ಮಾಸ್ಕ್‌ ಧರಿಸಿ ಕಡಲೆಕಾಯಿ ಪರಿಷೆ ಸುತ್ತಿದ ಸಪ್ತಮಿಗೌಡ : ವಿಡಿಯೋ ನೋಡಿ

ʼಕಾಂತಾರʼ ಸುಂದರಿ ಸಪ್ತಮಿಗೌಡ ಸೂಪರ್‌ ಆಕ್ಟಿವ್‌ ಗರ್ಲ್‌. ಒಂದಲ್ಲ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಸಿಂಗಾರ ಸಿರಿ ಲೀಲಾ ಮಾಸ್ಕ್‌ ಧರಿಸಿ ರಾಜಧಾನಿಯ ಬಸವನಗುಡಿಯಲ್ಲಿ ನಡೆದ ಕಡಲೆಕಾಯಿ ಪರಿಷೆ ಸುತ್ತಿ ಸಖತ್‌ ಎಂಜಾಯ್‌ ಮಾಡಿದ್ದು, ಈ ಕುರಿತ ವಿಡಿಯೋ ಒಂದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Written by - Krishna N K | Last Updated : Nov 23, 2022, 12:10 PM IST
  • ಮಾಸ್ಕ್‌ ಧರಿಸಿ ಕಡಲೆಕಾಯಿ ಪರಿಷೆ ಸುತ್ತಿದ್ದ ನಟಿ ಸಪ್ತಮಿಗೌಡ
  • ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸಿಂಗಾರಿ ಸಿರಿಯ ಸುತ್ತಾಟ
  • ಪರಿಷೆ ಸುತ್ತಾಡಿದ ವಿಡಿಯೋ ಹಾಗೂ ಫೋಟೋ ಹಂಚಿಕೊಂಡ ಲೀಲಾ
ಮಾಸ್ಕ್‌ ಧರಿಸಿ ಕಡಲೆಕಾಯಿ ಪರಿಷೆ ಸುತ್ತಿದ ಸಪ್ತಮಿಗೌಡ : ವಿಡಿಯೋ ನೋಡಿ title=

Sapthami Gowda : ʼಕಾಂತಾರʼ ಸುಂದರಿ ಸಪ್ತಮಿಗೌಡ ಸೂಪರ್‌ ಆಕ್ಟಿವ್‌ ಗರ್ಲ್‌. ಒಂದಲ್ಲ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಸಿಂಗಾರ ಸಿರಿ ಲೀಲಾ ಮಾಸ್ಕ್‌ ಧರಿಸಿ ರಾಜಧಾನಿಯ ಬಸವನಗುಡಿಯಲ್ಲಿ ನಡೆದ ಕಡಲೆಕಾಯಿ ಪರಿಷೆ ಸುತ್ತಿ ಸಖತ್‌ ಎಂಜಾಯ್‌ ಮಾಡಿದ್ದು, ಈ ಕುರಿತ ವಿಡಿಯೋ ಒಂದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೌದು... ನಟಿ ಸಪ್ತಮಿಗೌಡ ಅವರು ಸದ್ಯ ಕಾಂತಾರದ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ಮುಂದಿನ ಯಾವುದೇ ಚಿತ್ರದ ಬಗ್ಗೆ ಲೀಲಾ ಅಪ್‌ಡೇಟ್ಸ್‌ ನೀಡಿಲ್ಲ. ದಕ್ಷಿಣ ಕನ್ನಡ ದೇಗುಲ ಭೇಟಿಯ ನಂತರ ಬಸವನಗುಡಿಯಲ್ಲಿ ಜರುಗಿದ ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿ ಕಡಲೆಕಾಯಿ ತಿಂದು ಸ್ನೇಹಿತರ ಜೊತೆ ಸಖತ್‌ ಎಂಜಾಯ್‌ ಮಾಡಿದ್ದಾರೆ. ಜಾತ್ರೆಯ ತುಂಬಾ ಮಾಸ್ಕ್‌ ಧರಿಸಿ ಸುತ್ತಾಡಿ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ಆದ್ರೆ ಜನರಿಗೆ ಮಾತ್ರ ಜಾತ್ರೆಯಲ್ಲಿ ತುಂಟಾಟ ಮಾಡಿದ ಹುಡುಗಿ ಸಪ್ತಮಿಗೌಡ ಅಂತ ತಿಳಿಯಲಿಲ್ಲ.

ಇದನ್ನೂ ಓದಿ : ಬಾಲಿವುಡ್‍ನ ಬಿಗ್ ಆಫರ್‍ಗೆ ಬೇಡ ಅಂದರೇಕೆ ಬನಾರಸ್ ಹೀರೋ?

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ಸಪ್ತಮಿಗೌಡ ಕಲೆಕಾಯಿ ಪರಿಷೆ ಭೇಟಿಯ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈವರೆಗೆ ಸುಮಾರು 90 ಸಾವಿರ ಜನರು ಲೈಕ್ ಮಾಡಿದ್ದಾರೆ. ಇನ್ನು ಹಲವು ನೆಟ್ಟಿಗರು ಕಾಮೆಂಟ್‌ ಮಾಡಿ, ಪರಿಷೆಗೆ ಬರ್ತೀನಿ ಅಂತ ಹೇಳ್ಬೇಕಿತ್ತು ಅಲ್ವಾ ಮೇಡಂ ಅಂತ ಕೇಳಿದ್ದಾರೆ. ಇನ್ನು ಕೆಲವರು, ನಿಮ್ಮನ್ನು ನಾನು ನೋಡಿದೆ ಆದ್ರೆ ನೀವೇ ಅದು ಅಂತ ಗೊತ್ತಾಗ್ಲಿಲ್ಲ, ಯಾರೋ ಕ್ಯಾಮೆರಾ ಹಿಡಿದು ಸುತ್ತಾಡುತ್ತಿದ್ದರು ಎಂದಿದ್ದಾರೆ. ಕೆಲ ನೆಟ್ಟಿಗರು ಪಕ್ಕದಲ್ಲೇ ಇದ್ರೂ ಗುರುತಿಸೋಕೆ ಆಗ್ಲಿಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಕಾಂತಾರ ಸಿನಿಮಾ 400 ಕೋಟಿ ರೂ.ಗಳಿಸಿ ಮುನ್ನುಗ್ಗುತ್ತಿದೆ. 50 ದಿನಗಳನ್ನು ಮುಗಿಸಿರುವ ಕಾಂತಾರದ ಅಬ್ಬರ ದೇಶದಲ್ಲಿ ಇನ್ನೂ ತಗ್ಗಿಲ್ಲ. ಸಿನಿರಂಗದಲ್ಲಿ ನಿರ್ಮಿಸಿದ್ದ ಎಲ್ಲಾ ದಾಖಲೆಗಳನ್ನು ಒಂದೊಂದಾಗಿ ಪುಡಿ ಪುಡಿ ಮಾಡುತ್ತ ʼಕಾಂತಾರʼ ಕನ್ನಡಿಗರ ಹೆಮ್ಮೆಯ ಸಿನಿಮಾ ಆಗಿ ಹೊರಹೊಮ್ಮುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಕಾಂತಾರವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಸಿನಿಮಾದಲ್ಲಿ ಸಪ್ತಮಿಗೌಡ, ಕಿಶೋರ್‌, ಅಚ್ಯುತ್ ಕುಮಾರ್‌ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News