Shahid Kapoor: ಛತ್ರಪತಿ ಶಿವಾಜಿ ಮಹರಾಜನ ಪಾತ್ರದಲ್ಲಿ ಶಾಹಿದ್‌!

Shahid Kapoorʼs Historical Film: ಬಾಲಿವುಡ್‌ನ ಹೆಸರಾಂತ ನಟ ಶಾಹಿದ್ ಕಪೂರ್ ಐತಿಹಾಸಿಕ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಛತ್ರಪತಿ ಶಿವಾಜಿ ಮಹರಾಜನ ಪಾತ್ರವನ್ನು ನಿರ್ವಹಿಸಲು ಸಿದ್ದರಾಗಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Feb 6, 2024, 10:01 AM IST
  • ನಟ ಶಾಹಿದ್‌ ಆರು ವರ್ಷಗಳ ತಮ್ಮ ಸಿನಿ ಕರಿಯರ್‌ನಲ್ಲಿ ತಾವೊಬ್ಬ ಬಹುಮುಖ ಪ್ರತಿಭೆ ಎಂದೆನಿಸಿಕೊಂಡವರು, ಪ್ರಸ್ತುತ ರೋಷನ್ ಆಂಡ್ರ್ಯೂಸ್‌ಗೆ ದೇವಾ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
  • ಛತ್ರಪತಿ ಶಿವಾಜಿ ಚಿತ್ರ ಅಮಿತ್‌ನ ಬಹುದಿನಗಳ ಕನಸಾಗಿದ್ದು, ಈ ಕಲ್ಪನೆಯನ್ನು ಅಶ್ವಿನ್‌ಗೆ ನೀಡಿದಾಗ, ಅದರ ದೃಷ್ಟಿ ಮತ್ತು ಬರವಣಿಗೆಯಿಂದ ಆಕರ್ಷಿತರಾದರು ಹಾಗೂ ಚಿತ್ರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು.
  • ನಟ ಶಾಹಿದ್ ಕಪೂರ್‌ ಶಿವಾಜಿ ಪಾತ್ರದಲ್ಲಿ ಬಣ್ಣಹಚ್ಚುವುದಾಗಿ ಹೆಚ್ಚುಕಡಿಮೆ ಒಪ್ಪಿದ್ದು, ಸ್ಟುಡಿಯೋ ಯೋಜನೆಗೆ ಬಂದ ನಂತರ ಎಲ್ಲಾ ದಾಖಲೆಗಳು ಮತ್ತು ಪ್ರಕಟಣೆಗಳು ನಡೆಯುತ್ತವೆ.
Shahid Kapoor: ಛತ್ರಪತಿ ಶಿವಾಜಿ ಮಹರಾಜನ ಪಾತ್ರದಲ್ಲಿ ಶಾಹಿದ್‌! title=

Shahid Kapoor As Shivaji Maharaj: ಬಾಲಿವುಡ್‌ನ  ಹೆಸರಾಂತ ಜನಪ್ರಿಯ ಕಲಾವಿದರಾಗಿ ಶಾಹಿದ್ ಕಪೂರ್ ಚಿತ್ರರಂಗದಲ್ಲಿ ಒಳ್ಳೆಯ ಇಮೇಜ್‌ ಕ್ರಿಯೇಟ್‌ ಮಾಡಿಕೊಂಡಿದ್ದರಿಂದ ಈತ ಹಿಟ್ ಸಿನಿಮಾಗಳ ಸರದಾರ ಎಂದೆನ್ನಿಸಿಕೊಂಡಿದ್ದಾರೆ. ನಟ ಶಾಹಿದ್‌ ಆರು ವರ್ಷಗಳ ತಮ್ಮ ಸಿನಿ ಕರಿಯರ್‌ನಲ್ಲಿ ತಾವೊಬ್ಬ ಬಹುಮುಖ ಪ್ರತಿಭೆ ಎಂದೆನಿಸಿಕೊಂಡವರು, ಪ್ರಸ್ತುತ ರೋಷನ್ ಆಂಡ್ರ್ಯೂಸ್‌ಗೆ ದೇವಾ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ನಟ ಮುಂಬರುವ ಅನೇಕ ಅತ್ಯುತ್ತಮ ಚಿತ್ರಗಳ  ಆಫರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ.

ಈಗಾಗಲೇ ಶಾಹಿದ್ ಕಪೂರ್  ಜಾಕಿ ಮತ್ತು ವಾಸು ಭಗ್ನಾನಿಯೊಂದಿಗೆ ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್ ರವಿ ನಿರ್ದೇಶನದ ದೊಡ್ಡ-ಬಜೆಟ್ ಚಿತ್ರಕ್ಕೆ ಸಹಿ ಹಾಕಿದ್ದು, ಇನ್ನಷ್ಟು ಐತಿಹಾಸಿಕ ಸಿನಿಮಾಗಳಲ್ಲೂ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬುದು ತಿಳಿದುಬಂದಿದೆ. ಈ ನಟ ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಐತಿಹಾಸಿಕ ಚಿತ್ರಕ್ಕಾಗಿ, ಒಎಮ್‌ಜಿ 2 ಸಿನಿಮಾ ಖ್ಯಾತಿಯ ನಿರ್ದೇಶಕರಾದ ಅಮಿತ್ ರಾಯ್ ಜೊತೆಗೆ ಮಾತುಕತೆ ನಡೆಸುತ್ತಿದ್ದು, ಹಾಗೆಯೇ ಈ ಚಿತ್ರವನ್ನು ವಕಾವೂ ಫಿಲಂಸ್‌ನ ವಿಪುಲ್ ಡಿ ಶಾ, ಅಶ್ವಿನ್ ವರ್ಡೆ ಮತ್ತು ರಾಜೇಶ್ ಬಹ್ಲ್ ನಿರ್ಮಿಸಲಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಕನ್ನಡಕ್ಕೆ ಎಂಟ್ರಿ! ‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಜೊತೆ ಕಿಂಗ್‌ ಖಾನ್‌?

