'ನಮ್ಮ ಧರ್ಮ ಯಾವುದು' ಎಂಬ ಮಗಳ ಪ್ರಶ್ನೆಗೆ ಶಾರುಖ್ 'ಶಾನ್‌ದಾರ್' ಉತ್ತರ!

ಶಾರುಖ್ ಖಾನ್ ಅವರು ಇತ್ತೀಚೆಗೆ ಮಗಳು ಸುಹಾನಾ ಅವರ ಧರ್ಮದ ಬಗ್ಗೆ ಕೇಳಿದಾಗ ಅವರು ನಡೆಸಿದ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಪ್ರತಿಕ್ರಿಯೆ ಟ್ವಿಟ್ಟರ್ನಲ್ಲಿ ಬೌಲ್ ಆಗಿದೆ.

Last Updated : Jan 28, 2020, 01:46 PM IST
'ನಮ್ಮ ಧರ್ಮ ಯಾವುದು' ಎಂಬ ಮಗಳ ಪ್ರಶ್ನೆಗೆ ಶಾರುಖ್ 'ಶಾನ್‌ದಾರ್' ಉತ್ತರ!  title=
Image Courtesy: Instagram/@iamsrk

ನವದೆಹಲಿ: ರಿಯಾಲಿಟಿ ಶೋ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ನಲ್ಲಿ ಇತ್ತೀಚೆಗೆ ಅತಿಥಿಯಾಗಿ ಕಾಣಿಸಿಕೊಂಡಿದ್ದ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಅವರ ಧರ್ಮದ ಬಗ್ಗೆ ಕೇಳಿದಾಗ ಅವರು ನಡೆಸಿದ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಪ್ರತಿಕ್ರಿಯೆ ಟ್ವಿಟ್ಟರ್ ಮೂಲಕ ಸಂಚಲನ ಮೂಡಿಸಿದೆ. ಕಾರ್ಯಕ್ರಮದಿಂದ ವೈರಲ್ ಆಗುತ್ತಿರುವ ವೀಡಿಯೊ ಕ್ಲಿಪ್‌ನಲ್ಲಿ, ಎಸ್‌ಆರ್‌ಕೆ(ಶಾರುಖ್ ಖಾನ್) ಅವರು ತಮ್ಮ ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಅವರಿಗೆ 'ಹಿಂದೂಸ್ತಾನ್' ಎಂದು ಕಲಿಸಿದ್ದಾರೆ ಮತ್ತು ಅದು ಅವರ ಏಕೈಕ ಧರ್ಮ ಎಂದು ಹೇಳಿದರು.

54 ವರ್ಷದ ನಟ, "ಹಮ್ನೆ ಕಭಿ ಹಿಂದೂ-ಮುಸಲ್ಮಾನ್ ಕಿ ಬಾತ್ ಹಿ ನಹಿ ಕಿ. ಮೇರಿ ಬಿವಿ ಹಿಂದೂ ಹೈ, ಮೆ ಮುಸಲ್ಮಾನ್ ಹು ಔರ್ ಜೋ ಮೇರ ಬಚ್ಚೆ ಹೈ ವೋ ಹಿಂದೂಸ್ತಾನ್ ಹೈ. ಜೆನ್ಯುಇನ್ ಬಾತ್ ಹೈ ಯೆ (ನಾವು ಎಂದಿಗೂ  ಹಿಂದೂ ಅಥವಾ ಮುಸ್ಲಿಂ ಎಂಬ ಬಗ್ಗೆ ಮಾತನಾಡಿಲ್ಲ. ನನ್ನ ಹೆಂಡತಿ ಹಿಂದೂ ಮತ್ತು ನಾನು ಮುಸ್ಲಿಂ ಮತ್ತು ನನ್ನ ಮಕ್ಕಳು ಹಿಂದೂಸ್ತಾನ್. ಇದು ನಿಜವಾದ ಸತ್ಯ)" ಎಂದು ವಿವರಿಸಿದ್ದಾರೆ.

