Most Popular Heroines: 10ನೇ ಸ್ಥಾನಕ್ಕಿಳಿದ ರಶ್ಮಿಕಾ! ಭಾರತದ ನಂ.1 ಪಾಪ್ಯುಲರ್ ನಟಿ ಯಾರು ಗೊತ್ತಾ?

Most popular female star in india: ಕೆಲವು ಸಮಯಗಳ ಹಿಂದೆ ವಿರಾಮ ಪಡೆದಿದ್ದ ನಟಿ ಸಮಂತಾ ಇದೀಗ ಮತ್ತೆ ತೆರೆ ಮೇಲೆ ಕಾಣಿಸಿಕೊಂಡು ತಮ್ಮ ಛಾಪು ಮೆರೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿ ಹಿಟ್ ಕಂಡಿದ್ದ ಸಮಂತಾ ಕೆಲ ದಿನಗಳ ಹಿಂದೆಯಷ್ಟೇ ಮಯೋಸಿಟಿಸ್ ಕಾಯಿಲೆಗೆ ತುತ್ತಾಗಿದ್ದರು.

Written by - Bhavishya Shetty | Last Updated : Jul 26, 2023, 10:07 AM IST
    • ಭಾರತದ ಅತ್ಯಂತ ಜನಪ್ರಿಯ ಮಹಿಳಾ ತಾರೆಯರು ಯಾರೆಂಬ ಪಟ್ಟಿಯನ್ನು ಬಿಡುಗಡೆ
    • ಸದ್ಯ ಟಾಪ್ 10 ಪಟ್ಟಿಯಲ್ಲಿ ನಟಿ ಸಮಂತಾ ನಂಬರ್ 1 ಸ್ಥಾನದಲ್ಲಿದ್ದಾರೆ
    • ಜನಪ್ರಿಯ ಆನ್‌ಲೈನ್ ಸಂಶೋಧನಾ ಕಂಪನಿ ಓರ್ಮ್ಯಾಕ್ಸ್ ನಡೆಸಿದ ಸಮೀಕ್ಷೆ
Most Popular Heroines: 10ನೇ ಸ್ಥಾನಕ್ಕಿಳಿದ ರಶ್ಮಿಕಾ! ಭಾರತದ ನಂ.1 ಪಾಪ್ಯುಲರ್ ನಟಿ ಯಾರು ಗೊತ್ತಾ? title=
Most Popular Heroines

Most popular female star in india: ಇತ್ತೀಚಿಗೆಯಷ್ಟೇ ಜನಪ್ರಿಯ ಆನ್‌ಲೈನ್ ರಿಸರ್ಚ್ ಕಂಪನಿ ಓರ್ಮ್ಯಾಕ್ಸ್ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಭಾರತದ ಅತ್ಯಂತ ಜನಪ್ರಿಯ ಮಹಿಳಾ ತಾರೆಯರು ಯಾರೆಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಟಾಪ್ 10 ಪಟ್ಟಿಯಲ್ಲಿ ನಟಿ ಸಮಂತಾ ನಂಬರ್ 1 ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IND vs WI: ಇಂಡೋ-ವಿಂಡೀಸ್ ಸರಣಿ ಮಧ್ಯೆ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್ ನಿವೃತ್ತಿ ಘೋಷಣೆ!

ಕೆಲವು ಸಮಯಗಳ ಹಿಂದೆ ವಿರಾಮ ಪಡೆದಿದ್ದ ನಟಿ ಸಮಂತಾ ಇದೀಗ ಮತ್ತೆ ತೆರೆ ಮೇಲೆ ಕಾಣಿಸಿಕೊಂಡು ತಮ್ಮ ಛಾಪು ಮೆರೆದಿದ್ದಾರೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿ ಹಿಟ್ ಕಂಡಿದ್ದ ಸಮಂತಾ ಕೆಲ ದಿನಗಳ ಹಿಂದೆಯಷ್ಟೇ ಮಯೋಸಿಟಿಸ್ ಕಾಯಿಲೆಗೆ ತುತ್ತಾಗಿದ್ದರು. ಈ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಸದ್ಯ ಸಮಂತಾ ಯುಎಸ್‌’ಗೆ ಹಾರಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಈ ಮಧ್ಯೆ ನಟಿ ಭಾರತ ಅತೀ ಜನಪ್ರಿಯ ಹೀರೋಯಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