ಛತ್ರಪತಿ ಶಿವಾಜಿ ಚಿತ್ರ ಅಮಿತ್‌ನ ಬಹುದಿನಗಳ ಕನಸಾಗಿದ್ದು, ಈ ಕಲ್ಪನೆಯನ್ನು ಅಶ್ವಿನ್‌ಗೆ ನೀಡಿದಾಗ, ಅದರ ದೃಷ್ಟಿ ಮತ್ತು ಬರವಣಿಗೆಯಿಂದ ಆಕರ್ಷಿತರಾದರು ಹಾಗೂ ಚಿತ್ರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು. ಈ ಜೋಡಿ ಶಾಹಿದ್ ಕಪೂರ್ ಸಂಪರ್ಕಿಸಿದ್ದು ಅವರೇ ಶಿವಾಜಿ ಪಾತ್ರ ಮಾಡಲು ಪರ್ಫೆಕ್ಟ್ ನಟ ಎಂಬುದಾಗಿ ತಿಳಿಸಿ, ಮತ್ತೆ ಈ ಚಿತ್ರವನ್ನು ಅಮಿತ್ ರೈ ಬರೆದು ನಿರ್ದೇಶಿಸಲಿದ್ದಾರೆ. ಅಲ್ಲದೆ, ಒಎಮ್‌ಜಿ ಸೇರಿದಂತೆ ಹಿಂದಿನ ಸಹಯೋಗವನ್ನು ಗಮನಿಸಿದರೆ, ಸಿನಿಮಾದ ನಿರ್ಮಾಣದ ಬಗ್ಗೆ ಅಶ್ವಿನ್ ಮತ್ತು ಅಮಿತ್ ನಡುವೆ ಸಾಕಷ್ಟು ಮಾತುಕತೆಗಳು ಬಿರುಸಿನ ವೇಗದಲ್ಲಿ ನಡೆದಿದ್ದು ಶಾಹಿದ್ ಈ ಚಿತ್ರದ ಬಗ್ಗೆ ಅಪರಿಮಿತ ಉತ್ಸಾಹ ಹಾಗೂ ಕಲ್ಪನೆ ಹೊಂದಿದ್ದಾರೆ.

ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಒಂದು ಧೈರ್ಯಶಾಲಿ ಅಧ್ಯಾಯದ ಕಥೆಯನ್ನು ಹೇಳಲಾಗುತ್ತಿದ್ದು, ಇದರಲ್ಲಿ ಶಿವಾಜಿ ಪಾತ್ರ ಮಾಡುವ ನಟ ಕೂಡ ತಮ್ಮ ನಟನೆಯಿಂದ ಸಿನಿರಸಿಕರನ್ನು ಹಿಡಿದಿಡಬೇಕಾಗುತ್ತದೆ ಆ ಕಲೆ ಶಾಹಿದ್‌ಗಿದೆ ಎಂಬುದು ಅಮಿತ್ ಮಾತಾಗಿದೆ. ಇನ್ನು ಪ್ರಿ-ಪ್ರೊಡಕ್ಶನ್ ಹಂತದೊಂದಿಗೆ ಮುಂದುವರಿಯುವ ಮುನ್ನ ತಂಡವು ಉನ್ನತ ಸ್ಟುಡಿಯೋದೊಂದಿಗೆ ಒಪ್ಪಂದ ನಡೆಸುವ ತಯಾರಿಯಲ್ಲಿದೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: Grammy Awards 2024: ಶಂಕರ್ ಮಹಾದೇವನ್, ಜಾಕಿರ್ ಹುಸೇನ್‌ಗೆ ಒಲಿದ ಗ್ರ್ಯಾಮಿ ಅವಾರ್ಡ್‌

ನಟ ಶಾಹಿದ್ ಕಪೂರ್‌ ಶಿವಾಜಿ ಪಾತ್ರದಲ್ಲಿ ಬಣ್ಣಹಚ್ಚುವುದಾಗಿ ಹೆಚ್ಚುಕಡಿಮೆ ಒಪ್ಪಿದ್ದು, ಸ್ಟುಡಿಯೋ ಯೋಜನೆಗೆ ಬಂದ ನಂತರ ಎಲ್ಲಾ ದಾಖಲೆಗಳು ಮತ್ತು ಪ್ರಕಟಣೆಗಳು ನಡೆಯುತ್ತವೆ. ಇನ್ನು ಸಿನಿಮಾದ ನಿರ್ಮಾಪಕರು ಸಹ ಉನ್ನತ ಸ್ಟುಡಿಯೋ ಹಾಗೂ ಹಣಕಾಸುದಾರರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಶೀರ್ಷಿಕೆಯಿಡದ  ಐತಿಹಾಸಿಕ ಬಿಗ್ ಬಜೆಟ್ ಚಿತ್ರ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದೆನಿಸಲಿದ್ದು, ಎಲ್ಲವೂ ಫೈನಲೈಸ್ ಆದರೆ ಚಿತ್ರೀಕರಣ ಕೂಡ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News