ಅಧೀರನ ಸಂಭಾವನೆ ರಿವಿಲ್‌! ವಿಲನ್‌ ಪಾತ್ರದಲ್ಲಿ ಆಕ್ಟ್‌ ಮಾಡೋಕೆ ಸಂಜು ಕೇಳೋದೆಷ್ಟು ಗೊತ್ತೇ?

Sanjay Dutt: ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿ ಬಿಟ್ಟಿರುವ ಬಾಲಿವುಡ್ ನಟ ಸಂಜಯ್ ದತ್, ಒಂದ್ಕಾಲದಲ್ಲಿ ಹೀರೋ ಆಗಿ ಮಿಂಚಿ, ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಾಗಾದ್ರೆ ಈ ಬಾಲಿವುಡ್‌ ನಟ ಸಂಭಾವನೆ ಸಂಭಾವನೆಯೆಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

Written by - Zee Kannada News Desk | Last Updated : Nov 6, 2023, 11:59 AM IST
  • ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿಬಿಟ್ಟಿರುವ ಬಾಲಿವುಡ್ ನಟ ಸಂಜಯ್ ದತ್.
  • ಅಧೀರ ಪಾತ್ರ ಸಂಜುಗೆ ಹೊಸ ದಿಕ್ಕನ್ನೇ ತೋರಿಸಿದೆ.
  • 'ಲಿಯೋ' ಚಿತ್ರದಲ್ಲಿ ಆಂಟೋನಿ ದಾಸ್ ಪಾತ್ರದಲ್ಲಿ ಸಂಜು ನಟಿಸಿದ್ದಾರೆ.
ಅಧೀರನ ಸಂಭಾವನೆ ರಿವಿಲ್‌! ವಿಲನ್‌ ಪಾತ್ರದಲ್ಲಿ ಆಕ್ಟ್‌ ಮಾಡೋಕೆ ಸಂಜು ಕೇಳೋದೆಷ್ಟು ಗೊತ್ತೇ? title=

Sanjay Dutt Networth: ಬಾಲಿವುಡ್ ನಟ ಸಂಜಯ್ ದತ್, ಒಂದ್ಕಾಲದಲ್ಲಿ ಹೀರೋ ಆಗಿ ಮಿಂಚಿ, ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿಬಿಟ್ಟಿರುವ ನಟ, 'KGF'-2 ಚಿತ್ರದಿಂದ ದಕ್ಷಿಣಕ್ಕೆ ಭಾರತದ ಸಿನಿರಂಗಕ್ಕೆ ಗ್ರಾಮಡ್‌ ಎಂಟ್ರೀ ನೀಡಿದ್ದಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ಬಾಲಿವುಡ್ ಸ್ಟಾರ್ಸ್ ಸೌತ್ ಸಿನಿಮಾಗಳಲ್ಲಿ ನಟಿಸೋಕೆ ಹಿಂದು ಮುಂದು ನೋಡದೆ, ಸದ್ಯ ಸಂಜಯ್ ದತ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಅಭಿನಯಿಸುತ್ತಿದ್ದಾರೆ.

KGF'-2 ಬಳಿಕ ಸಂಜಯ್ ದತ್ ನಟನೆಯ ತಮಿಳು ಸಿನಿಮಾ 'ಲಿಯೋ' ರಿಲೀಸ್ ಆಗಿದ್ದು, ಮುಂದೆ ಪುರಿ ಜಗನ್ನಾಥ್ ನಿರ್ದೇಶನದ ಡಬಲ್ ಇಸ್ಮಾರ್ಟ್ ಶಂಕರ್, ಕನ್ನಡದ 'ಕೆಡಿ' ಸೇರಿದಂತೆ ಹಲವು ಸೌತ್ ಸಿನಿಮಾಗಳಲ್ಲಿ ಈ ಬಾಲಿವುಡ್‌ ಹೀರೋ ನಟಿಸುತ್ತಿದ್ದಾರೆ. ನಿಜಕ್ಕೂ ಅಧೀರ ಪಾತ್ರ ಸಂಜುಗೆ ಹೊಸ ದಿಕ್ಕನ್ನೇ ತೋರಿಸುವುದರ ಜೊತೆ ಮುಂದೆ ಪ್ರಭಾಸ್ ನಟನೆಯ 'ರಾಜಾ ಡೀಲಕ್ಸ್' ಚಿತ್ರದಲ್ಲೂ ಈ ಬಾಲಿವುಡ್‌ ನಟ ಬಣ್ಣ ಹಚ್ಚಿದ್ದಾರೆ ಎನ್ನಲಾಗ್ತಿದೆ. ಈತನಿಗೆ ಹೆಚ್ಚು ಹೆಚ್ಚು ಪೋಷಕ ಪಾತ್ರಗಳು ಅರಸಿ ಬರುವಂತಾಗಿದೆ.

