ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರ ಮನಗೆದ್ದ ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಿವರು..!

Sandalwood Stars : ಸ್ಯಾಂಡಲ್‌ವುಡ್‌ನಲ್ಲಿ ಎಲ್ಲಾ ನಟರು ತಮ್ಮದೇಯಾದ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಕೆಲವು ನಟರು ವಿಭಿನ್ನ ಪಾತ್ರಗಳ ಮೂಲಕ ನಟಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದಾರೆ.  

Written by - Savita M B | Last Updated : Jul 6, 2023, 05:43 PM IST
  • ಪ್ರತಿಭಾನ್ವಿತ ನಟರು ಇನ್ನು ಅಂಹತ ಪಾತ್ರಗಳ ಹುಡುಕಾಟದಲ್ಲಿದ್ದಾರೆ.
  • ಭಾರತದ ಸಿನಿರಂಗದಲ್ಲಿ ಹಲವಾರು ಸ್ಟಾರ್‌ ನಟರಿದ್ದಾರೆ.
  • ಕೆಲವು ಸಿನಿಮಾಗಳಲ್ಲಿ ನಟರು ಅಭಿಮಾನಿಗಳು ಅಚ್ಚರಿಗೊಳಗಾಗುವಂತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ
ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರ ಮನಗೆದ್ದ ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಿವರು..!  title=

Sandalwood : ಸಾಕಷ್ಟು ಪಾತ್ರಗಳಲ್ಲಿ ನಟಿಸಿದ ಪ್ರತಿಭಾನ್ವಿತ ನಟರು ಇನ್ನು ಅಂಹತ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಆದರೆ ಕೆಲವು ಸಿನಿಮಾಗಳಲ್ಲಿ ನಟರು ಅಭಿಮಾನಿಗಳು ಅಚ್ಚರಿಗೊಳಗಾಗುವಂತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗಾದ್ರೆ ಆ ಸ್ಟಾರ್‌ ನಟರು ಯಾರು ಅಂತ ಯೋಚನೆ ಮಾಡ್ತಾ ಇದ್ದೀರಾ..? ಆ ಪ್ರಮುಖ ನಟರ ಬಗ್ಗೆ ತಿಳಿಯಲು ಮುಂದೆ ಓದಿ..

ಕಿಚ್ಚ ಸುದೀಪ್‌ 
ಭಾರತದ ಸಿನಿರಂಗದಲ್ಲಿ ಹಲವಾರು ಸ್ಟಾರ್‌ ನಟರಿದ್ದಾರೆ. ಆದರೆ ಅದರಲ್ಲಿ ಕೆಲವರು ಮಾತ್ರ ಯಾವುದೇ ಪಾತ್ರಕೊಟ್ಟರೂ ಉತ್ತಮವಾಗಿ ನಟಿಸಬಲ್ಲರು. ಅಂತಹ ನಟರಲ್ಲಿ ಕಿಚ್ಚ ಸುದೀಪ್‌ ಕೂಡ ಒಬ್ಬರು. ಸಖತ್‌ ಬಿಲ್ಡಪ್‌ ಇರೋ ನಾಯಕ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಇನ್ನು ಕಿಚ್ಚ ಸುದೀಪ್‌ ಒಂದೇ ಪಾತ್ರಕ್ಕೆ ಸೀಮಿತವಾದವರಲ್ಲ. ಅವರೇ ಯಾವ ಪಾತ್ರವನ್ನು ಅರಸಿ ಹೋದವರೂ ಅಲ್ಲ. ಇವರು ಮಾಸ್‌ ಮತ್ತು ಕ್ಲಾಸ್‌ ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್‌ ಹುಚ್ಚ ಸಿನಿಮಾದಲ್ಲಿ ನಟಿಸಿರುವುದು ಅಭಿಮಾನಿಗಳ ಕಣ್ಣಲ್ಲಿ ಇಂದಿಗೂ ಹಾಗೇ ಇದೆ. ಇದೇ ಸಿನಿಮಾ ಕಿಚ್ಚ ಸುದೀಪ್‌ಗೆ ಬಿಗ್‌ ರಿಲೀಫ್‌ ನೀಡಿದ್ದು. 

