Samantha : 5 ಗಂಟೆ ಅದನ್ನ ಮಾಡಿದ್ರೂ ನೆಮ್ಮದಿ ಇಲ್ವಂತೆ ನಟಿ ಸಮಂತಾಗೆ..! 

Samantha health : ಬಹುಭಾಷಾ ನಟಿ ಸಮಂತಾ ಸಾಕಷ್ಟು ಬಾರಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಧ್ಯ ಸ್ಯಾಮ್‌ ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - Krishna N K | Last Updated : Mar 16, 2024, 07:26 PM IST
  • ನಟಿ ಸಮಂತಾ ಕುರಿತ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗುತ್ತಿವೆ.
  • ಆರೋಗ್ಯ ಸಮಸ್ಯೆಯಿಂದ ಹಿಡಿದು ಅವರ ವ್ಯಯಕ್ತಿಕ ವಿಚಾರಗಳು ಬಹಿರಂಗವಾಗುತ್ತಿವೆ.
  • ಸ್ಯಾಮ್‌ ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
Samantha : 5 ಗಂಟೆ ಅದನ್ನ ಮಾಡಿದ್ರೂ ನೆಮ್ಮದಿ ಇಲ್ವಂತೆ ನಟಿ ಸಮಂತಾಗೆ..!  title=
Samantha Ruth Prabhu

Samantha Ruth Prabhu : ಇತ್ತೀಚಿಗೆ ನಟಿ ಸಮಂತಾ ಕುರಿತ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗುತ್ತಿವೆ. ಆರೋಗ್ಯ ಸಮಸ್ಯೆಯಿಂದ ಹಿಡಿದು ಅವರ ವ್ಯಯಕ್ತಿಕ ವಿಚಾರಗಳು ಬಹಿರಂಗವಾಗುತ್ತಿವೆ. ಅಲ್ಲದೆ, ಸಿನಿಮಾದಿಂದ ಕೊಂಚ ಕಾಲ ದೂರ ಉಳಿಯಲು ನಿರ್ಧರಿಸಿರುವ ನಟಿ ಗೆಳೆಯರ ಜೊತೆ ಟ್ರೀಪ್‌ ಮಾಡುತ್ತಿದ್ದಾರೆ. ಈ ಕುರಿತು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹೌದು.. ನಟಿ ಸಮಂತಾ ಡಿವೋರ್ಸ್‌ ಬಳಿಕ ತುಂಬಾ ಕ್ಷೀಣಿಸಿದ್ದಾರೆ. ಅಲ್ಲದೆ, ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆ ಅವರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ನಟನೆಯಿಂದ ದೂರ ಉಳಿದಿರುವ ಸ್ಯಾಮ್‌ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ಟಚ್‌ನಲ್ಲಿದ್ದಾರೆ. ಆಗಾಗ ತಮ್ಮ ವಯಕ್ತಿಕ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುತ್ತಿರುತ್ತಾರೆ.

ಇದನ್ನೂ ಓದಿ: ರವೀನಾ ಟಂಡನ್ ಪುತ್ರಿ ಇವರೇ ನೋಡಿ... ಅಮ್ಮನನ್ನೂ ಮೀರಿಸುವ ಸುಂದರಿ.!

ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು. ಸಧ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.‍ ಶೀಘ್ರವೇ  ಶೂಟಿಂಗಲ್‌ನಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಸಮಂತಾ ಹೇಳಿಕೊಂಡಿದ್ದ ತಮ್ಮ ಕೆಲವು ಪರ್ಸನಲ್ ಸೀಕ್ರೆಟ್‌ಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 

ಇಂಡಿಯಾ ಟುಡೇ ಕಾನ್ ಕ್ಲೇವ್ 2024ರಲ್ಲಿ ಭಾಗವಹಿಸಿದ್ದ ಸಮಂತಾ ಹೆಚ್ಚು ಕೆಲಸದ ನಡುವೆ ಕೇವಲ 5 ಗಂಟೆಗಳ ಕಾಲ ನಿದ್ರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸಿನಿ ಇಂಡಸ್ಟ್ರಿಯಲ್ಲಿ ಟಾಪ್ ಹಿರೋಯಿನ್‌ ಆಗಿ ಮಿಂಚುತ್ತಿದ್ದರೂ ಸಹ ಅವರಿಗೆ ನೆಮ್ಮದಿ ಇಲ್ಲ, ಲೈಫ್‌ ಅನ್ನು ಎಂಜಾಯ್ ಮಾಡಲಾಗುತ್ತಿಲ್ಲ ಅಂತ ಸ್ಯಾಮ್‌ ನೋವನ್ನು ತೋಡಿಕೊಂಡಿದ್ದಾರೆ. ಈ ಮಾತು ಕೇಳಿ ಅವರ ಅಭಿಮಾನಿಗಳು ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ:ಪ್ರಿಯಾಂಕಾ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿ ಇಶಾ ಅಂಬಾನಿಯೇ ಶಾಕ್‌ ಆಗ್ಬೇಕು..!

ಟಾಲಿವುಡ್‌ ನಟ ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ಸಖತ್‌ ಆಕ್ಟಿವ್‌ ಆಗಿದ್ದರು. ಅದ್ರೆ ಮೈಯೋಸಿಟಿಸ್‌ ಖಾಯಿಲೆ ಅವರ ನೆಮ್ಮದಿ ಕಸಿದುಕೊಂಡಿತು. ಸಧ್ಯ ಇದರಿಂದ ಗುಣಮುಖರಾಗಿರುವ ಸ್ಯಾಮ್‌ ತೆರೆಗೆ ಬರಲು ರೆಡಿಯಾಗಿದ್ದಾರೆ. ಈಗಾಗಲೇ ತಮಿಳು ಸ್ಟಾರ್ ನಟ ವಿಜಯ್ ಜೊತೆ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ ಎಂಬ ವರದಿ ಕೂಡ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News