Sandalwood Politics : ಕೆಲವು ನಟಿ ನಟಿಯರು ತಾವು ರಾಜಕೀಯದಲ್ಲಿ ತೊಡಗಿ ಜನಸೇವೆಯಲ್ಲಿ ನಿರತರಾಗಿದ್ದಾರೆ. ರಾಜಕೀಯದಲ್ಲಿ ಸೋತ ಕನ್ನಡದ ನಟ ನಟಿಯರ ಪಟ್ಟಿ ಇಲ್ಲಿದೆ ನೋಡಿ.
ಅನಂತ್ ನಾಗ್
ಕನ್ನಡ ಚಿತ್ರ ರಂಗದ ನಟ ಅನಂತ್ ನಾಗ್ ಅವರು ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿ. ಇವರು ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿಕೊಳ್ಳುತ್ತಾರೆ ಎಂಬ ವದಂತಿಗಳು ಗರಿದಾಡುತ್ತಿದ್ದವು. ಆದರೆ ಅನಂತ್ ನಾಗ್ ಅವರಿಗೆ ರಾಜಕೀಯ ಹೊಸದೇನಲ್ಲ. ಇವರು ಜೆ. ಹೆಚ್ ಅವರ ಸಂಪುಟದಲ್ಲಿ ಸಚಿವರಾಗಿ ಮತ್ತು ವಿಧಾನ ಪರಿಷತ್‌ನ ಸದಸ್ಯರಾಗಿಯೂ ಕಾರ್ಯನಿರ್ವಹಿಸದ್ದಾರೆ.
ಕಳೆದ ಒಳದು ದಶಕದಿಂದ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ. ಕಾರಣ ಅವರು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡರು ರಾಜಕೀಯದಲ್ಲಿ ಯಶಸ್ಸು ಕಾಣಲಿಲ್ಲ.
ಇದನ್ನೂ ಓದಿ-Weekend With Ramesh: ಡಾಕ್ಟರ್ ಆಗಿದ್ದ ನಾ. ಸೋಮೇಶ್ವರ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿದ್ದು ಹೇಗೆ?
ರಮ್ಯಾ
ಸ್ಯಾಂಡಲ್ ವುಡ್‌ನ ಟಾಪ್ ನಟಿ ರಮ್ಯಾ ಅವರು 2012ರಲ್ಲಿ ರಾಷ್ಟೀಯ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಇವರು 2013ರಲ್ಲಿ ಲೋಕಸಭೆಯ ಬೈ-ಎಲೆಕ್ಷನ್‌ನಲ್ಲಿ ಗೆದ್ದರು. ಇದಲ್ಲದೇ ಕನ್ನಡದ ಮೋಹಕತಾರೆ 2014ರಲ್ಲಿ ಮರಳಿ ಮಂಡ್ಯ ಲೋಕಸಭೆಗೆ ಸ್ಪರ್ಧಿಸಿ ಸಿ.ಎಸ್.ಪುಟ್ಟರಾಜು ವಿರುದ್ಧ ಸೋಲನ್ನು ಅನಭವಿಸಿದರು. ಇದಲ್ಲದೇ 2017ರಲ್ಲಿ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥರಾದರು.
2019ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಕಂಡ ನಂತರ ಅವರು ಕಾಂಗ್ರೆಸ್ ಪಕ್ಷದಿಂದ ಬಹಿರಂಗವಾಗಿ ಹೊರನಡೆದರು. ಮತ್ತೆ ಸಿನಿರಂಗಕ್ಕೆ ಪ್ರವೇಶ ಮಾಡಿಜದರು.
ನಿಖಿಲ್ ಕುಮಾರಸ್ವಾಮಿ
ರಾಜಕೀಯ ಹಿನ್ನೆಲೆಯುಳ್ಳ ನಟ ನಿಖಿಲ್ ಕುಮಾರಸ್ವಾಮಿ. ಇವರ ಕುಟುಂಬವೇ ರಾಜಕೀಯದಲ್ಲಿ ಇದೆ. ಆದರೆ ಇವರು ಮೊದಲು ಗುರುತಿಸಿಕೊಂಡಿದ್ದು, ಸಿರಂಗದಲ್ಲಿ. ಚಿತ್ರರಂಗದ ಜೊತೆಗೆ ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ನಿಖಿಲ್ ಜೆಡಿಎಸ್ ರಾಜ್ಯ ಯುವ ಘಟಕ ಮುಖ್ಯಸ್ಥರು ಹೌದು.
ಲೋಕಸಭೆಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯದಲ್ಲಿ ಇವರು ಸುಮಲತಾ ಅವರ ವಿರುದ್ಧವಾಗಿ ಸೋಲನುಭವಿಸಿದರು. ಮುಂಬರುವ ದಿನಗಳಲ್ಲಿ ಇವರೇ ಜೆಡಿಎಸ್ ಪಕ್ಷದ ಆಧಾರ ಸ್ತಂಭವಾಗುವ ಭರವಸೆಯನ್ನು ಈ ನಟ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.