ಇದನ್ನು ಓದಿ: ರಶ್ಮಿಕಾ ಫೇಕ್‌ ವಿಡಿಯೋ ವೈರಲ್:‌ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕೆಂದ ಅಮಿತಾಬ್ ಬಚ್ಚನ್!

ಕೆಜಿಎಫ್‌ ಚಾಪ್ಟರ್-2 ಶೂಟಿಂಗ್ ನಡುವೆಯೇ ಸಂಜಯ್ ದತ್ ಕ್ಯಾನ್ಸರ್‌ ಸಮಸ್ಯೆಯಿಂದ ಬಳಲಿತ್ತಿದ್ದು, ಕೊನೆಗೆ ಚೇತರಿಸಿಕೊಂಡ ಬಾಲಿವುಡ್ ನಟ ಅಧೀರನಾಗಿ ಅಬ್ಬರಿಸಿದ್ದರು. ಆದರೆ ಖಡಕ್ ಆಗಿ ನಟಿಸೋಕೆ ಅವರ ದೇಹ ಅಷ್ಟಾಗಿ ಸಹಕರಿಸದಿದ್ದರೂ ಆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಿತು. ಸದ್ಯ 'ಲಿಯೋ' ಆಂಟೋನಿ ದಾಸ್ ಪಾತ್ರದಲ್ಲಿ ಸಂಜು ನಟಿಸಿದ್ದು, ಮುಂದೆ ಮತ್ತಷ್ಟು ಸೌತ್ ಸಿನಿಮಾಗಳಲ್ಲಿ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ.

ನಟ ಸಂಜಯ್‌ ದತ್ತ್‌, ಪುರಿ ಜಗನ್ನಾಥ್ ನಿರ್ದೇಶನದ 'ಡಬಲ್ ಇಸ್ಮಾರ್ಟ್' ಚಿತ್ರದ ಮುಖ್ಯ ಪಾತ್ರಕ್ಕೆ  ಆಯ್ಕೆ ಆಗಿದ್ದು,ಈ ಪಾತ್ರಕ್ಕೆ 6 ಕೋಟಿ ರೂ. ಸಂಭಾವನೆಯನ್ನು ಸಂಜಯ್ ಪಡೆದುಕೊಂಡಿದ್ದಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೀತಿದೆ. ದಕ್ಷಿಣದ ಚಿತ್ರಗಳಿಗೆ ಸಂಜಯ್ ದತ್ 6 ರಿಂದ 10 ಕೋಟಿ ರೂ.ವರೆಗೂ ಚಾರ್ಜ್ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.ಕನ್ನಡದಲ್ಲಿ 'KGF-2' ಬಳಿಕ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ಸಂಜು ನಟಿಸುತ್ತಿದ್ದು, ಸಿನಿಮಾದಲ್ಲಿ ಕೆಡಿ ಧ್ರುವನ ಎದುರು ಸಂಜು ಖಡಕ್ ರೋಲ್‌ನಲ್ಲಿ ಅಬ್ಬರಿಸಲಿದ್ದಾರೆ. ಹಾಗೇ ಮಾರುತಿ ನಿರ್ದೇಶನದಲ್ಲಿ 'ರಾಜಾ ಡೀಲಕ್ಸ್' ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಪ್ರಭಾಸ್‌  ತಾತನ ಪಾತ್ರದಲ್ಲಿ ಬಾಲಿವುಡ್ ನಟ ಬಣ್ಣಹಚ್ಚಿದ್ದಾರೆ ಎನ್ನಲಾಗ್ತಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News