ನವದೆಹಲಿ: ಇತ್ತೀಚಿಗೆ ಟಿವಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ದಲಿತರ ವಿರುದ್ದ ಅವಹೇಳನಕಾರಿ ಪದ ಬಳಸಿ ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಶಿಲ್ಪಾ ಶೆಟ್ಟಿ ಈ ವಿಷಯವಾಗಿ ಕ್ಷಮೆಯಾಚಿಸಿದ್ದಾರೆ.
ಸಲ್ಮಾನ್ ಖಾನ್ ಕೂಡಾ ತಮ್ಮ ಟೈಗರ್ ಜಿಂದಾ ಹೈ ಚಿತ್ರದ ಪ್ರೊಮೋಷನ್ ವೇಳೆಯಲ್ಲಿ ಭಂಗಿ ಎಂದು ಪದ ಬಳಸಿದ್ದರು ಈ ಕುರಿತಾಗಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಉತ್ತರ ಕೋರಿ ದೆಹಲಿ ಮತ್ತು ಮುಂಬೈ ಪೊಲೀಸರಿಗೆ ಪತ್ರ ಬರೆದಿತ್ತು.ಈ ಹಿನ್ನಲೆಯಲ್ಲಿ ತಮ್ಮ ಹೇಳಿಕೆಯ ಕುರಿತಾಗಿ ಟ್ವಿಟ್ಟರ್ ನಲ್ಲಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
I apologize if they have. I’m proud to belong to a country that boasts of diverse castes and creeds and I respect each one of them.🙏🙏
— SHILPA SHETTY KUNDRA (@TheShilpaShetty) December 23, 2017
Some of my words from an interview in the past have been misinterpreted.It was never said with the intent of hurting anyone’s feelings...
— SHILPA SHETTY KUNDRA (@TheShilpaShetty) December 23, 2017
ಈಗ ಟ್ವಿಟ್ಟರ್ ನಲ್ಲಿ ಕ್ಷೇಮೆ ಯಾಚಿಸಿರುವ ಶಿಲ್ಪಾ ಶೆಟ್ಟಿ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ನಾನು ಯಾರ ಭಾವನೆಗೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ಹಲವು ಜಾತಿ ಮತ್ತು ನಂಬಿಕೆಗಳು ಇರುವ ದೇಶದಲ್ಲಿ ಇರುವುದಕ್ಕೆ ಹೆಮ್ಮೆ ಪಡುವ ನಾನು, ಎಲ್ಲರ ಭಾವನೆಯನ್ನೂ ಗೌರವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.