ತಮ್ಮ ಮತ್ತು ಸುಹಾನಾ ಅವರ ಸಂಭಾಷಣೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ ಶಾರುಖ್ ಖಾನ್, "ಕಹೀ ಬಾರ್ ಸ್ಕೂಲ್ ಮೆ ವೋ ಭರ್ನಾ ಪಡ್ತಾ ಹೈ ಕಿ ಧರ್ಮ ಕ್ಯಾ ಹೇ? ಜಬ್ ಮೇರಿ ಬೇಟಿ ಚೋಟಿ ಥಿ ತೋಹ್ ಉಸ್ನೆ ಆಕೆ ಪೂಚಾ ಭಿ ಮುಜ್ಸೆ ಎಕ್ ಬಾರ್ ಕಿ 'ಪಾಪಾ ಹಮ್ ಕೌನ್ಸ್ ಧರ್ಮ ಕೆ ಹೈ?' ತೋಹ್ ಮೈನೆ ಉಸ್ಮೆ ಯೆ ಲಿಖಾ ಕಿ ಹಮ್ ಇಂಡಿಯನ್ ಹೈ ಹೈನ್ ಯಾರ್. ಕೊಯಿ ಧರ್ಮ ನಹಿ ಹೈ. ಔರ್ ಹೋನಾ ಭೀ ನಹಿ ಚಾಹಿಯೆ.(ಹಲವು ಬಾರಿ ನಾವು ಶಾಲೆಯಲ್ಲಿ ನಮ್ಮ ಧರ್ಮ ಯಾವುದು ಎಂಬುದನ್ನು ಭರ್ತಿ ಮಾಡಬೇಕಾಗುತ್ತದೆ. ನಮ್ಮ ಮಗಳು ಚಿಕ್ಕವಳಾಗಿದ್ದಾಗ ಒಂದು ಬಾರಿ ನನ್ನ ಬಳಿ ಬಂದು 'ಅಪ್ಪ ನಾವು ಯಾವ ಧರ್ಮದವರು?' ಎಂದು ಕೇಳಿದ್ದಳು. ಮತ್ತು ನಾವು ಭಾರತೀಯರು ಎಂದು ಬರೆದಿದ್ದೇನೆ, ನಮಗೆ ಯಾವುದೇ ಧರ್ಮವಿಲ್ಲ ಮತ್ತು ಒಂದನ್ನು ಹೊಂದಿರಬಾರದು)" ಎಂದು ಹಿಂದಿನ ಘಟನೆಯನ್ನು ಮೆಲುಕು ಹಾಕಿದರು.

ಎಸ್‌ಆರ್‌ಕೆ ಹೇಳಿದ್ದನ್ನು ವೀಕ್ಷಿಸಿ:

ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, "ನಾನು ಈವರೆಗೂ ಕೇಳಿರುವ ಅತ್ಯುತ್ತಮ ಸಾಲು ಇದು" ಎಂದು ಕೆಲವರು ಬರೆದಿದ್ದರೆ, "ನಮ್ಮ ರಾಷ್ಟ್ರವನ್ನು ಶ್ರೇಷ್ಠರನ್ನಾಗಿ ಮಾಡಲು ನಮಗೆ ಅವರಂತಹ ಜನರು ಬೇಕು" ಎಂಬಂತಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲಾಗುತ್ತಿದೆ.

ಶಾರುಖ್ ಖಾನ್ ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರನ್ನು 1991 ರಲ್ಲಿ ವಿವಾಹವಾದರು.  ಆರ್ಯನ್ ಮತ್ತು ಅಬ್ರಾಮ್ ಅವರ ಇಬ್ಬರು ಗಂಡು ಮಕ್ಕಳು ಮತ್ತು ಸುಹಾನಾ ಅವರ ಏಕೈಕ ಪುತ್ರಿ. ಆರ್ಯನ್ ಮತ್ತು ಸುಹಾನಾ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದರೆ ಅಬ್ರಾಮ್ ಮುಂಬೈನಲ್ಲಿದ್ದಾರೆ.
 

Trending News