ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಹಿಜಾಬ್ (Hijab) ವಿವಾದದ ಬಗ್ಗೆ ಹಿಜಾಬ್ ಕುರಿತ ಕಂಗನಾ ಕಾಮೆಂಟ್ ಗೆ ಮಾಜಿ ರಾಜ್ಯಸಭಾ ಸಂಸದೆ ಮತ್ತು ಹಿರಿಯ ನಟಿ ಶಬಾನಾ ಅಜ್ಮಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ನಾಳೆ 'ಜೇಮ್ಸ್' ಎಂಟ್ರಿ , ಮುಗಿಲು ಮುಟ್ಟಿದ ಅಪ್ಪು ಅಭಿಮಾನಿಗಳ ಸಂಭ್ರಮ..!
ನಟ ಲೇಖಕ ಆನಂದ್ ರಂಗನಾಥನ್ ಅವರ ಪೋಸ್ಟ್ ಅನ್ನು ಹಂಚಿಕೊಂಡ ಕಂಗನಾ (Kangana Ranawat), ಗುರುವಾರ ರಾತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. "ನೀವು ಧೈರ್ಯವನ್ನು ತೋರಿಸಬೇಕಾದರೆ, ಅಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೆ ಅದನ್ನು ಪ್ರದರ್ಶಿಸಿ. ನಿಮ್ಮನ್ನು ಪಂಜರದಲ್ಲಿಟ್ಟುಕೊಳ್ಳಬೇಡಿ, ಬಿಡಿಸಿಕೊಳ್ಳಲು ಕಲಿಯಿರಿ" ಎಂದು ಕಂಗನಾ ಬರೆದುಕೊಂಡಿದ್ದಾರೆ.
Correct me if Im wrong but Afghanistan is a theocratic state and when I last checked India was a secular democratic republic ?!! pic.twitter.com/0bVUxK9Uq7
— Azmi Shabana (@AzmiShabana) February 11, 2022
ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಕಂಗನಾ ಅವರ ಪೋಸ್ಟ್ ಅನ್ನು ಹಂಚಿಕೊಂಡಿರುವ ಹಿರಿಯ ನಟಿ ಶಬಾನಾ (Shabana Azmi), "ನಾನು ತಪ್ಪಾಗಿದ್ದರೆ ನನ್ನನ್ನು ಸರಿಪಡಿಸಿ. ಆದರೆ ಅಫ್ಘಾನಿಸ್ತಾನವು ದೇವಪ್ರಭುತ್ವದ (theocratic state) ರಾಜ್ಯವಾಗಿದೆ ಮತ್ತು ನಾನು ಕೊನೆಯದಾಗಿ ಭಾರತವನ್ನು ನೋಡಿದಾಗ ಭಾರತವು ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಗಿದೆಯೇ?!!" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Samsung Galaxy S22 ಸರಣಿಯ ಪ್ರಿ-ಬುಕಿಂಗ್ ಪ್ರಾರಂಭ.. ಬುಕ್ ಮಾಡುವುದು ಹೇಗೆ?
ಬುಧವಾರ, ಶಬಾನಾ ಅವರ ಪತಿ, ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ (Jawed Akhtar) ಅವರು ಭಾರತದಲ್ಲಿ ಹಿಜಾಬ್ ಸರಣಿಯನ್ನು ಖಂಡಿಸಿದ್ದಾರೆ. "ನಾನು ಎಂದಿಗೂ ಹಿಜಾಬ್ ಅಥವಾ ಬುರ್ಖಾ ಪರವಾಗಿಲ್ಲ. ನಾನು ಈಗಲೂ ಅದಕ್ಕೆ ಬದ್ಧನಾಗಿರುತ್ತೇನೆ. ಆದರೆ ಒಂದು ಸಣ್ಣ ಗುಂಪಿನ ಹುಡುಗಿಯರನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಈ ಗೂಂಡಾಗಳ ಗುಂಪು ವಿಫಲವಾಗಿದೆ. ಇದು ಅವರ 'MANLINESS' ಕಲ್ಪನೆಯೇ. ಎಷ್ಟು ಶೋಚನೀಯ" ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.