 
 
 
 

 
 
 
 
 
 
 
 
 
 
 

A post shared by Ormax Media (@ormaxmedia)

 

 

ಜನಪ್ರಿಯ ಆನ್‌ಲೈನ್ ಸಂಶೋಧನಾ ಕಂಪನಿ ಓರ್ಮ್ಯಾಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಅತ್ಯಂತ ಜನಪ್ರಿಯ ಮಹಿಳಾ ತಾರೆಯರ ಪಟ್ಟಿಯಲ್ಲಿ ಸಮಂತಾ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಯಾಮ್ ಬಳಿಕ ಕ್ರಮವಾಗಿ ಆಲಿಯಾ ಭಟ್ (2), ದೀಪಿಕಾ ಪಡುಕೋಣೆ (3), ನಯನತಾರಾ (4) ಮತ್ತು ಕಾಜಲ್ ಅಗರ್ವಾಲ್ (5) ರಂತಹ ಜನಪ್ರಿಯ ನಾಯಕಿಯರು ಇದ್ದಾರೆ. ಇನ್ನು ಟಾಪ್ 10 ಪಟ್ಟಿಯನ್ನು ಗಮನಿಸಿದರೆ ತ್ರಿಶಾ (6), ಕತ್ರಿನಾ ಕೈಫ್ (7), ಕಿಯಾರಾ ಅಡ್ವಾಣಿ (8), ಕೀರ್ತಿ ಸುರೇಶ್ (9) ಮತ್ತು ರಶ್ಮಿಕಾ ಮಂದಣ್ಣ (10) ಇದ್ದಾರೆ.

ಒಂದೊಮ್ಮೆ ನ್ಯಾಶನಲ್ ಕ್ರಶ್ ಎಂದೇ ಖ್ಯಾತಿ ಪಡೆದಿದ್ದ ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ಕೊಂಚ ಕುಗ್ಗಿದಂತಿದೆ. ಇದೇ ಕಾರಣದಿಂದ ಟಾಪ್ 10 ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಒಂದಲ್ಲ, ಎರಡಲ್ಲ.. 11 ಕ್ಕೂ ಹೆಚ್ಚು ರೋಗಗಳನ್ನು ಬುಡದಿಂದಲೇ ಗುಣಪಡಿಸುತ್ತೆ 300 ವರ್ಷ ಇತಿಹಾಸವುಳ್ಳ ಈ ಮಾವು!

ಮತ್ತೊಂದೆಡೆ ಆರೋಗ್ಯ ಸಮಸ್ಯೆ ಇದ್ದರೂ ಸಹ ತನ್ನ ನಟನೆ, ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುವ ಸಮಂತಾ ಟಾಪ್ 1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ, ಪ್ಯಾನ್ ಇಂಡಿಯಾ ಲೆವೆಲ್ ನಲ್ಲೂ ಸದ್ದು ಮಾಡಿರುವ ಸಮಂತಾ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದ ಸಿಟಾಡೆಲ್‌’ನ ಭಾರತೀಯ ಆವೃತ್ತಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿರುವ ವಿಜಯ್ ದೇವರಕೊಂಡ ಅಭಿನಯದ ‘ಕುಶಿ’ ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಈ ಸಿನಿಮಾದ ‘ಆರಾಧ್ಯ’ ಮತ್ತು ‘ನಾ ರೋಜಾ ನುವ್ವೆ’ ಹಾಡು ಸಖತ್ ಟ್ರೆಂಡಿಂಗ್ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News