ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ಗಾಯಕ ನವೀನ್ ಸಜ್ಜು ಸೀರಿಯಲ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಯಶಸ್ವಿಯಾಗಿರುವ ನವೀನ್ ಸಜ್ಜು ಇದೀಗ ಅದ್ಭುತ ನಟನೆಯ ಮೂಲಕವೂ ಜನರ ಗಮನ ಸೆಳೆಯುತ್ತಿದ್ದಾರೆ. ʼಬಿಗ್‌ಬಾಸ್ʼ ಕನ್ನಡ 6ನೇ ಸೀಸನ್ ರನ್ನರ್ ಅಪ್ ಆಗಿ ಮಿಂಚಿದ್ದ ವಿಭಿನ್ನ ಕಂಠಸಿರಿಯ ನವೀನ್ ಸಜ್ಜು ಕೆಲವು ಅಲ್ಬಂ ಸಾಂಗ್‌ಗಳ ಮೂಲಕ ಇಡೀ ಕರುನಾಡ ಜನರ ಮನಸ್ಸು ಗೆದ್ದಿದ್ದರು. ಇದೀಗ ತಮ್ಮ ಅದ್ಭುತ ನಟನೆಯ ಮೂಲಕವೂ ಅವರು ಸಿನಿಪ್ರೇಮಿಗಳ ಮನಸ್ಸು ಗೆಲ್ಲುತ್ತಿದ್ದಾರೆ.
ಹೌದು, ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಮೂಡಿಬರಲಿರುವ ಸೀರಿಯಲ್‌ಗೆ ನವೀನ್ ಸಜ್ಜು ಬಣ್ಣ ಹಚ್ಚಿದ್ದಾರೆ. ಶೀಘ್ರವೇ ʼಚುಕ್ಕಿತಾರೆʼ ಎಂಬ ಹೊಸ ಕಥೆಯೊಂದು ಆರಂಭವಾಗಲಿದ್ದು, ಈ ಧಾರಾವಾಹಿ ಕಥೆಯು ವಿಭಿನ್ನವಾಗಿದೆ. ಈಗಾಗಲೇ ವಾಹಿನಿಯವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರೋಮೋದ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ಈ ಪ್ರೋಮೋದಲ್ಲಿ ವಿಶೇಷ ವ್ಯಕ್ತಿಯಾಗಿ ಅಂದರೆ ಒಬ್ಬ ಜವಾಬ್ದಾರಿಯುತ ಅಪ್ಪನಾಗಿ ನವೀನ್ ಸಜ್ಜು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Chukki Thare: ಕಿರುತೆರೆಗೆ ಪದಾರ್ಪಣೆ ಮಾಡಿದ ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು!
ಅಪ್ಪ-ಮಗಳ ಪ್ರೀತಿಯ ಬೆಸುಗೆಯ ಕಥೆಯಾಗಿರುವ ʼಚುಕ್ಕಿತಾರೆʼಯಲ್ಲಿ ಚುಕ್ಕಿಯ ಪಾತ್ರವನ್ನು ಮಹಿತಾ ನಿರ್ವಹಿಸಿದ್ದಾಳೆ. ಈ ಪ್ರೋಮೋ ನೋಡಿದ್ರೆ ಪ್ರತಿಯೊಬ್ಬರ ಕಣ್ಣಲ್ಲಿ ಕಣ್ಣೀರು ಜಿನುಗುತ್ತದೆ. ಪ್ರೋಮೋ ವಿಡಿಯೋ ಹಂಚಿಕೊಂಡಿರುವ ವಾಹಿನಿಯವರು, ʼಚುಕ್ಕಿ ಕೇಳೋ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸೋ ಅಪ್ಪನಿಗೆ, ಅವಳ ಆ ಒಂದು ಪ್ರಶ್ನೆಗೆ ಮಾತ್ರ ಸಮಾಧಾನಕರ ಉತ್ತರ ಗೊತ್ತಿಲ್ಲ ಬರ್ತಿದೆ ಹೊಸ ಕತೆ, ಚುಕ್ಕಿತಾರೆ!