'ಜವಾನ್'ನಲ್ಲಿ ನಟನೆ ಮಾಡೋಕು ಮುಂಚೆ ಶಾರುಖ್ ಯಶ್ ಸಿನಿಮಾ ನೋಡಿದ್ರಂತೆ...! ಏಕೆ ಗೊತ್ತಾ..?

Shah rukh khan Jawan : ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ʼಜವಾನ್ʼ ಕೂಡ ಒಂದು. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಇದೀಗ ಈ ಆಕ್ಷನ್- ಥ್ರೀಲ್ಲರ್‌ ಚಿತ್ರಕ್ಕಾಗಿ ಖಾನ್‌ ಹೇಗೆ ತಯಾರಿ ನಡೆಸಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

Written by - Krishna N K | Last Updated : Jul 14, 2023, 04:57 PM IST
  • ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ʼಜವಾನ್ʼ ಕೂಡ ಒಂದು.
  • ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ ನಟಿಸಿದ್ದಾರೆ.
  • ಖಾನ್‌ ಈ ಚಿತ್ರಕ್ಕಾಗಿ ಖಾನ್‌ ಹೇಗೆ ತಯಾರಿ ನಡೆಸಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
 'ಜವಾನ್'ನಲ್ಲಿ ನಟನೆ ಮಾಡೋಕು ಮುಂಚೆ ಶಾರುಖ್ ಯಶ್ ಸಿನಿಮಾ ನೋಡಿದ್ರಂತೆ...! ಏಕೆ ಗೊತ್ತಾ..? title=

Jawan movie : ಮೊದಲ ಬಾರಿಗೆ ನಟ ಶಾರುಖ್‌ ಖಾನ್‌ ಹಾಗೂ ಕಾಲಿವುಡ್‌ ಸ್ಟಾರ್‌ ನಿರ್ದೇಶಕ ಅಟ್ಲಿ ಜೊತೆಯಾಗಿದ್ದಾರೆ. ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿರುವ ತಮಿಳು ಡೈರೆಕ್ಟರ್‌ ಅಟ್ಲಿ ಇದೀಗ ಬಿಟೌನ್‌ ಕಿಂಗ್‌ ಜೊತೆ ಜವಾನ್‌ ಸಿನಿಮಾ ಮಾಡುತ್ತಿದ್ದಾರೆ ಇತ್ತೀಚಿಗೆ ಸಿನಿಮಾ ಪೋಸ್ಟರ್‌ ಒಂದು ರಿಲೀಸ್‌ ಆಗಿ ಸಖತ್‌ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಇದೀಗ ಶಾರುಖ್‌ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು.. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಶಾರುಖ್‌ ಆಗಾಗ ಆಸ್ಕ್‌ಎಸ್‌ಆರ್‌ಕೆ ( #AskSRK) ಎನ್ನುತ್ತಾ ಫ್ಯಾನ್ಸ್‌ ಜೊತೆ ಸಂವಾದ ನಡೆಸುತ್ತಿರುತ್ತಾರೆ. ಇತ್ತೀಚಿಗೆ ಆಸ್ಕ್‌ಎಸ್‌ಆರ್‌ಕೆ ಸಂವಾದದಲ್ಲಿ ಜವಾನ್ ಚಿತ್ರಕ್ಕಾಗಿ ತಯಾರಾಗಲು ಯಾವ ಸಿನಿಮಾ ನೋಡಿದ್ದೀರಿ ಅಂತ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ತಾವು ವಿಜಯ್, ಅಲ್ಲು ಅರ್ಜುನ್, ರಜನಿಕಾಂತ್ ಮತ್ತು ಯಶ್‌ ಸಿನಿಮಾಗಳನ್ನು ನೋಡಿದ್ದಾಗಿ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಬೋಲ್ಡ್ ಹುಡುಗಿಯಾಗಿ ʼBADʼ ಸಿನಿಮಾಗೆ ಎಂಟ್ರಿಕೊಟ್ಟ ಮಾನ್ವಿತಾ ಕಾಮತ್..!

ಈ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, “ನಾನು ಅಟ್ಲೀ ಅವರ ಸಾಕಷ್ಟು ಚಿತ್ರಗಳನ್ನು ನೋಡಿದ್ದೇನೆ. ವಿಜಯ್ ಸರ್. ಅಲ್ಲು ಅರ್ಜುನ್ ಜಿ. ರಜನಿ ಸರ್. ಯಶ್ ಮತ್ತು ಇತರ ಸಿನಿಮಾಗಳ ನೋಡಿದ್ದೀನಿ. ಹೀಗೆ ನನ್ನ ಪಾತ್ರಕ್ಕೆ ತಯಾರಿ ನಡೆಸಿದೆ. #ಜವಾನ್ ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿ ಜವಾನ್‌ ಚಿತ್ರದ ಮೇಲೆ ಶಾರುಖ್‌ ಫ್ಯಾನ್ಸ್‌ಗೆ ಬಹಳ ನಿರೀಕ್ಷೆ ಇದೆ.

ಜವಾನ್‌ ಟ್ರೈಲರ್‌ ಇತ್ತೀಚಿಗೆ ರಿಲೀಸ್‌ ಆಗಿತ್ತು. ಟ್ರೈಲರ್‌ನಲ್ಲಿ ಬಾದ್‌ ಶಾ ವಿಭಿನ್ನ ನೋಟಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸೆಪ್ಟೆಂಬರ್ 7, 2023 ರಂದು ಬಿಡುಗಡೆಯಾಗಲಿದೆ. ಇತ್ತೀಚಿಗೆ ಚಿತ್ರತಂಡ ಸಿನಿಮಾದ ಪೋಸ್ಟರ್‌ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ ಖಾನ್‌ ಬೋಳು ತಲೆಯ ಲುಕ್‌ನಲ್ಲಿ ಮಿಂಚಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News