Sharukh Khan Old Viral Statement:'ನನ್ನ ಮಗ ಡ್ರಗ್ಸ್ ಸೇವಿಸಬೇಕು, ಹುಡುಗಿಯರ ಹಿಂದೆ ಬೀಳಬೇಕು', ವೈರಲ್ ಆದ ಶಾರುಕ್ ಹಳೆ ಹೇಳಿಕೆ

Sharukh Khan Old Viral Statement: ಶಾರುಖ್ ಖಾನ್ ಪುತ್ರ (Sharukh Khan Son) ಆರ್ಯನ್ ಖಾನ್ ನನ್ನು (Aaryan Khan) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಬಂಧಿಸಿದ್ದಾರೆ. ಶನಿವಾರ ತಡರಾತ್ರಿ ಮುಂಬೈನ ಒಂದು ಕ್ರೂಸ್ ನಲ್ಲಿ (Cruise Drugs Party) ನಡೆಯುತ್ತಿತ್ತು. ಆಗ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

Written by - Nitin Tabib | Last Updated : Oct 3, 2021, 08:25 PM IST
  • ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಶಾರುಖ್ ಪುತ್ರನ ಬಂಧನ.
  • ಆದರೆ, ಈ ಕುರಿತ ಶಾರುಕ್ ಖಾನ್ ಹಳೆ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್.
  • Rendezvous With Simi Garewal ಷೋ ನಲ್ಲಿ ಶಾರುಕ್ ನೀಡಿದ್ದರು ಈ ಹೇಳಿಕೆ.
Sharukh Khan Old Viral Statement:'ನನ್ನ ಮಗ ಡ್ರಗ್ಸ್ ಸೇವಿಸಬೇಕು, ಹುಡುಗಿಯರ ಹಿಂದೆ ಬೀಳಬೇಕು', ವೈರಲ್ ಆದ ಶಾರುಕ್ ಹಳೆ ಹೇಳಿಕೆ title=
Sharukh Khan Old Viral Statement (File Photo)

Sharukh Khan Old Viral Statement: ಶಾರುಖ್ ಖಾನ್ ಪುತ್ರ (Sharukh Khan Son) ಆರ್ಯನ್ ಖಾನ್ ನನ್ನು (Aaryan Khan) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಬಂಧಿಸಿದ್ದಾರೆ. ಶನಿವಾರ ತಡರಾತ್ರಿ ಮುಂಬೈನ ಒಂದು ಕ್ರೂಸ್ ನಲ್ಲಿ (Cruise Drugs Party) ನಡೆಯುತ್ತಿತ್ತು. ಆಗ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಆರ್ಯನ್ ಖಾನ್ ಹೆಸರು ಕೇಳಿಬಂದ ನಂತರೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) #Aryankhan ಟ್ರೆಂಡ್ ಆರಂಭಿಸಿದೆ. ಏತನ್ಮಧ್ಯೆ, ಶಾರುಖ್ ಖಾನ್ ಅವರ ಹಳೆಯ ಸಂದರ್ಶನವೊಂದು ಇದೀಗ ವೈರಲ್ ಆಗುತ್ತಿದೆ. ಶಾರುಖ್ ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. ಈ ಸಂದರ್ಶನದಲ್ಲಿ ತಮಾಷೆಗಾಗಿ ಶಾರುಕ್ ತನ್ನ ಪುತ್ರನ ಕುರಿತು ಹಲವು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಶಾರುಕ್ ತಮಾಷೆಗಾಗಿ ಹೇಳಿದ ಸಂಗತಿಗಳನ್ನು ಅವರ ಪುತ್ರ ಸಿರಿಯಸ್ಸಾಗಿ ತೆಗೆದುಕೊಂಡನೆ? ಎಂಬ ಪ್ರಶ್ನೆ ಇದೀಗ ವೈರಲ್ ಆಗುತ್ತಿದೆ. 

Rendezvous With Simi Garewal ಷೋವೊಂದರಲ್ಲಿ ಶಾರುಕ್ ಖಾನ್ ತಮ್ಮ ಪತ್ನಿ ಗೌರಿ ಖಾನ್ ಜೊತೆಗೆ ತಲುಪಿದ್ದರು. ಆರ್ಯನ್ ಜನ್ಮ ತಮ್ಮ ಪಾಲಿಗೆ ಒಂದು ವಿಶಿಷ್ಟ ಅನುಭವ ಹೊತ್ತು ತಂದಿದೆ ಎಂದು ಶಾರುಕ್ ಹೇಳಿದ್ದಾರೆ. ಮಗನ ಪಾಲನೆ ಹಾಗೂ ಪೋಷಣೆಯ ಕುರಿತು ಶಾರುಕ್ ಅವರನ್ನು ಪ್ರಶ್ನಿಸಿದಾಗ, ಅದಕ್ಕೆ ಉತ್ತರ ನೀಡಿದ್ದ ಶಾರುಕ್, ನಾನು ನನ್ನ ಯೌವನಾಸ್ಥೆಯಲ್ಲಿ ಮಾಡದೆ ಇರುವ ಎಲ್ಲಾ ಸಂಗತಿಗಳನ್ನು ಆರ್ಯನ್ ಮಾಡಬೇಕು ಎಂಬುದು ನನ್ನ ಅಭಿಪ್ರಾಯ ಎಂದಿದ್ದರು.