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಲೈಟ್‌ಬಾಯ್‌ ಆಗಿ ಸಿನಿರಂಗದಲ್ಲಿ ತಮ್ಮ ಪಯಣವನ್ನು ಆರಂಭಿಸಿದರು. ಮುಂದೆ ಸಣ್ಣ ಪಾತ್ರಗಳಲ್ಲಿ ನಟಿಸುತ್ತಾ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ಆದರೆ ಆರಂಭದಲ್ಲಿ ನಟ ದರ್ಶನ್‌ ರೌಡಿಸಂ ಹಾಗೂ ಲವರ್‌ ಬಾಯ್‌ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಮೊದಲಬಾರಿಗೆ ಅಂಧನಾಗಿ ನಟಿಸಿದ ಸಿನಿಮಾ ʼನಮ್ಮ ಪ್ರೀತಿಯ ರಾಮುʼ ಈ ಸಿನಿಮಾ ಮಲಯಾಳಂ ರಿಮೇಕ್‌ ಆಗಿತ್ತು. ಈ ಚಿತ್ರದಲ್ಲಿ ದರ್ಶನ್‌ ಅವರ ಅದ್ಭುತವಾದ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು. 

ಇದನ್ನೂ ಓದಿ-ಭಾರಿ ಸದ್ದು ಮಾಡುತ್ತಿದೆ ʼರಾನಿʼ ಟೀಸರ್..ಅಭಿಮಾನಿಗಳಿಗೆ ಚಿರಋಣಿ ಎಂದ ಕಿರಣ್‌ ರಾಜ್..!‌

ಉಪೇಂದ್ರ 
ರಿಯಲ್‌ ಸ್ಟಾರ್‌ ಉಪೇಂದ್ರ ಎಂದು ಕರೆಯಲು ಕಾರಣವೇ ಅವರ ರಿಯಾಲಿಸ್ಟಿಕ್‌ ಸಿನಿಮಾಗಳು.. ಕನ್ನಡ ಸಿನಿರಂಗದಲ್ಲಿ ಟ್ರೆಂಡ್‌ ಸೆಟ್ಟರ್‌ ಡೈರೆಕ್ಟರ್‌ ಆಗಿರುವ ಉಪೇಂದ್ರ ತಮ್ಮ ವಿಭಿನ್ನತೆಯ ಮೂಲಕವೇ ಗುರುತಿಸಿಕೊಂಡವರು. ಇನ್ನು ಇವರು ಅನಾಥರು ಸಿನಿಮಾದಲ್ಲಿನ ಪಾತ್ರದಿಂದ ಎಲ್ಲರ ಮನಗೆದಿದ್ದರು. 

ಶಿವರಾಜ್‌ಕುಮಾರ್‌ 
ಕರನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ತಮ್ಮ ಸಿನಿಜೀವನದಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರೌಡಿಯಾಗಿ, ಪ್ರೇಮಿಯಾಗಿ, ಪೊಲೀಸ್‌ ಅಧಿಕಾರಿಯಾಗಿ, ಹೀಗೆ ಹತ್ತು ಹಲವಾರು ಪಾತ್ರಗಳಿಂದ ಕನ್ನಡಿಗರ ಹೃದಯದಲ್ಲಿದ್ದಾರೆ. ಅದ್ಭುತವಾದ ನಟನೆಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.  

ಇದನ್ನೂ ಓದಿ-ʼಹಿಡನ್‌ ಡ್ರ್ಯಾಗನ್‌ʼ, ʼಮುಲಾನ್‌ʼ ಖ್ಯಾತಿಯ ಗಾಯಕಿ, ನಟಿ ಕೊಕೊ ಲೀ ಆತ್ಮಹತ್ಯೆ..!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News