ಟ್ರೋಲ್ ಆಯ್ತು ಉಪೇಂದ್ರ ಹೊಸ ಡಿಪಿ! ಉಪ್ಪಿ ಹೊಸ ಅವತಾರ ಕಂಡು ದಂಗಾದ ಫ್ಯಾನ್ಸ್..

ನಟ ಉಪೇಂದ್ರ ಮತ್ತೊಂದು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಡಿಪಿಯಲ್ಲಿ ಹಿಜಾಬ್ (Hijab) ತೊಟ್ಟ ಫೋಟೋವನ್ನು ಹಾಕಿಕೊಂಡಿದ್ದಾರೆ.  

Written by - Chetana Devarmani | Last Updated : Mar 23, 2022, 06:19 PM IST
  • ಟ್ರೋಲ್ ಆಯ್ತು ಉಪೇಂದ್ರ ಹೊಸ ಡಿಪಿ
  • ಚಿತ್ರದ ಮೊದಲ ಪೋಸ್ಟರ್ ಮೂಲಕ ಎಲ್ಲರ ತಲೆಗೆ ಹುಳ ಬಿಟ್ಟ ಉಪ್ಪಿ
  • ಈ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಕಂಡು ಅಚ್ಚರಿಗೊಂಡ ಜನ
ಟ್ರೋಲ್ ಆಯ್ತು ಉಪೇಂದ್ರ ಹೊಸ ಡಿಪಿ! ಉಪ್ಪಿ ಹೊಸ ಅವತಾರ ಕಂಡು ದಂಗಾದ ಫ್ಯಾನ್ಸ್.. title=
ಉಪೇಂದ್ರ

ನಟ ಉಪೇಂದ್ರ (Upendra) ಸದಾ ವಿಭಿನ್ನ ಸಿನಿಮಾಗಳನ್ನೇ ಮಾಡುತ್ತಿರುತ್ತಾರೆ. ಇತ್ತೀಚೆಗೆ ಹೆಚ್ಚಾಗಿ ಅವರ ಹೊಸ ಸಿನಿಮಾದಿಂದ ಹೆಚ್ಚು ಸುದ್ದಿಯಾಗಿದ್ದಾರೆ. ಲಾಂಗ್‌ ಗ್ಯಾಪ್‌ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ ಉಪ್ಪಿ. ಅವರ ಈ ಹೊಸ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಕಂಡು ಜನ ಅಚ್ಚರಿಗೊಂಡಿದ್ದಾರೆ.  

ಇದನ್ನೂ ಓದಿ: RRR ರಿಲೀಸ್‌ಗೆ ಕ್ಷಣಗಣನೆ.. ಸಿನಿಮಾ ವಿರುದ್ಧ ಕನ್ನಡಿಗರ ಆಕ್ರೋಶಕ್ಕೆ ಕಾರಣವೇನು?

ಉಪ್ಪಿ ನಿರ್ದೇಶನದ (Upendra New Look) ಈ ಚಿತ್ರದ ಟೈಟಲ್ ಏನು ಎಂದು ಅರ್ಥ ಆಗದೆ ಜನರು ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ. ಈ ಬಗ್ಗೆ ಅನೇಕರು ಪರಶ್ನೆಗಳನ್ನು ಕೇಳಿದ್ದಾರೆ. ಆದರೆ ಉಪೇಂದ್ರ ಮಾತ್ರ ಯಾವುದೇ ಉತ್ತರ ನೀಡಿಲ್ಲ. ಸಿನಿಮಾ ಟೈಟಲ್ ಪೋಸ್ಟರ್ ಅರ್ಥ ನಿಮ್ಮ ನಿಮ್ಮ ಕಲ್ಪನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಇದು ಅಭಿಮಾನಿಗಳ ಕುತೂಹಲ ಹೆಚ್ಚಲು ಕಾರಣವಾಗಿದೆ.

ಈ ಎಲ್ಲ ಗೊಂದಲಗಳ ನಡುವೆ ನಟ ಉಪೇಂದ್ರ ಮತ್ತೊಂದು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಡಿಪಿಯಲ್ಲಿ ಹಿಜಾಬ್ (Hijab) ತೊಟ್ಟ ಫೋಟೋವನ್ನು ಹಾಕಿಕೊಂಡಿದ್ದಾರೆ. ಇದು ಜನರಲ್ಲಿ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

 

 

ಉಪೇಂದ್ರ ಟ್ವಿಟ್ಟರ್‌ನಲ್ಲಿ (Upendra Twitter) ಒಂದು ಫೋಟೊ ಹಾಕಿಕೊಂಡಿದ್ದಾರೆ. ಈ ಫೊಟೋದಲ್ಲಿ ಉಪೇಂದ್ರ ಹುಡುಗಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತಲೆಗೆ ಮತ್ತು ಮುಖಕ್ಕೆ ಉಪ್ಪಿ ಬಟ್ಟೆ ಕಟ್ಟಿಕೊಂಡಿದ್ದಾರೆ.

ಉಪೇಂದ್ರ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡ ಕಾರಣ ಈ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಮಾತ್ರವಲ್ಲ ಟ್ರೋಲ್ ಕೂಡ ಆಗಿದೆ. ಈ ಪೋಸ್ಟ್‌ಗೆ ಹಲವರು ಹಿಜಾಬ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಇದನ್ನೂ ಓದಿ: ಕಂಬಳಿಹುಳ ಸಿನಿಮಾದ ಫಸ್ಟ್ ಝಲಕ್ ಬಿಡುಗಡೆ ಮಾಡಿದ ನಟ ಶ್ರೀಮುರುಳಿ

ಆದರೆ ಉಪೇಂದ್ರ ಈ ಹೊಸ ಅವತಾರಕ್ಕೆ ಕಾರಣ ಅವರ ಮುಂದಿನ ಸಿನಿಮಾ 'ಹೋಮ್ ಮಿನಿಸ್ಟರ್' (Home Minister). ಮಹಿಳೆಯರ ಜವಾಬ್ದಾರಿಯನ್ನು ಈ ಸಿನಿಮಾದಲ್ಲಿ ಉಪೇಂದ್ರ ಹೊತ್ತುಕೊಂಡಿದ್ದಾರೆ. ಏಪ್ರಿಲ್ 1ರಂದು ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಕಾರಣಕ್ಕೆ ಆ ಚಿತ್ರದ ಒಂದು ಫೋಟೋವನ್ನು ಡಿಪಿಯಾಗಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News