Bhairathi Ranagal : ಸ್ಯಾಂಡಲ್‌ವುಡ್‌ನಲ್ಲಿ ಒಂದರ ಹಿಂದೆ ಒಂದರಂತೆ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ. ಇಂದು ಬೆಳಿಗ್ಗೆ ಯೂಟ್ಯೂಬ್‌ನಲ್ಲಿ ಕಬ್ಜ ಟ್ರೈಲರ್ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಇದರ ಬೆನ್ನಲ್ಲೆ ಹ್ಯಾಟ್ರೀಕ್ ಹೀರೋ ಡಾ. ಶಿವರಾಜಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್ ಪ್ಯಾನ್ ಇಂಡಿಯಾ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರದ ಮೇಲಿನ ಕ್ಯೂರಿಯಾಸಿಟಿ ಡಬಲ್ ಮಾಡಿದೆ.
ಕನ್ನಡ ಚಿತ್ರರಂಗದ ಬ್ಲಾಕ್ಬಸ್ಟರ್ ಸಿನಿಮಾ ಮಫ್ತಿ ರಿಲೀಸ್ ಆಗಿ ಇಂದಿಗೆ 5 ವರ್ಷ ಆಗಿದೆ. 2017ರ ಡಿಸೆಂಬರ್ 1 ರಂದು ಬಿಡುಗಡೆಯಾದ ಮಫ್ತಿ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಶಿವಣ್ಣನ ಖಡಕ್ ಲುಕ್ ಮೋಡಿಗೆ ಕನ್ನಡ ಸಿನಿ ಪ್ರೇಕ್ಷಕ ಫಿದಾ ಆಗಿದ್ದ. ಆ ಸಿನಿಮಾದಲ್ಲಿ ಶಿವರಾಜ ಕುಮಾರ್ ಅವರು ಭೈರತಿ ರಣಗಲ್ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ಈಗ ಅದೇ ಹೆಸರಿನಲ್ಲಿ ಸಿನಿಮಾ ರೆಡಿಯಾಗಿದ್ದು, ರಿಲೀಸ್ ಆಗುತವ ಹಂತಕ್ಕೆ ಬಂದಿದೆ. ನಿರ್ದೇಶಕ ನರ್ತನ್ ಭೈರತಿ ರಣಗಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
The World Will Witness The Beginning Of His Era. Presenting the title of #BhairathiRanagal in all languages.#ಭೈರತಿರಣಗಲ್ #భైరతిరణగల్ #பைரதிரணகல் #ഭൈരതിരണകൾ #भैरतिरणगल #GeethaPictures #Narthan @GeethaPictures pic.twitter.com/G6hckSmwfh
— DrShivaRajkumar (@NimmaShivanna) March 5, 2023
ಇದನ್ನೂ ಓದಿ: ಶೂಟಿಂಗ್ ಸೆಟ್ ಕುಸಿತ.. ಎಆರ್ ರೆಹಮಾನ್ ಪುತ್ರ ಪ್ರಾಣಾಪಾಯದಿಂದ ಪಾರು..!
ಮಫ್ತಿ ಸಿನಿಮಾದ ನಾಯಕ ಭೈರತಿ ರಣಗಲ್ ಬಾಲ್ಯ ಜೀವನದ ಕಥೆಯೇ ಈ ಭೈರತಿ ರಣಗಲ್ ಸಿನಿಮಾ. ಒಂದು ರೀತಿ 'ಭೈರತಿ ರಣಗಲ್' ಮಫ್ತಿಯ ಮುಂದುವರೆದ ಭಾಗ ಅಂದ್ರೆ ತಪ್ಪಾಗಲ್ಲ. ಈ ಸಿನಿಮಾ ಘೋಷಣೆ ಕಳೆದ ಕೆಲ ದಿನಗಳ ಹಿಂದಷ್ಟೇ ಆಗಿತ್ತು. ಇಂದು ಚಿತ್ರದ ಪೋಸ್ಟರ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳ ಪೋಸ್ಟರ್‌ಗಳು ಬಿಡುಗಡೆಗೊಂಡಿವೆ. ಇನ್ನೊಂದು ವಿಶೇಷ ಅಂದ್ರೆ, ಭೈರತಿ ರಣಗಲ್ ಪೋಸ್ಟರ್‌ನಲ್ಲಿ ʼಅವನ ಯುಗದ ಆರಂಭಕ್ಕೆ ಜಗತ್ತು ಸಾಕ್ಷಿʼ ಎಂದು ಬರೆಯಲಾಗಿದೆ. ಗೀತಾ ಶಿವ ರಾಜ್‌ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.