Shreya Ghoshal ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲ ಕುತೂಹಲಕಾರಿ ಮಾಹಿತಿ..!

ಫಿಲ್ಮ ಫೇರ್ ಪ್ರಶಸ್ತಿ ಪುರಸ್ಕೃತ ಶ್ರೇಯಾ ಅವರ ಹೆಸರಿನಲ್ಲಿ, ಜೂನ್ 26 ರ ದಿನವನ್ನು ಯುಎಸ್ ನ  ಓಹಿಯೋದಲ್ಲಿ 'ಶ್ರೇಯಾ ಘೋಶಾಲ್ ದಿನ' ಎಂದು ಆಚರಿಸಲಾಗುತ್ತದೆ.

Written by - Ranjitha R K | Last Updated : Mar 12, 2021, 04:14 PM IST
  • ಶ್ರೇಯಾ ಘೋಷಾಲ್ ಅವರಿಗೆ ಜನ್ಮದಿನದ ಸಂಭ್ರಮ
  • 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶ್ರೇಯಾ ಘೋಷಾಲ್
  • ಅಮೆರಿಕಾದಲ್ಲಿ ಜೂನ್ 26 ಅನ್ನು ಶ್ರೇಯಾ ಘೋಷಾಲ್ ದಿನ ಎಂದು ಆಚರಿಸಲಾಗುತ್ತದೆ
Shreya Ghoshal ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲ ಕುತೂಹಲಕಾರಿ ಮಾಹಿತಿ..! title=
ಶ್ರೇಯಾ ಘೋಷಾಲ್ ಅವರಿಗೆ ಜನ್ಮದಿನದ ಸಂಭ್ರಮ (file photo)

ನವದೆಹಲಿ : ಮಧುರ ಕಂಠದ ಗಾಯಕಿ ಶ್ರೇಯಾ ಘೋಶಾಲ್  ಗೆ (Shreya Ghoshal) ಇಂದು ಜನ್ಮದಿನದ ಸಂಭ್ರಮ . ಶ್ರೇಯಾ ಘೋಷಾ ಲ್ ಬಾಲಿವುಡ್ ನ  (Bollywood) ಖ್ಯಾತ ಗಾಯಕಿಯರಲ್ಲಿ ಒಬ್ಬರು. ಶ್ರೇಯಾ ಘೋಷಾಲ್ ಕನ್ನಡದ ಅನೇಕ ಸಿನೆಮಾಗಳಲ್ಲೂ ಹಾಡಿದ್ದಾರೆ.  ಅನೇಕ ಸೂಪರ್ ಹಿಟ್ ಗೀತೆಗಳನ್ನು ಹಾಡುವ ಮೂಲಕ , ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಶ್ರೇಯಾ ಘೋಷಾಲ್ ಹುಟ್ಟು ಹಬ್ಬದ (Birthday) ಅಂಗವಾಗಿ, ಶ್ರೇಯಾ ಬಗ್ಗೆ ನಿಮಗೆ ಗೊತ್ತಿರದ ಕೆಲವು ಕುತೂಹಲಕಾರಿ ಸಂಗತಿಗಳನ್ನು ನಾವು ತಿಳಿಸುತ್ತೇವೆ. 

-ಶ್ರೇಯಾ ಘೋಶಾಲ್ (Shreya Ghoshal) ಅವರು ಮಾರ್ಚ್ 12, 1984 ರಂದು ಪಶ್ಚಿಮ ಬಂಗಾಳದ (West Bengal) ಬೆಹ್ರಾಂಪುರದ ಮುರ್ಷಿದಾಬಾದ್ ನಲ್ಲಿ ಜನಿಸಿದರು.
-ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವು ಹೊಂದಿದ್ದರು. ತಮ್ಮ ನಾಲ್ಕನೇ ವಯಸ್ಸಿನಿಂದಲೇ  ಸಂಗೀತ (Music) ಕಲಿಯಲು  ಆರಂಭಿಸಿದ್ದರು.

