Sanjay Dutt Movie Poster: ಬಾಲಿವುಡ್ ಸಿನಿರಂಗದಲ್ಲಿ ಬೆಸ್ಟ್ ಫ್ರೆಂಡ್ ಜೋಡಿಗಳಲ್ಲಿ ಒಂದಾದ ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಇದೀಗ ಜೈಲು ಪಾಲಾಗಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಒಂದು ಬಾರಿ ಗೊಂದಲಕ್ಕೀಡಾಗಿದ್ದಾರೆ. ಆದರೆ ಇದಕ್ಕೆ ಕಾರಣವೊಂದಿದೆ.
ಇದನ್ನೂ ಓದಿ: Samantha : ʼಸ್ಯಾಮ್ ಈಸ್ ಬ್ಯಾಕ್..ʼ ಜಿಮ್ನಲ್ಲಿ ಬೆವರಿಳಿಸಿದ ಬ್ಯೂಟಿ ಕ್ವೀನ್..!
ಮುನ್ನಾ ಭಾಯ್ ಎಂಬಿಬಿಎಸ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಪ್ರೇಕ್ಷಕರ ಹೃದಯದಲ್ಲಿ ಆಳವಾದ ಪ್ರಭಾವ ಬೀರಿದ್ದಾರೆ. ಇದೀಗ ಮತ್ತೊಮ್ಮೆ ಈ ನಟರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಇವರಿಬ್ಬರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಸಂಜಯ್ ದತ್ ತಮ್ಮ ಮುಂಬರುವ ಚಿತ್ರದ ಪೋಸ್ಟರ್ ಅನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ನಲ್ಲಿ, ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಕೈದಿಗಳ ಬಟ್ಟೆಯಲ್ಲಿ ಜೈಲಿನಲ್ಲಿರುವುದು ಕಾಣಬಹುದು. ಇಬ್ಬರೂ ಸಹ ಸಪ್ಪೆ ಮೋರೆ ಹಾಕಿದ್ದು, ಸದ್ಯ ಸಿನಿಮಾದ ಹೆಸರು ಏನೆಂದು ಬಹಿರಂಗವಾಗಿಲ್ಲ. ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಪ್ರತಿಕ್ರಿಯೆ ಬರಲಾರಂಭಿಸಿದೆ. ಮತ್ತೊಮ್ಮೆ ಈ ಜೋಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತದೆ ಎಂದು ಜನ ಹಾರೈಸಿದ್ದಾರೆ.
ಪೋಸ್ಟರ್ ಅನ್ನು ಶೇರ್ ಮಾಡಿರುವ ಸಂಜಯ್ ದತ್, “ನಮ್ಮ ಕಾಯುವಿಕೆ ನಿಮ್ಮದಕ್ಕಿಂತ ದೀರ್ಘವಾಗಿದೆ. ಆದರೆ ಕಾಯುವಿಕೆ ಕೊನೆಗೊಂಡಿದೆ. ಮತ್ತೊಂದು ರೋಮಾಂಚಕಾರಿ ಚಲನಚಿತ್ರಕ್ಕಾಗಿ ನನ್ನ ಸಹೋದರ @arshad_warsi ಅವರೊಂದಿಗೆ ಒಟ್ಟಿಗೆ ಬರುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಒಂದರ ಹಿಂದೆ ಒಂದು ಪ್ರಶಸ್ತಿ.. ಎಂಜಾಯ್ ಮಾಡೋಕೆ ಸ್ವಲ್ಪ ಗ್ಯಾಪ್ ಕೊಡಮ್ಮ..!
ಈ ಚಿತ್ರವನ್ನು ಸಿದ್ಧಾಂತ್ ಸಚ್ದೇವ್ ನಿರ್ದೇಶಿಸಿದ್ದಾರೆ. ಸಂಜಯ್ ದತ್ ಅವರೇ ಈ ಸಿನಿಮಾದ ನಿರ್ಮಾಪಕರು. ಸದ್ಯ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಆದರೆ ಪೋಸ್ಟರ್ ಹೊರಬಿದ್ದ ನಂತರ ಇದೀಗ ಪ್ರೇಕ್ಷಕರ ಉತ್ಸಾಹ ಹೆಚ್ಚಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.