ʼ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ತಂದೆಯ ಪ್ರೀತಿಯ ಮಗಳು ಚುಕ್ಕಿಗೆ ಕಾಲು ಇರುವುದಿಲ್ಲ. ಈ ಬಗ್ಗೆ ತಂದೆ-ತಾಯಿಗೆ ತುಂಬಾ ಬೇಸರ ಇರುತ್ತದೆ. ತಮ್ಮೂರ ಜಾತ್ರೆಯಲ್ಲಿ ಮುದ್ದಾದ ಮಗಳು ಚುಕ್ಕಿಯನ್ನು ತಂದೆ ಎತ್ತಿಕೊಂಡೇ ಇರುತ್ತಾರೆ. ಆಗ ಚುಕ್ಕಿ ತಮ್ಮ ಅಪ್ಪನ ಗುಣದ ಬಗ್ಗೆ ಹೊಗಳುತ್ತಾ ಒಂದು ಪ್ರಶ್ನೆ ಕೇಳುತ್ತಾಳೆ. ʼಅಪ್ಪಾ... ಎಲ್ಲರೂ ಕಳಗಡೆ ನಿಂತು ನೋಡ್ತಾ ಇದ್ದಾರೆ, ಆದ್ರೆ ನೀನು ಮಾತ್ರ ನನ್ನ ಯಾಕೆ ಎತ್ಕೊಂಡಿದೀಯಾ?ʼ ಅಂತಾ. ಆಗ ಅಪ್ಪ ಹೇಳುವ ಮಾತುಗಳು ಪ್ರತಿಯೊಬ್ಬರ ಮನಸ್ಸಿಗೆ ನಾಟುತ್ತವೆ. ʼಚುಕ್ಕಿ... ನನ್ನ ತಪಸ್ಸಿಗೆ ಹುಟ್ಟಿರೋ ದೇವತೆ ನೀನು... ಹೀಗಾಗಿ ನಿನ್ನ ಕೆಳಗಡೆ ಇಳಿಸಲು ಆಗುತ್ತಾ?ʼ ಅಂತಾ ಹೇಳಿ ತನ್ನ ಮಗಳ ಕಾಲುಗಳನ್ನು ನೋಡುತ್ತಾನೆ. ಈ ವೇಳೆ ಚುಕ್ಕಿಯ ಕಾಲುಗಳಿಗೆ ರಾಡ್ ಹಾಕಿರುವುದು ಗೊತ್ತಾಗುತ್ತದೆ. ಈ ವೇಳೆ ಅಪ್ಪನ ಕಣ್ಣಲ್ಲಿ ನೀರು ಬರುತ್ತದೆ.
ಇದನ್ನೂ ಓದಿ: VISHWA MAANAVA APPU: ಸ್ಫೂರ್ತಿ ದಿನಕ್ಕೆ ಗಾಯಕ ನವೀನ್ ಸಜ್ಜುರಿಂದ ಮತ್ತೊಂದು ಸ್ಫೂರ್ತಿದಾಯಕ ಹಾಡು
ಅಂದಹಾಗೆ ಗಾಯಕ ನವೀನ್ ಸಜ್ಜು ಅವರೇ ಈ ಧಾರಾವಾಹಿಯ ಥೀಮ್ ಸಾಂಗ್‌ಅನ್ನು ಹಾಡಿದ್ದಾರೆ. 1.45 ನಿಮಿಷದ ಈ ಪ್ರೋಮೋ ತುಂಬಾ ಭಾವನಾತ್ಮಕವಾಗಿದ್ದು, ಹೆಚ್ಚಿನ ಜನರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟಿಹಾಕಿದೆ. ʼಚುಕ್ಕಿತಾರೆʼ ಬಗ್ಗೆ ಪ್ರೇಕ್ಷಕರಲ್ಲಿ ಇನ್ನಿಲ್ಲದ ಕುತೂಹಲ ಮೂಡಿದೆ. ಮನೆಮಂದಿ ಎಲ್ಲರೂ ಸೇರಿ ನೋಡಬಹುದಾದ ಸೀರಿಯಲ್ ಇದಾಗಿದ್ದು, ಶೀಘ್ರವೇ ಪ್ರಸಾರವಾಗಲಿದೆ. ಈಗಾಗಲೇ ಈ ಪ್ರೋಮೋದಿಂದ ʼಚುಕ್ಕಿತಾರೆʼಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರುನಡಿನ ಸಿನಿಪ್ರೇಮಿಗಳಿಗೆ ʼಚುಕ್ಕಿತಾರೆʼ ತುಂಬಾ ಇಷ್ಟವಾಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ನವೀನ್ ಸಜ್ಜುಗೆ ʼBest of lucḱ ಹೇಳುತ್ತಿದ್ದಾರೆ. ಈ ಧಾರವಾಹಿ ಪ್ರಸ್ತುತ ಸಮಾಜಕ್ಕೆ ಕನ್ನಡ ಹಿಡಿದಂತಿದೆ, ಗಾಯಕ, ಸಂಗೀತ ನಿರ್ದೇಶಕರಾಗಿ ಯಶಸ್ವಿಯಾಗಿರುವ ನವೀನ್ ಸಜ್ಜುಗೆ ನಟನೆಯಲ್ಲಿಯೂ ದೊಡ್ಡ ಸಕ್ಸಸ್ ಸಿಗಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.