Salman Khan: 'ಈದ್' ದಿನದಂದೇ ಸಲ್ಮಾನ್ ಖಾನ್ ನ 'ರಾಧೆ' ಎಂಟ್ರಿ..!

''ಈದ್ ಬಗ್ಗೆ ಕಮಿಟ್ಮೆಂಟ್ ಕೊಟ್ಟಿದ್ದೆ. ಹೀಗಾಗಿ ಈದ್ ಸಂದರ್ಭದಲ್ಲೇ ಬರ್ತಿನಿ'' ಅಂತಲೂ ಟ್ವೀಟ್ ನಲ್ಲಿ ಸಲ್ಮಾನ್ ಖಾನ್ ತಿಳಿಸಿದ್ದಾರೆ.

Last Updated : Mar 13, 2021, 06:41 PM IST
  • ಬಾಲಿವುಡ್ ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಗೂ ರಂಜಾನ್ ಹಬ್ಬಕ್ಕೂ ಬಿಡಿಸಲಾರದ ನಂಟು.
  • ಸಲ್ಮಾನ್ ಖಾನ್ ಅಭಿನಯದ ಹೊಸ ಸಿನಿಮಾ 'ರಾಧೆ' ಈ ವರ್ಷದ ಈದ್ ಸಂದರ್ಭದಲ್ಲಿ.. ಅಂದ್ರೆ ಮೇ 13 ರಂದು ತೆರೆಗೆ ಬರಲಿದೆ.
  • ''ಈದ್ ಬಗ್ಗೆ ಕಮಿಟ್ಮೆಂಟ್ ಕೊಟ್ಟಿದ್ದೆ. ಹೀಗಾಗಿ ಈದ್ ಸಂದರ್ಭದಲ್ಲೇ ಬರ್ತಿನಿ'' ಅಂತಲೂ ಟ್ವೀಟ್ ನಲ್ಲಿ ಸಲ್ಮಾನ್ ಖಾನ್ ತಿಳಿಸಿದ್ದಾರೆ.
Salman Khan: 'ಈದ್' ದಿನದಂದೇ ಸಲ್ಮಾನ್ ಖಾನ್ ನ 'ರಾಧೆ' ಎಂಟ್ರಿ..! title=

ಬಾಲಿವುಡ್ ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಗೂ ರಂಜಾನ್ ಹಬ್ಬಕ್ಕೂ ಬಿಡಿಸಲಾರದ ನಂಟು. ಈದ್ ಸಂದರ್ಭದಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಚಿತ್ರಗಳೆಲ್ಲ ಭರ್ಜರಿ ಯಶಸ್ಸು ಕಂಡಿವೆ. ಕಳೆದ ಒಂದು ದಶಕದಿಂದಲೂ ಈದ್ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರುವ ಸಂಪ್ರದಾಯವನ್ನು ಸಲ್ಮಾನ್ ಖಾನ್ ಪಾಲಿಸುತ್ತಿದ್ದಾರೆ. ಈ ವರ್ಷವೂ ಅದೇ ಸಂಪ್ರದಾಯವನ್ನು ಮುಂದುವರೆಸಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ.

ಸಲ್ಮಾನ್ ಖಾನ್(Salman Khan) ಅಭಿನಯದ ಹೊಸ ಸಿನಿಮಾ 'ರಾಧೆ' ಈ ವರ್ಷದ ಈದ್ ಸಂದರ್ಭದಲ್ಲಿ.. ಅಂದ್ರೆ ಮೇ 13 ರಂದು ತೆರೆಗೆ ಬರಲಿದೆ. ಹಾಗಂತ ಖುದ್ದು ಸಲ್ಮಾನ್ ಖಾನ್ ತಿಳಿಸಿದ್ದಾರೆ. 'ರಾಧೆ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ನಟಿ ಕಂಗನಾ ರನೌತ್ ಮೇಲೆ ಕಾಪಿರೈಟ್ ಉಲ್ಲಂಘನೆ ಪ್ರಕರಣ ದಾಖಲು

''ಈದ್ ಬಗ್ಗೆ ಕಮಿಟ್ಮೆಂಟ್ ಕೊಟ್ಟಿದ್ದೆ. ಹೀಗಾಗಿ ಈದ್ ಸಂದರ್ಭದಲ್ಲೇ ಬರ್ತಿನಿ'' ಅಂತಲೂ ಟ್ವೀಟ್(Tweet) ನಲ್ಲಿ ಸಲ್ಮಾನ್ ಖಾನ್ ತಿಳಿಸಿದ್ದಾರೆ. ಇವತ್ತಿಗೆ ಕರೆಕ್ಟಾಗಿ ಇನ್ನೆರಡು ತಿಂಗಳಲ್ಲಿ 'ರಾಧೆ' ಬಿಡುಗಡೆಯಾಗಲಿದೆ.

Netflix Mobile+ Plan: ಶೀಘ್ರವೇ ಭಾರತೀಯ ಬಳಕೆದಾರರಿಗೆ Netflixನಿಂದ ಅಗ್ಗದ Mobile+ Plan ಬಿಡುಗಡೆ, ಸಿಗುವ ಲಾಭಗಳೇನು?

'ರಾಧೆ' ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಸಲ್ಮಾನ್ ಖಾನ್ ಕಟ್ಟುಮಸ್ತಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. 'ರಾಧೆ'(Radh Film) ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದು, ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ದಿಶಾ ಪಟಾಣಿ, ಜಾಕಿ ಶ್ರಾಫ್, ರಣ್ದೀಪ್ ಹೂಡ ಸೇರಿದಂತೆ ದೊಡ್ಡ ತಾರಾಬಳಗವಿದೆ. ಈ ಚಿತ್ರಕ್ಕೆ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದಾರೆ.

Shreya Ghoshal ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲ ಕುತೂಹಲಕಾರಿ ಮಾಹಿತಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News