ಆಲಿವ್ ಗ್ರೀನ್ ಉಡುಗೆಯಲ್ಲಿ ನೆಟ್ಟಿಗರ ಗಮನ ಸೆಳೆದ ಸಾರಾ ಅಲಿ ಖಾನ್

ಇತ್ತೀಚೆಗಷ್ಟೇ ಈ ಬಾಲಿವುಡ್ ನ ಉದಯೋನ್ಮುಖ ಬೆಡಗಿ ಸಾಮಾಜಿಕ ಮಾಧ್ಯಮವಾಗಿರುವ ಇನ್ಸ್ಟಾಗ್ರಾಮ್ ಮೇಲೆ ತನ್ನ ಲೇಟೆಸ್ಟ್ ಭಾವಚಿತ್ರಗಳನ್ನು ಹರಿಬಿಟ್ಟು ಎಲ್ಲರ ಗಮನ ಸೆಳೆದಿದ್ದಾಳೆ. ಸಾರಾ ಹಂಚಿಕೊಂಡಿರುವ ಈ ಫೋಟೋಗಳಿಗೆ ಅವಳ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಭಾವಚಿತ್ರಗಳಲ್ಲಿ ಸಾರಾ ಆಲೀವ್ ಗ್ರೀನ್ ಬಣ್ಣದ ಆಫ್ ಶೋಲ್ಡರ್ ಟಾಪ್ ಧರಿಸಿದ್ದಾಳೆ.

Last Updated : Mar 2, 2020, 01:31 PM IST
ಆಲಿವ್ ಗ್ರೀನ್ ಉಡುಗೆಯಲ್ಲಿ ನೆಟ್ಟಿಗರ ಗಮನ ಸೆಳೆದ ಸಾರಾ ಅಲಿ ಖಾನ್ title=

ಇತ್ತೀಚೆಗಷ್ಟೇ ಸಾರಾ ಅಭಿನಯದ 'ಲವ್ ಆಜ್ ಕಲ್' ಚಿತ್ರ ಬಿಡುಗಡೆಗೊಂಡಿತ್ತು. ಆದರೆ, ಅವರ ಈ ಚಿತ್ರಕ್ಕೆ ಬಾಕ್ಸ್ ಆಫೀಸ್ ಮೇಲೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಲಭಿಸಿದೆ. ಸದ್ಯ ಸಾರಾ, ವರುಣ್ ಧವನ್ ಅವರ ಮುಂದಿನ ಚಿತ್ರ ಕೂಲಿ ನಂ.1 ಚಿತ್ರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದರೆ ಇವೆಲ್ಲವುಗಳ ಮಧ್ಯೆಯೂ ಕೂಡ ಸಾರಾ ಸಾಮಾಜಿಕ ಮಾಧ್ಯಮ ತಾಣಗಳ ಮೇಲೆ ತಮ್ಮ ಲೇಟೆಸ್ಟ್ ಭಾವಚಿತ್ರಗಳನ್ನು ಹರಿಬಿಟ್ಟು ಸುದ್ದಿ ಮಾಡುತ್ತಲೇ ಇರುತ್ತಾಳೆ.

 
 
 
 

 
 
 
 
 
 
 
 
 

🍀🍀☘️ 📸: @dop007

A post shared by Sara Ali Khan (@saraalikhan95) on

ಇತ್ತೀಚೆಗಷ್ಟೇ ಈ ಬಾಲಿವುಡ್ ನ ಉದಯೋನ್ಮುಖ ಬೆಡಗಿ ಸಾಮಾಜಿಕ ಮಾಧ್ಯಮವಾಗಿರುವ ಇನ್ಸ್ಟಾಗ್ರಾಮ್ ಮೇಲೆ ತನ್ನ ಲೇಟೆಸ್ಟ್ ಭಾವಚಿತ್ರಗಳನ್ನು ಹರಿಬಿಟ್ಟು ಎಲ್ಲರ ಗಮನ ಸೆಳೆದಿದ್ದಾಳೆ. ಸಾರಾ ಹಂಚಿಕೊಂಡಿರುವ ಈ ಫೋಟೋಗಳಿಗೆ ಅವಳ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಭಾವಚಿತ್ರಗಳಲ್ಲಿ ಸಾರಾ ಆಲೀವ್ ಗ್ರೀನ್ ಬಣ್ಣದ ಆಫ್ ಶೋಲ್ಡರ್ ಟಾಪ್ ಧರಿಸಿದ್ದಾಳೆ. ಜೊತೆಗೆ ಹಗುರವಾದ ಮೇಕಪ್ ಮೂಲಕ ತಮ್ಮ ಈ ಲುಕ್ ಗೆ ಸಾರಾ ಮೆರಗು ನೀಡಿದ್ದಾರೆ. ಕಿವಿಯಲ್ಲಿ ತಮ್ಮ ಡ್ರೆಸ್ ಗೆ ಮ್ಯಾಚ್ ಆಗುವಂತಹ ಕಿವಿಯೋಲೆಯನ್ನು ಕೂಡ ಧರಿಸಿರುವ ಸಾರಾ, ತುಂಬಾ ಎಥನಿಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾರಾ ಹಂಚಿಕೊಂಡಿರುವ ಈ ಭಾವಚಿತ್ರಕ್ಕೆ ಇದುವರೆಗೆ ಸುಮಾರು 7,26, 178 ಲೈಕ್ಸ್ ಬಂದಿದ್ದು, ಸುಮಾರು 2761 ಜನ ಕಾಮೆಂಟ್ ಕೂಡ ಮಾಡಿದ್ದಾರೆ. ಈ ಭಾವಚಿತ್ರಕ್ಕೆ ಕಾಮೆಂಟ್ ಮಾಡಿರುವ ಸಾರಾ ಅಭಿಮಾನಿಯೋಬ್ಬರು, 'ಯಾರ್ ಆಪ್ ಇತನೇ ಫ್ಯಾರೆ ಕೈಸೆ ಹೋ' ಎಂದು ಬರೆದು ಕೊಂಡಿದ್ದಾರೆ, ಮತ್ತೋರ್ವ ಅಭಿಮಾನಿ 'ಮಾಷಾ ಅಲ್ಲಾಹ್' ಎಂದು ಬರೆದುಕೊಂಡಿದ್ದಾರೆ.

ಸಾರಾ ವೃತ್ತಿ ಜೀವನದ ಕುರಿತು ಮಾತನಾಡುವುದಾದರೆ, ಸಾರಾ ಬಳಿ 'ಅಂತರಂಗಿ' ಚಿತ್ರ ಕೂಡ ಇದ್ದು, ಮುಂದಿನ ವರ್ಷ ವೆಲೆಂಟೈನ್ ಡೇ ದಿನ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಸಾರಾ ಜೊತೆಗೆ ಅಕ್ಷಯ್ ಕುಮಾರ್ ಹಾಗೂ ಧನುಶ್ ಕೂಡ ಕಾಣಿಸಿಕೊಳ್ಳಲಿದ್ದು, ಈ ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.

Trending News