Sanjay dutt : ʼಕೆಡಿʼ ಶೂಟಿಂಗ್‌ ವೇಳೆ ʼಬಾಂಬ್‌ ಬ್ಲಾಸ್ಟ್‌ʼ.. ಸತ್ಯಾಂಶ ಬಿಚ್ಚಿಟ್ಟ ʼಸಂಜಯ್‌ ದತ್‌ʼ..!

Sanjay Dutt KD movie : ಶುಕ್ರವಾರ ಸಂಜೆ ಮಾಗಡಿ ರಸ್ತೆಯಲ್ಲಿ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾದ ಶೂಟಿಂಗ್‌ ನಡೆಯುತ್ತಿತ್ತು. ಈ ವೇಳೆ, ಸೆಟ್​ನಲ್ಲಿ ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಚಿತ್ರೀಕರಣ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಶೂಟಿಂಗ್‌ ನಿಲ್ಲಿಸಿದ್ದಾಗಿ ತಿಳಿದು ಬಂದಿತ್ತು. 

Written by - Krishna N K | Last Updated : Apr 13, 2023, 08:38 AM IST
  • ಶೂಟಿಂಗ್‌ ವೇಳೆ ಬಾಲಿವುಡ್ ಖ್ಯಾತ ನಟ ಸಂಜಯ್ ದತ್‌ಗೆ ಗಾಯ.
  • ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಚಿತ್ರೀಕರಣದ ವೇಳೆ ಘಟನೆ.
  • ಘಟನೆಯ ಕುರಿತು ಸತ್ಯಾಂಶ ಬಿಚ್ಚಿಟ್ಟ ಸಂಜಯ್‌ ದತ್‌.
Sanjay dutt : ʼಕೆಡಿʼ ಶೂಟಿಂಗ್‌ ವೇಳೆ ʼಬಾಂಬ್‌ ಬ್ಲಾಸ್ಟ್‌ʼ.. ಸತ್ಯಾಂಶ ಬಿಚ್ಚಿಟ್ಟ ʼಸಂಜಯ್‌ ದತ್‌ʼ..! title=

Sanjay Dutt injury : ಬಾಲಿವುಡ್ ಖ್ಯಾತ ನಟ ಸಂಜಯ್ ದತ್​ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ನಿನ್ನೆ ಈ ಚಿತ್ರದ ಶೂಟಿಂಗ್‌ ವೇಳೆ ನಡೆದ ಅವಘಡದಲ್ಲಿ ದತ್‌ಗೆ ಗಂಭೀರ ಗಾಯಗಳಾಗಿದ್ದವು ಎಂದು ಹೇಳಲಾಗುತ್ತಿತ್ತು. ಅಲ್ಲದೆ, ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಸುದ್ದಿಗಳು ಬಿತ್ತರಗೊಂಡಿದ್ದರು. ಇದೀಗ ಈ ವಿಚಾರ ಕುರಿತು ಸಂಜಯ್‌ ದತ್‌ ಟ್ಟೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಹೌದು.. ಶುಕ್ರವಾರ ಸಂಜೆ ಮಾಗಡಿ ರಸ್ತೆಯಲ್ಲಿ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾದ ಶೂಟಿಂಗ್‌ ನಡೆಯುತ್ತಿತ್ತು. ಈ ವೇಳೆ, ಸೆಟ್​ನಲ್ಲಿ ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಚಿತ್ರೀಕರಣ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಶೂಟಿಂಗ್‌ ನಿಲ್ಲಿಸಿದ್ದಾಗಿ ತಿಳಿದು ಬಂದಿತ್ತು. ಬಾಂಬ್‌ ಸ್ಟೋಟಗೊಂಡ ತೀವ್ರತೆಗೆ ಸಂಜಯ್‌ ಅವರ ಕೈ ಹಾಗೂ ಮುಖಕ್ಕೂ ಕೂಡ ಗಾಯಗಳಾಗಿದ್ದವು ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಈವರೆಗೆ 'Weekend with Ramesh' ಕಾರ್ಯಕ್ರಮದಲ್ಲಿ ಅತಿ ಹೆಚ್ಚು TRP ಬಂದಿದ್ದು ಯಾರ ಸಂಚಿಕೆಗೆ ಗೊತ್ತಾ?

ಸದ್ಯ ಎಲ್ಲಾ ವದಂತಿಗಳ ಬಗ್ಗೆ ನಟ ಸಂಜಯ್ ದತ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ತಮ್ಮ ಟ್ಟಿಟರ್‌ ಖಾತೆಯಲ್ಲಿ ʼನಾನು ಗಾಯಗೊಂಡಿದ್ದೇವೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಆ ಸುದ್ದಿಗಳೆಲ್ಲವೂ ಸಂಪೂರ್ಣವಾಗಿ ಆಧಾರರಹಿತವಾಗಿವೆ, ದೇವರ ದಯೆಯಿಂದ ನನಗೆನೂ ಆಗಿಲ್ಲ, ಆರೋಗ್ಯವಾಗಿದ್ದೇನೆ. ನಾನು ಕೆಡಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೇನೆ, ಚಿತ್ರತಂಡ ನನ್ನ ದೃಶ್ಯಗಳನ್ನು ಚಿತ್ರೀಕರಿಸುವಾಗ ಎಚ್ಚರಿಕೆ ವಹಿಸುತ್ತಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳುʼ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಕೆಡಿ ಸಿನಿಮಾದಲ್ಲಿ ಸಂಜಯ್ ದತ್ ಮಾತ್ರವಲ್ಲದೆ, ನಟಿ ಶಿಲ್ಪಾ ಶೆಟ್ಟಿ, ಕಾಲಿವುಡ್‌ ನಟ ವಿಜಯ್ ಸೇತುಪತಿ ಸೇರಿದಂತೆ ನಟ ರವಿಚಂದ್ರನ್ ಸಹ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ 80ರ ಕಾಲಘಟ್ಟದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News