ಮದುವೆ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಂಡ ಸಮಂತಾ...! ತಾಯಿಯಾಗುವ ಆಸೆ ಈಡೇರುತ್ತಾ?

Samantha: ಮದುವೆ ವಿಚಾರದಲ್ಲಿ ಸಮಂತಾ ರುತ್ ಪ್ರಭು ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದ್ದಾರೆ.  ಈ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಸದ್ದು ಮಾಡುತ್ತಿದೆ.   

Written by - Savita M B | Last Updated : Nov 22, 2023, 10:10 AM IST
  • ಸಮಂತಾ ರೂತ್ ಪ್ರಭು ತುಂಬಾ ವಿಭಿನ್ನವಾಗಿ ಯೋಚಿಸುವ ನಟಿ..
  • ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮಧ್ಯಮ ವರ್ಗದ ಹುಡುಗಿ ಸಮಂತಾ
  • ಭಾರತದಾದ್ಯಂತ ಖ್ಯಾತಿ ಗಳಿಸಿದ ನಟಿ ತನ್ನ 14 ವರ್ಷಗಳ ವೃತ್ತಿ ಜೀವನದಲ್ಲಿ ಹಿಂತಿರುಗಿ ನೋಡಿಲ್ಲ.
ಮದುವೆ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಂಡ ಸಮಂತಾ...! ತಾಯಿಯಾಗುವ ಆಸೆ ಈಡೇರುತ್ತಾ? title=

Tollywood News: ಸಮಂತಾ ರೂತ್ ಪ್ರಭು ತುಂಬಾ ವಿಭಿನ್ನವಾಗಿ ಯೋಚಿಸುವ ನಟಿ.. ನಿಮ್ಮ ಇಷ್ಟದಂತೆ ಬದುಕುವುದೇ ಜೀವನ. ಒಬ್ಬರಿಗಾಗಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ನಂಬಿಕೆಯಿಂದ ಜೀವನ ನಡೆಸುತ್ತಿದ್ದಾರೆ.. ಆಕೆಯ ಈ ಭಾವನೆಗಳು ಅವಳ ಪ್ರತಿ ನಿರ್ಧಾರದಲ್ಲಿಯೂ ಪ್ರತಿಫಲಿಸುತ್ತಿರುತ್ತವೆ... 

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮಧ್ಯಮ ವರ್ಗದ ಹುಡುಗಿ ಸಮಂತಾ ಸದ್ಯ ಸೂಪರ್ ಸ್ಟಾರ್. ಭಾರತದಾದ್ಯಂತ ಖ್ಯಾತಿ ಗಳಿಸಿದ ನಟಿ ತನ್ನ 14 ವರ್ಷಗಳ ವೃತ್ತಿ ಜೀವನದಲ್ಲಿ ಹಿಂತಿರುಗಿ ನೋಡಿಲ್ಲ.. ಇದು ಅನೇಕ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡುತ್ತಾ...ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಸಮಂತಾ ಅವರ ಮೊದಲ ಚಿತ್ರ ಯೆ ಮಾಯಾ ಚೆಸಾವೆ.. ಇದು 2010 ರಲ್ಲಿ ಬಿಡುಗಡೆಯಾಯಿತು. 

ಇದನ್ನೂ ಓದಿ-ಎರಡನೇ ಮಹಾಯುದ್ಧಕ್ಕೆ ಸಜ್ಜಾಗಿರುವ ಪ್ರಭಾಸ್..! ಲೇಟೆಸ್ಟ್ ಸಿನಿಮಾದ ಕ್ರೇಜಿ ಅಪ್ಡೇಟ್‌