ಆರ್ಯನ್ ಗಾಗಿ ಅವರು ಈ ಹೇಳಿಕೆಗಳನ್ನು ನೀಡಿದ್ದರು
ಈ ಸಂದರ್ಶನದಲ್ಲಿ ಮಾತನಾಡಿದ್ದ ಶಾರುಕ್, 'ನನ್ನ ಮಗ 3-4ನೇ ವಯಸ್ಸಿಗೆ ಬಂದಾಗ ನಾನು ಆತನಿಗೆ ಹುಡುಗಿಯರನ್ನು ಹಿಂಬಾಲಿಸಬಹುದು, ಡ್ರಗ್ಸ್ ಸೇವನೆ ಮಾಡಬಹುದು, ಸೆಕ್ಸ್ ಮಾಡಬಹುದು. ಶೀಘ್ರದಲ್ಲಿಯೇ ಆರಂಭಿಸುವುದು ಒಳ್ಳೆಯ ಸಂಗತಿಯಾಗಿದೆ. ನಾನು ಮಾಡದೆ ಇರುವ ಎಲ್ಲ ಕೆಲಸಗಳನ್ನು ಆತ ಮಾಡಬೇಕು. ಆತ ಸಂಪೂರ್ಣ ಹಾಳಾದ ಮಗುವಾಗಬೇಕು. ಒಂದು ವೇಳೆ ಆತ ಒಳ್ಳೆಯ ಮಗುವಾಗಿ ಬೆಳೆದರೆ ಅವನಿಗೆ ಈ ಮನೆಯಲ್ಲಿ ಜಾಗವಿಲ್ಲ. ನನ್ನ ಜೊತೆಗೆ ಕೆಲಸ ಮಾಡುವ ಜನರ ಹೆಣ್ಣುಮಕ್ಕಳು ನನ್ನ ಬಳಿ ಬಂದು ಆರ್ಯನ್ ಕುರಿತು ದೂರ ನೀಡಬೇಕು ಎಂಬುದು ನನ್ನ ಬಯಕೆ' ಎಂದಿದ್ದರು.

ಇದನ್ನೂ ಓದಿ-ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನಕ್ಕೆ ನಾಗಾರ್ಜುನ್ ಹೇಳಿದ್ದೇನು ಗೊತ್ತೇ?

ಆರ್ಯನ್ 23 ವರ್ಷ ವಯಸ್ಸಿನವನಾಗಿದ್ದು, ಇದೆ ವರ್ಷ ಆತ ಫಿಲ್ಮ್ ಮೇಕಿಂಗ್ ನಲ್ಲಿ ತನ್ನ ಅಧ್ಯಯನ ಪೂರ್ಣಗೊಳಿಸಿದ್ದಾನೆ.

ಇದನ್ನೂ ಓದಿ-ನಾಗಚೈತನ್ಯನಿಂದ 200 ಕೋಟಿ ರೂ.ಗಳ ಜೀವನಾಂಶ ತಿರಸ್ಕರಿಸಿದ ನಟಿ ಸಮಂತಾ..! ಕಾರಣವೇನು ಗೊತ್ತೇ

ಆಕ್ಷನ್ ಮೋಡ್ ನಲ್ಲಿ NCB
NCB ಅಧಿಕಾರಿಗಳು ಮುಂಬೈನಿಂದ ಗೋವಾಗೆ ಪ್ರಯಾಣ ಬೆಳೆಸುತ್ತಿದ್ದ ಕ್ರೂಸ್ ಹಡಗಿನಲ್ಲಿ  ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಬಣ್ಣ ಬಯಲಿಗೆಳೆದಿದ್ದಾರೆ. ಈ ವೇಳೆ ದೊಡ್ಡ ಕ್ರಮ ಕೈಗೊಂಡ ಅಧಿಕಾರಿಗಳು ಸುಮಾರು 8 ಜನರನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಕೂಡ ನಡೆದಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-ಸಮಂತಾ-ನಾಗಚೈತನ್ಯ ಡಿವೋರ್ಸ್: ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲವೆಂದ ಮಾಜಿ ಲವರ್ ಸಿದ್ಧಾರ್ಥ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News