ನೀಲಿ ಬಿಕಿನಿಯಲ್ಲಿ 'ಸೀತಾ ರಾಮಂ' ಬೆಡಗಿ ಸೀತಾ ಮಹಾಲಕ್ಷ್ಮಿಅಲಿಯಾಸ್‌ ಮೃಣಾಲ್​ ಠಾಕೂರ್..!

Mrunal Thakur : ಮೃಣಾಲ್​ ಠಾಕೂರ್ ದಕ್ಷಿಣ ಭಾರತಕ್ಕೆ ಕಾಲಿಡುವುದಂಕ್ಕಿಂತ ಮುಂಚೆ ಹಿಂದಿ ಕಿರುತೆರೆಯಲ್ಲಿ ಮಿಂಚಿದ್ದರು. ಅನೇಕ ಹಿಂದಿ ಧಾರಾವಾಹಿಗಳಲ್ಲಿ ಮೃಣಾಲ್ ನಟಿಸಿದ್ದಾರೆ. 2018ರಲ್ಲಿ ಬಾಲಿವುಡ್​ಗೆ ಪದಾರ್ಪಣೆ ಮಡಿದ ಮೃಣಾಲ್,  ಸೂಪರ್​ 30, ಜೆರ್ಸಿ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ಮೂಲಕ ಅವರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟಿಯಾಗಿ ಬೆಳೆದು ನಿಂತರು.  

Written by - Zee Kannada News Desk | Last Updated : Apr 4, 2023, 07:43 PM IST
  • ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್,
  • ರಿಲ್ಯಾಕ್ಸ್ ಮೂಡ್​ನಲ್ಲಿದ್ದು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
  • ಟಾಲಿವುಡ್ನಲ್ಲಿ ನಟಿ ಮೃಣಾಲ್ ಠಾಕೂರ್​ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ನೀಲಿ ಬಿಕಿನಿಯಲ್ಲಿ 'ಸೀತಾ ರಾಮಂ' ಬೆಡಗಿ ಸೀತಾ ಮಹಾಲಕ್ಷ್ಮಿಅಲಿಯಾಸ್‌ ಮೃಣಾಲ್​ ಠಾಕೂರ್..!  title=

Sita Ramam : ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟಿ ಮೃಣಾಲ್ ಠಾಕೂರ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಟಾಲಿವುಡ್ನಲ್ಲಿ ನಟಿ ಮೃಣಾಲ್ ಠಾಕೂರ್​ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿರುವ ನಟಿ ರಿಲ್ಯಾಕ್ಸ್ ಆಗಲು ಮಸ್ತ್ ಟ್ರಿಪ್ ಮಾಡ್ತಿದ್ದಾರೆ. ಸಮುದ್ರದ ದಡದಲ್ಲಿ ಮೃಣಾಲ್ ಠಾಕೂರ್ ಎಂಜಾಯ್ ಮಾಡ್ತಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Mrunal Thakur (@mrunalthakur)

ಇದನ್ನೂ ಓದಿ-ಫ್ಯಾನ್ಸ್‌ಗೆ ಎಕೋ ಫ್ರೆಂಡ್ಲಿ ಮೇಸೆಜ್‌ ಕೊಟ್ಟ ಉರ್ಫಿ, ಇದೊಂದು ಬಾಕಿ ಇತ್ತು ಎಂದ ನೆಟ್ಟಿಗರು..!

ತ್ತೀಚೆಗೆ ಹನು ರಾಘವಪುಡಿ ನಿರ್ದೇಶನದಲ್ಲಿ ಹಾಗೂ ಅಶ್ವನಿ ದತ್ ನಿರ್ಮಾಣದ 'ಸೀತಾ ರಾಮಂ' ಸಿನಿಮಾದಲ್ಲಿ ಸೀತಾ ಮಹಾಲಕ್ಷ್ಮಿಯಾಗಿ ಮತ್ತು ಮತ್ತೊಂದೆಡೆ ರಾಜಕುಮಾರಿ ನೂರ್ಜಹಾನ್ ಆಗಿ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.  ಈ ಸಿನಿಮಾದಲ್ಲಿ  ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಿದ್ದು, ಉತ್ತಮ ಯಶಸ್ಸು ಕಂಡಿದೆ.  

ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತರುಣ್ ಭಾಸ್ಕರ್ ಮತ್ತು ಸುಮಂತ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸೀತಾ ರಾಮಂ ಚಿತ್ರದ ಗೆಲುವಿನ ಬಳಿಕ ಮೃಣಾಲ್​ ಠಾಕೂರ್ಗೆ ದಕ್ಷಿಣ ಭಾರತದಿಂದ ಹೆಚ್ಚು ಆಫರ್ಸ್​ ಬರುತ್ತಿವೆ. ಸಂಭಾವನೆ ಕೂಡ ಹೆಚ್ಚಾಗಿದೆ.

ಇದನ್ನೂ ಓದಿ-Kannada New Serial : ಮೌನ ಹಾಗೂ ಸನ್ನೆಯನ್ನು  ಅರ್ಥ ಮಾಡಿಸಲು  ಬರುತ್ತಿದೆ ʼರಾಣಿʼ ಎಂಬ ಹೊಸ ಧಾರವಾಹಿ

Trending News