ಇದನ್ನೂ ಓದಿ : The World’s Biggest Stars’ಪಟ್ಟಿಯಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ

-'ಸರೆಗಮಪ' (Sa Re Ga Ma pa) ಎಂಬ ಟಿವಿ ಕಾರ್ಯಕ್ರಮದಿಂದಾಗಿ ಶ್ರೇಯಾ ಅವರಿಗೆ ದೊಡ್ಡ ಅವಕಾಶ ಸಿಕ್ಕಿತು.   
-ಎರಡನೇ ಬಾರಿಗೆ 'ಸರೆಗಮಪ' ದಲ್ಲಿ ಶ್ರೇಯಾ ಘೋಷಾಲ್ ಭಾಗವಹಿಸಿರುವುದು ಶ್ರೇಯಾ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿತು. ಸರೆಗಮಪಾದಿಂದಾಗಿ ಬಾಲಿವುಡ್ (Bollywood) ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಶ್ರೇಯಾ ಅವರಿಗೆ ತಮ್ಮ ಚಿತ್ರ ದೇವದಾಸ್ ನಲ್ಲಿ ಹಾಡುವ ಅವಕಾಶ ನೀಡಿದರು. 
-ಶ್ರೇಯಾ ಘೋಶಾಲ್ ಅತ್ಯುತ್ತಮ ಹಾಡಿಗಾಗಿ ಹಲವಾರು ಪ್ರಶಸ್ತಿಗಳನ್ನು (Award) ಗೆದ್ದಿದ್ದಾರೆ. ಕೇವಲ 26 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತದ ಮೊದಲ ಗಾಯಕಿ ಇವರು.

ಇದನ್ನೂ ಓದಿ : Radhika pandit birthday : ಜನ್ಮ ದಿನಾಚರಣೆಗೆ ಮನೆ ಬಳಿ ಬಾರದಂತೆ ಮಾಡಿದ ಮನವಿಗೆ ಅಭಿಮಾನಿ ಕೇಳಿದ ಪ್ರಶ್ನೆ ಹೀಗಿತ್ತು..!

-ಫಿಲ್ಮ ಫೇರ್ ಪ್ರಶಸ್ತಿ (Filmfare award) ಪುರಸ್ಕೃತ ಶ್ರೇಯಾ ಅವರ ಹೆಸರಿನಲ್ಲಿ, ಜೂನ್ 26 ರ ದಿನವನ್ನು ಯುಎಸ್ ನ  ಓಹಿಯೋದಲ್ಲಿ 'ಶ್ರೇಯಾ ಘೋಶಾಲ್ ದಿನ' ಎಂದು ಆಚರಿಸಲಾಗುತ್ತದೆ.
-ಲತಾ ಮಂಗೇಶ್ಕರ್ (Latha mangeshkar)ಅವರನ್ನು ಸ್ಫೂರ್ತಿ ಎಂದು ಪರಿಗಣಿಸಿರುವ ಶ್ರೇಯಾ ಘೋಶಾಲ್ ಹಿಂದಿ ಜೊತೆಗೆ ಬಂಗಾಳಿ, ತಮಿಳು, ತೆಲುಗು, ಕನ್ನಡ (Kannada) , ಮರಾಠಿ ಮತ್ತು ಭೋಜ್‌ಪುರಿ ಭಾಷೆಗಳ  ಹಾಡುಗಳನ್ನು ಹಾಡಿದ್ದಾರೆ.
-ಇನ್ನು ಶ್ರೇಯಾ ಘೋಷಾಲ್ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಶ್ರೇಯಾ ತನ್ನ ಬಾಲ್ಯದ ಗೆಳೆಯ ಶಿಲಾದಿತ್ಯ (Sheeladithya) ಮುಖೋಪಾಧ್ಯಾಯ ಅವರನ್ನು 2015 ರಲ್ಲಿ ವಿವಾಹವಾದರು.

ಇದನ್ನೂ ಓದಿ : Mithun Chakraborty: ಬಿಜೆಪಿಗೆ ಸೇರ್ಪಡೆಯಾದ ಬಾಲಿವುಡ್ ನಟ 'ಮಿಥುನ್ ಚಕ್ರವರ್ತಿ'..!

-ಶ್ರೇಯಾ ಘೋಶಾಲ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಈ ಬಗ್ಗೆ ಇತ್ತೀಚೆಗೆ, ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದರು 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News