆ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಶಾಮೀಲಾಗಿದ್ದರು. ಈ ಸಂದರ್ಭದಲ್ಲಿ ಅವರು JNU ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಆಯಿಷಿ ಘೋಷ್ ಅವರನ್ನೂ ಸಹ ಭೇಟಿ ಮಾಡಿದ್ದರು. ಈ ವೇಳೆ ದೀಪಿಕಾ ಉಪಸ್ಥಿತಿಯಲ್ಲಿಯೇ 'ಹಮ್ ಕೋ ಚಾಹಿಯೇ ಆಜಾದಿ' ಘೋಷಣೆಗಳು ಮೊಳಗಿದ್ದವು. ಅಷ್ಟೇ ಅಲ್ಲ ಮೌನಕ್ಕೆ ಜಾರಿದ್ದ ದೀಪಿಕಾ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿ ಅಲ್ಲಿಂದ ಹೊರಟುಹೋಗಿದ್ದರು. ದೀಪಿಕಾ ಅವರ JNU ಭೇಟಿಯ ಬಳಿಕ #ByocottChhapaak ಇಂಟರ್ನೆಟ್ ನಲ್ಲಿ ಟ್ರೆಂಡ್ ಆಗಿತ್ತು. ಈ ಹ್ಯಾಶ್ ಟ್ಯಾಗ್ ಬಳಸಿದ ನೆಟ್ಟಿಗರು ದೇಶವನ್ನು ಇಬ್ಭಾಗಿರುವ ಶಕ್ತಿಗಳಿಗೆ ದೀಪಿಕಾ ಬೆಂಬಲ ನೀಡಿದ್ದು, ಅವರು ಸಹ ದೇಶ ವಿಭಜನೆ ಬಯಸುತ್ತಿದ್ದಾರೆ ಎನ್ನಲಾಗಿತ್ತು.
JNUನಲ್ಲಿ ನಡೆದ ಹಿಂಸಾಚಾರದ ಕುರಿತು ಕೂಡ ದೀಪಿಕಾ ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು, "ಜನರು ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಿರುವುದನ್ನು ಕಂಡು ನನಗೆ ಹೆಮ್ಮೆಯಾಗುತ್ತಿದೆ ಮತ್ತು ನಾನು ಖುಷಿ ಪಡುತ್ತಿದ್ದೇನೆ. ಹೀಗಾಗಿ ನಾಗರಿಕರು ಸುಮ್ಮನಿರಬಾರದು ಬಹಿರಂಗವಾಗಿ ತಮ್ಮ ಅನಿಸಿಕೆಗಳನ್ನು ಮಂಡಿಸಬೇಕು" ಎಂದಿದ್ದರು.