ಇನ್ನು ಕಳೆದ ಎರಡು ವರ್ಷಗಳಿಂದ ಸಮಂತಾ ಅವರ ವೈಯಕ್ತಿಕ ಜೀವನ ಏರಿಳಿತಗಳನ್ನು ಎದುರಿಸುತ್ತಿದೆ. ಪತಿ ನಾಗ ಚೈತನ್ಯ ಜತೆಗಿನ ಭಿನ್ನಾಭಿಪ್ರಾಯ ತಲೆದೋರಿ ಅವರೊಂದಿಗೆ ವಿಚ್ಛೇದನ ಪಡೆದರು. ಈ ವಿಚಾರವಾಗಿ ಅವರು ಆರೋಪ, ಅನೇಕ ಟ್ರೋಲ್‌ಗಳನ್ನು ಎದುರಿಸಿದರು. ಆಗ ನಟಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದು.. ವಿಚ್ಛೆಧನ ಸಮಂತಾ ಅವರನ್ನು ಒಂದು ಗುಂಪು ಮೂಲೆಗುಂಪು ಮಾಡಿದೆ ಎಂಬ ವಾದವಿದೆ. 

ಇದೀಗ ವಿಚ್ಛೇದನದ ನೋವಿನಿಂದ ಹೊರಬಂದ ಆಕೆಗೆ, ಮತ್ತೊಂದು ಸಮಸ್ಯೆ ಸುತ್ತುವರೆದಿದೆ.. ಅದೇ ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಗೆ.. ಸಮಂತಾ ಒಂದು ವರ್ಷದಿಂದ ಈ ಕಾಯಿಲೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಇತ್ತೀಚೆಗಷ್ಟೇ ಸಮಂತಾ ಸಿನಿಮಾಗಳಿಗೂ ಬ್ರೇಕ್ ಕೊಟ್ಟಿದ್ದರು.

ಇದೇ ವೇಳೆ ಸಮಂತಾ ದಾಂಪತ್ಯ ಜೀವನದ ಕುರಿತು ಸುದ್ದಿಯೊಂದು ಹರಿದಾಡುತ್ತಿದೆ.. ಪ್ರಸ್ತುತ 36 ವಯಸ್ಸಿನಲ್ಲಿರುವ ನಟಿಗೆ ಬೇಗ ಮದುವೆಯಾಗು ಎಂದು ಪೋಷಕರಿಂದ ಒತ್ತಡ ಹೇರಲಾಗಿದೆ ಎಂದು ಸಹ ವರದಿಯಾಗಿದೆ.... 

ಇದನ್ನೂ ಓದಿ-ಮಾಜಿ ವಿಶ್ವ ಸುಂದರಿ.. ಬಾಲಿವುಡ್‌ ನಾಯಕಿ.. ಐಶ್ವರ್ಯಾ ರೈ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

ಆದರೆ ಸಮಂತಾಗೆ ಜೀವನದಲ್ಲಿ ಮದುವೆಯಾಗುವ ಯೋಚನೆಯೇ ಇಲ್ಲ. ಇಂದಿನಂತೆ ಮುಂದೆಯೂ ಅವರು ಏಕಾಂಗಿಯಾಗಿ ಉಳಿಯಲು ಬಯಸುತ್ತಾರೆ ಎನ್ನಲಾಗಿದೆ.. ಉಳಿದ ಜೀವನವನ್ನು ನಟನೆ ಮತ್ತು ಸಮಾಜಸೇವೆಗೆ ಮುಡಿಪಿಡುವ ನಿರೀಕ್ಷೆಯಿದೆ.. ಆದರೆ ಇದೀಗ ಸಮಂತಾ ತಾಯಿಯಾಗುವ ಆಸೆಯ ಕುರಿತು ಸುದ್ದಿಯೊಂದು ಹರಿದಾಡುತ್ತಿದೆ.. 

ಹೌದು ನಟಿ ಸಮಂತಾ ತಾಯಿಯಾಗುವ ಆಶಯ ವಿಭಿನ್ನ ರೀತಿಯಲ್ಲಿ ನೆರವೇರುತ್ತಿದ್ದು.. ಭವಿಷ್ಯದಲ್ಲಿ ನಟಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸಿದ್ದಾಳೆ ಎಂದು ವರದಿಯಾಗಿದೆ.. ಸದ್ಯ ಈ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News