ಹೊಸ ಪ್ರೊಡಕ್ಷನ್ ಹೌಸ್ ಘೋಷಿಸಿದ ಸಮಂತಾ… ನಿರ್ಮಾಣ ಸಂಸ್ಥೆಗೆ ಸ್ಯಾಮ್ ಇಟ್ಟಿದ್ದು ಈ ಹೆಸರು

Samantha Production House Tralala Moving Pictures: ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಭಾನುವಾರದಂದು ತಮ್ಮ ಬ್ಯಾನರ್ ‘ತ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಅನ್ನು ಪ್ರಾರಂಭಿಸುವುದರೊಂದಿಗೆ ನಿರ್ಮಾಣ ಕ್ಷೇತ್ರಕ್ಕೆ ಕಾಲಿಡುವುದಾಗಿ ಘೋಷಿಸಿದ್ದಾರೆ. 

Written by - Bhavishya Shetty | Last Updated : Dec 10, 2023, 11:25 PM IST
    • ಬಹುಭಾಷಾ ನಟಿ ಸಮಂತಾ ರುತ್ ಪ್ರಭು
    • ಸಮಂತಾ ರುತ್ ಪ್ರಭು ಹೊಸ ಪ್ರೊಡಕ್ಷನ್ ಹೌಸ್
    • ನಿರ್ಮಾಣ ಕ್ಷೇತ್ರಕ್ಕೆ ಕಾಲಿಡುವುದಾಗಿ ಘೋಷಿಸಿದ ನಟಿ
ಹೊಸ ಪ್ರೊಡಕ್ಷನ್ ಹೌಸ್ ಘೋಷಿಸಿದ ಸಮಂತಾ… ನಿರ್ಮಾಣ ಸಂಸ್ಥೆಗೆ ಸ್ಯಾಮ್ ಇಟ್ಟಿದ್ದು ಈ ಹೆಸರು title=
Samantha Ruth Prabhu

ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಭಾನುವಾರದಂದು ತಮ್ಮ ಬ್ಯಾನರ್ ‘ತ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಅನ್ನು ಪ್ರಾರಂಭಿಸುವುದರೊಂದಿಗೆ ನಿರ್ಮಾಣ ಕ್ಷೇತ್ರಕ್ಕೆ ಕಾಲಿಡುವುದಾಗಿ ಘೋಷಿಸಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಮಿಂಚಿ ಸಖತ್ ಹೆಸರು ಮಾಡಿರುವ ಸ್ಯಾಮ್ ಇದೀಗ ಹೊಸ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ಶಾಕ್: ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಲ್ಲ ಈ ಪವರ್ ಫುಲ್ ವೇಗಿ!

"ನನ್ನ ಪ್ರೊಡಕ್ಷನ್ ಹೌಸ್ ತ್ರಲಾಲಾ ಮೂವಿಂಗ್ ಪಿಕ್ಚರ್ಸ್ @tralalamovingpictures ಅನ್ನು ಘೋಷಿಸಲು ತುಂಬಾ ಉತ್ಸುಕನಾಗಿದ್ದೇನೆ. ಇದು ಹೊಸ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ವಿಷಯವನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿದೆ" ಎಂದು ನಟಿ ಹೇಳಿದ್ದಾರೆ.

ಸಮಂತಾ ನಿರ್ಮಾಣ ಉದ್ಯಮಕ್ಕಾಗಿ, ಹೈದರಾಬಾದ್ ಮೂಲದ ಮನರಂಜನಾ ಕಂಪನಿ ಮಂಡೋವಾ ಮೀಡಿಯಾ ವರ್ಕ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ.

"ನಾವು ಚಲನಚಿತ್ರ, ವೆಬ್ ಮತ್ತು ಟಿವಿ ಮತ್ತು ವಿವಿಧ ಸ್ವರೂಪಗಳಲ್ಲಿ ಕಂಟೆಂಟ್ ಅನ್ನು ನೋಡುತ್ತೇವೆ, ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ" ಎಂದು ಹಿಮಾಂಕ್ ದುವುರ್ರು ಹೇಳಿದ್ದಾರೆ. ಹಿಮಾಂಕ್ ಮಾಂಡೋವಾ ಮೀಡಿಯಾ ವರ್ಕ್ಸ್‌’ನ ಸಂಸ್ಥಾಪಕ.

ಇದನ್ನೂ ಓದಿ: ಸೊಸೆ ಐಶ್ವರ್ಯಾರನ್ನ ಅನ್’ಫಾಲೋ ಮಾಡಿದ ಬೆನ್ನಲ್ಲೇ ಅಮಿತಾಬ್ ವಿಚಿತ್ರ ಪೋಸ್ಟ್!

ಸಮಂತಾ ಇತ್ತೀಚೆಗೆ ತೆಲುಗು ಚಲನಚಿತ್ರ "ಕುಶಿ" ನಲ್ಲಿ ವಿಜಯ್ ದೇವರಕೊಂಡ ಜೊತೆಯಾಗಿ ಕಾಣಿಸಿಕೊಂಡಿದ್ದರು. ಮುಂದೆ ಪ್ರೈಮ್ ವಿಡಿಯೋದ ಜಾಗತಿಕ ಸರಣಿ "ಸಿಟಾಡೆಲ್" ನ ಭಾರತದ ಅಧ್ಯಾಯದಲ್ಲಿ ವರುಣ್ ಧವನ್ ಜೊತೆಗೆ ನಟಿಸಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News